ಆ್ಯಪ್ನಗರ

ತೆರಿಗೆ ಪ್ರಾಕ್ಟೀಷನರ್‌ಗಳ ಮಸೂದೆ ತರಲು ಸರ್ವ ಪ್ರಯತ್ನ: ಡಿಸಿಎಂ ಅಶ್ವತ್ಥನಾರಾಯಣ ಭರವಸೆ

ರಾಜ್ಯದಲ್ಲಿ ಆರ್ಥಿಕತೆಗೆ ಶಿಸ್ತು ತರುವ ನಿಟ್ಟಿನಲ್ಲಿ ಸಮಾಜದ ಎಲ್ಲ ಹಂತಗಳಲ್ಲೂ ಸಮರ್ಥವಾಗಿ ಕೆಲಸ ಮಾಡುವ ಟ್ಯಾಕ್ಸ್ ಪ್ರಾಕ್ಟೀಷನರ್‌ಗಳಿಗೆ ಅನುಕೂಲವಾಗುವಂತೆ ಮಸೂದೆ ರೂಪಿಸಲು ಎಲ್ಲ ಪ್ರಯತ್ನ ನಡೆಸುವುದಾಗಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

Vijaya Karnataka Web 6 Dec 2020, 9:52 pm
ಬೆಂಗಳೂರು: ಆರ್ಥಿಕತೆಗೆ ಶಿಸ್ತು ತರುವ ನಿಟ್ಟಿನಲ್ಲಿ ಸಮಾಜದ ಎಲ್ಲ ಹಂತಗಳಲ್ಲೂ ಸಮರ್ಥವಾಗಿ ಕೆಲಸ ಮಾಡುವ ತೆರಿಗೆ ಸಾಧಕರಿಗೆ (ಟ್ಯಾಕ್ಸ್ ಪ್ರಾಕ್ಟೀಷನರ್‌ಗಳು) ಅನುಕೂಲವಾಗುವಂತೆ ಟ್ಯಾಕ್ಸ್ ಪ್ರಾಕ್ಟೀಷನರ್ ಗಳ ಮಸೂದೆ ರೂಪಿಸಲು ಸರಕಾರದ ಮಟ್ಟದಲ್ಲಿ ಎಲ್ಲ ಪ್ರಯತ್ನ ನಡೆಸುವುದಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
Vijaya Karnataka Web Ashwath narayan
ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ (ಸಂಗ್ರಹ ಚಿತ್ರ)


ಬೆಂಗಳೂರಿನಲ್ಲಿ ಭಾನುವಾರ ದಕ್ಷಿಣ ಭಾರತ ಟ್ಯಾಕ್ಸ್ ಪ್ರಾಕ್ಟೀಷನರ್‌ಗಳ ಸಂಸ್ಥೆಯ 23ನೇ ವಾರ್ಷಿಕೋತ್ಸವದಲ್ಲಿ ವರ್ಚುವಲ್ ವೇದಿಕೆ ಮೂಲಕ ಸಮಾರೋಪ ಭಾಷಣ ಮಾಡಿದ ಅವರು, ದೇಶದ ಆರ್ಥಿಕತೆಯನ್ನು ಸದೃಢವಾಗಿ ಕಟ್ಟುವಲ್ಲಿ ಟ್ಯಾಕ್ಸ್ ಪ್ರಾಕ್ಟೀಷನರ್‌ಗಳ ಪಾತ್ರ ಬಹಳ ದೊಡ್ಡದು. ಅಭಿವೃದ್ಧಿಯ ಎಲ್ಲ ಹಂತಗಳಲ್ಲೂ ಇವರ ಕೆಲಸವೂ ಮಹತ್ವದ್ದಾಗಿರುತ್ತದೆ. ರಾಜ್ಯದ ತೆರಿಗೆ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸರಕಾರ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲಿದೆ ಎಂದರು.

ಯಾವುದೇ ಬಿಸಿನೆಸ್ ಅಥವಾ ಕೈಗಾರಿಕೆ ಇನ್ನೇನನ್ನೇ ಆರಂಭ ಮಾಡಬೇಕಿದ್ದರೂ ತೆರಿಗೆ ಸಲಹೆಗಾರರ ಸೇವೆಯೇ ಅದಕ್ಕೆ ಮೊದಲ, ಮೂಲಭೂತ ಅಡಿಪಾಯ. ಎಲ್ಲ ತೆರಿಗೆಗಳ ಆಧಾರದ ಮೇಲೆ ಎಲ್ಲ ವ್ಯವಹಾರಗಳಿಗೆ ಇವರು ಶಕ್ತಿ ತುಂಬುತ್ತಾರೆ. ಇವತ್ತು ಕರ್ನಾಟಕದ ತೆರಿಗೆ ಸಂಗ್ರಹದಲ್ಲಿ ಮುಂಚೂಣಿಯಲ್ಲಿದೆ ಎಂದರೆ, ಅದಕ್ಕೆ ಟ್ಯಾಕ್ಸ್ ಪ್ರಾಕ್ಟೀಷನರ್‌ಗಳ ಕಾಣಿಕೆ ದೊಡ್ಡದು. ಈ ಹಿನ್ನೆಲೆಯಲ್ಲಿ ಟ್ಯಾಕ್ಸ್ ಪ್ರಾಕ್ಟೀಷನರ್‌ಗಳ ಸೇವೆಗೆ ಅತ್ಯಗತ್ಯವಾದ ಎಲ್ಲವನ್ನೂ ಒದಗಿಸಲಿದೆ ಎಂದು ಡಿಸಿಎಂ ನುಡಿದರು.

ಬಂದ್‌ ನಡುವೆಯೇ ₹10 ಕೋಟಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ ಡಿಸಿಎಂ ಅಶ್ವತ್ಥನಾರಾಯಣ್‌

ಟ್ಯಾಕ್ಸ್ ಪ್ರಾಕ್ಟೀಷನರ್‌ಗಳ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷೆ ನಿಖಿತಾ ಬಡೇಕಾ, ಉಪಾಧ್ಯಕ್ಷ ಮಲ್ಲಾಡಿ ಶ್ರೀನಿವಾಸ್‌, ದಕ್ಷಿಣ ವಿಭಾಗದ ಅಧ್ಯಕ್ಷ ಎಸ್.ನಂಜುಂಡ ಪ್ರಸಾದ್ ಸೇರಿ ಅನೇಕ ತೆರಿಗೆ ಸಾಧಕರು ವರ್ಚುವಲ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಗ್ರಾಮ ಪಂಚಾಯಿತಿಗಳಿಗೆ ವರ್ಷಕ್ಕೆ 1.5 ಕೋಟಿ ರೂ. ನೇರ ಅನುದಾನ: ಡಿಸಿಎಂ ಅಶ್ವಥ್‌ ನಾರಾಯಣ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ