ಆ್ಯಪ್ನಗರ

ಎಕಾನಮಿ , ಜಿಡಿಪಿ , ಗ್ರೋಥ್‌ ರೇಟ್‌ ಬಗ್ಗೆ ನಿಮಗೆಷ್ಟು ಗೊತ್ತು?

ದೇಶದ ಆರ್ಥಿಕ ವಿಚಾರದಲ್ಲಿ ಬಹು ಬಳಕೆಯಾಗುವ ಪದಗಳಿವು. ಇವುಗಳ ಬಗ್ಗೆ ಇಲ್ಲಿದೆ ಸವಿವರ ಮಾಹಿತಿ...

Vijaya Karnataka 27 Sep 2019, 7:41 am
ರಂಗಸ್ವಾಮಿ ಮೂಕನಹಳ್ಳಿ, ಆರ್ಥಿಕ ಸಲಹೆಗಾರರು
Vijaya Karnataka Web Economy

ಒಂದು ದೇಶದ ಒಟ್ಟು ಸರಕು ಉತ್ಪಾದನೆ, ಬಳಕೆ ಮತ್ತು ಮತ್ತು ಸಮಾಜದಲ್ಲಿಹಣದ ಹರಿಯುವಿಕೆಯನ್ನು ಒಗ್ಗೂಡಿಸಿ ಎಕಾನಮಿ ಎನ್ನುತ್ತಾರೆ. ಸರಳವಾಗಿ ಒಂದು ದೇಶದ ಹಣಕಾಸು ಆರೋಗ್ಯ ಹೇಳುವ ರಿಪೋರ್ಟ್‌ ಕಾರ್ಡ್‌ ಇದ್ದಹಾಗೆ. ಹೀಗೆ ದೇಶದ ಒಟ್ಟು ಆರ್ಥಿಕತೆಯನ್ನು ಅಧ್ಯಯನ ಮಾಡುವ ವಿಧಾನಕ್ಕೆ ಎಕನಾಮಿಕ್ಸ್‌ ಎನ್ನುತ್ತಾರೆ.

ಗ್ರಾಹಕರ ನಡವಳಿಕೆ, ವಸ್ತುವಿನ ಬೆಲೆ ನಿಗದಿ, ಲಾಭ, ನಷ್ಟ ಇವುಗಳ ಅಧ್ಯಯನ ಮಾಡುವುದಕ್ಕೆ ಮೈಕ್ರೋ ಎಕಾನಮಿ ಎನ್ನುತ್ತಾರೆ. ಜಿಡಿಪಿ, ಇಂಟರೆಸ್ಟ್‌ ರೇಟ್‌, ಬಿಸಿನೆಸ್‌ ಸೈಕಲ್‌ ಇಡೀ ದೇಶಕ್ಕೆ ಸಂಬಂಧಪಟ್ಟ ವಿಷಯಗಳ ಅಧ್ಯಯನಕ್ಕೆ ಮ್ಯಾಕ್ರೋ ಎಕಾನಮಿ ಎನ್ನುತ್ತಾರೆ. ಮೈಕ್ರೋ ಒಂದು ಸಮುದಾಯ, ಸಂಸ್ಥೆಗೆ ಪರಿಣಾಮ ಬೀರಬಲ್ಲವಸ್ತು -ವಿಷಯಗಳ ಅಧ್ಯಯನವಾದರೆ, ಮ್ಯಾಕ್ರೋ ದೇಶದ ಮೇಲೆ ಪ್ರಭಾವ ಬೀರುವ ವಸ್ತು ವಿಷಯಗಳ ಕುರಿತು ಅಧ್ಯಯನ ಮಾಡುತ್ತದೆ.

ಜಿ ಡಿ ಪಿ ಎಂದರೇನು?


ಗ್ರೋಸ್‌ ಡೊಮೆಸ್ಟಿಕ್‌ ಪ್ರಾಡಕ್ಟ್ ಎನ್ನುವುದು ಎಕಾನಾಮಿಯ ಗಾತ್ರ ಅಳೆಯಲು ಅಥವಾ ಜಗತ್ತಿಗೆ ನಾವಿಷ್ಟು ದೊಡ್ಡ ಸಮಾಜ, ದೇಶ ಎಂದು ಹೇಳಲು ಬಳಸುವ ಮಾನದಂಡ. ಒಂದು ದೇಶದ ಜನರ ಒಟ್ಟು ಆದಾಯ ಮತ್ತು ಆ ದೇಶದ ಒಟ್ಟು ಸರಕು -ಸೇವೆಯ ಮಾರುಕಟ್ಟೆ ಮೌಲ್ಯವನ್ನ ಜಿ ಡಿ ಪಿ ಎನ್ನುತ್ತಾರೆ. ಉದಾಹರಣೆಗೆ 120 ಕೋಟಿ ಭಾರತೀಯರ ಆದಾಯ 100 ಕೋಟಿ ಎಂದುಕೊಳ್ಳಿ. ಸರಕು -ಸೇವೆಯ ಮೌಲ್ಯ ಇನ್ನೊಂದು 100 ಕೋಟಿ ಎಂದುಕೊಳ್ಳಿ. ಆಗ ನಾವು ಜಗತ್ತಿನ ಮುಂದೆ ನಾವು 200 ಕೋಟಿ ಎಕಾನಮಿ ಎಂದು ಹೇಳಿಕೊಳ್ಳಬಹುದು. ಜಗತ್ತಿನ ಒಟ್ಟು ಜಿಡಿಪಿಯ ಇಪ್ಪತೈದು ಭಾಗ ಹೊಂದಿರುವ ಅಮೆರಿಕದ ಮೊದಲ ಸ್ಥಾನದಲ್ಲಿಅಭಾದಿತವಾಗಿದೆ. ಅಮೆರಿಕಕ್ಕೆ ಸೆಡ್ಡು ಹೊಡೆದು ನಿಂತಿರುವ ಚೀನಾ ಜಗತ್ತಿನ 15 ಭಾಗ ತನ್ನದಾಗಿಸಿಕೊಂಡು ಎರಡನೇ ಸ್ಥಾನದಲ್ಲಿದೆ. ಜಗತ್ತಿನ ಜಿಡಿಪಿಯಲ್ಲಿಭಾರತದ ಭಾಗ ಕೇವಲ ಮೂರು. ಜಗತ್ತಿನ ಮೊದಲ ಹತ್ತು ದೇಶಗಳು ಜಗತ್ತಿನ 65 ಭಾಗ ಸಂಪತ್ತಿನ ಮೇಲೆ ಒಡೆತನ ಹೊಂದಿವೆ. ಉಳಿದ 186 ದೇಶಗಳಲ್ಲಿಮಿಕ್ಕ 35 ಭಾಗ ಜಿಡಿಪಿ ಹಂಚಿಕೆಯಾಗಿದೆ.

ಗ್ರೋಥ್‌ ರೇಟ್‌ ಎಂದರೇನು?

ಗ್ರೋಥ್‌ ರೇಟ್‌ ಜಿಡಿಪಿ ಯೊಂದಿಗೆ ಬೆಸೆದುಕೊಂಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಈ ವರ್ಷ ಹೆಚ್ಚಾಯಿತೇ? ಹೌದಾದರೆ ಎಷ್ಟು ಎನ್ನುವುದನ್ನು ಸೂಚಿಸಲು ಗ್ರೋಥ್‌ ರೇಟ್‌ ಎನ್ನುತ್ತಾರೆ. ಒಟ್ಟು ರಾಷ್ಟೀಯ ಆದಾಯವನ್ನ ಜಿಡಿಪಿ ಎನ್ನುತ್ತೇವೆ. ಅದು 2018 ರಲ್ಲಿ100 ರೂಪಾಯಿ ಇತ್ತು ಎಂದು ಕೊಳ್ಳಿ. 2019 ರಲ್ಲಿ108 ರೂಪಾಯಿ ಎಂದುಕೊಳ್ಳಿ. ಇವೆರಡರ ನಡುವಿನ ಅಂತರ 8 ರೂಪಾಯಿ. 2018 ಕ್ಕೆ ಹೋಲಿಕೆ ಮಾಡಿ ನೋಡಿದರೆ ನಮ್ಮ ಜಿಡಿಪಿ 8 ಪ್ರತಿಶತ ವೃದ್ಧಿ ಹೊಂದಿದೆ ಎನ್ನಬಹುದು. ಅಂದರೆ ಗ್ರೋಥ್‌ ರೇಟ್‌ 8.

108-100 = 8. (8/100)100 = 8% .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ