ಆ್ಯಪ್ನಗರ

ಚಿನ್ನಕ್ಕಿಂತಲೂ 'ಗೋಲ್ಡ್‌ ಇಟಿಎಫ್'‌ ಖರೀದಿಯೇ ಉತ್ತಮ! ಹೇಗೆ? ಇಲ್ಲಿದೆ ಮಾಹಿತಿ

ಉಳಿತಾಯಕ್ಕಾಗಿಯೇ ಚಿನ್ನ ಖರೀದಿಸುವಿರಾದರೆ ಚಿನ್ನದ ಅಂಗಡಿಗೆ ಹೋಗಬೇಡಿ. ಗೋಲ್ಡ್‌ ಇಟಿಎಫ್‌ ಖರೀದಿಸಿ. ಅರೆ, ಇದೇನಿದು ಗೋಲ್ಡ್‌ ಇಟಿಎಫ್‌ ಎಂದು ಆಶ್ಚರ್ಯಪಡಬೇಡಿ. ಭೌತಿಕ ಚಿನ್ನಕ್ಕಿಂತಲೂ ಹೆಚ್ಚಿನ ಮೌಲ್ಯ ಗೋಲ್ಡ್‌ ಇಟಿಎಫ್‌ಗಿದೆ.

Vijaya Karnataka Web 28 Dec 2020, 10:18 am
ಬೆಂಗಳೂರು: ಚಿನ್ನವನ್ನು ಅಪಾರವಾಗಿ ಪ್ರೀತಿಸುವ ಭಾರತೀಯರು ಹಲವು ಕಾರಣಗಳಿಗಾಗಿ ಚಿನ್ನ ಖರೀದಿಸುತ್ತಾರೆ. ಹಣವನ್ನು ಉಳಿತಾಯ ಮಾಡಲು ಚಿನ್ನದ ಮೇಲೆ ಹೂಡಿಕೆ ಮಾಡುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಉಳಿತಾಯಕ್ಕಾಗಿಯೇ ಚಿನ್ನ ಖರೀದಿಸುವಿರಾದರೆ ಚಿನ್ನದ ಅಂಗಡಿಗೆ ಹೋಗಬೇಡಿ. ಗೋಲ್ಡ್‌ ಇಟಿಎಫ್‌ ಖರೀದಿಸಿ. ಅರೆ, ಇದೇನಿದು ಗೋಲ್ಡ್‌ ಇಟಿಎಫ್‌ ಎಂದು ಆಶ್ಚರ್ಯಪಡಬೇಡಿ. ಗೋಲ್ಡ್‌ ಇಟಿಎಫ್‌ ಕೂಡ ಭೌತಿಕ ಚಿನ್ನದಂತೆ, ಅದರಷ್ಟೇ ಮೌಲ್ಯ ಉಳ್ಳದ್ದು. ನಿಜ ಹೇಳಬೇಕೆಂದರೆ ಅದಕ್ಕಿಂತಲೂ ಹೆಚ್ಚಿನ ಮೌಲ್ಯ ಇದಕ್ಕಿದೆ.
Vijaya Karnataka Web etf


ಯಾಕೆಂದರೆ, ಭೌತಿಕ ಚಿನ್ನ ಕ್ಕೆ ವೇಸ್ಟೇಜ್‌ ಮತ್ತು ಮೇಕಿಂಗ್‌ ಎಂಬ ಎರಡು ರೀತಿಯ ಚಾರ್ಜ್‌ ವಿಧಿಸಲಾಗುತ್ತದೆ. ಹೀಗಾಗಿ ಚಿನ್ನವನ್ನು ಮಾರಿದಾಗ ಈ ಎರಡೂ ಶುಲ್ಕಗಳನ್ನು ಕಳೆದು ಉಳಿದ ಹಣವನ್ನು ಕೊಡತ್ತಾರೆ. ಆದರೆ, ಗೋಲ್ಡ್‌ ಇಟಿಎಫ್‌ನಲ್ಲಿಇದರ ಗೊಡವೆಯಿಲ್ಲ. ಒಂದು ಗ್ರಾಂ ಚಿನ್ನವೆಂದರೆ ಚಿನ್ನಕ್ಕಿರುವ ಅಂದಿನ ಶೇ.100ರಷ್ಟು ಮೌಲ್ಯವೂ ಹಣವಾಗಿ ನಮ್ಮ ಕೈ ಸೇರುತ್ತದೆ.

ಹೊಸ ವರ್ಷಕ್ಕೆ ₹63,000ಕ್ಕೆ ಜಿಗಿಯುತ್ತಾ ಬಂಗಾರದ ಬೆಲೆ? ತಜ್ಞರ ಮಾತಿದು!

ಅಲ್ಲದೆ ಗೋಲ್ಡ್‌ ಇಟಿಎಫ್‌ ಅನ್ನು ಯಾವುದೇ ಕ್ಷಣದಲ್ಲಾರೂ ಮಾರಬಹುದು, ಇದು ದಾಖಲೆಗಳ ರೂಪದಲ್ಲಿಇರುವುದರಿಂದ ಕಳವಾಗುವ ಅಪಾಯವೂ ಇಲ್ಲ ಇಂಥ ಹಲವು ಅನುಕೂಲಗಳು ಗೋಲ್ಡ್‌ ಇಟಿಎಫ್‌ಗೆ ಇವೆ. ಷೇರು ಖರೀದಿಸಿದ ಹಾಗೆ ಈ ಗೋಲ್ಡ್‌ ಇಟಿಎಫ್‌ಗಳನ್ನು ಖರೀದಿಸಬಹುದು.

ಚಿನ್ನದ ಅಂದಿನ ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಿ ಮಾರ್ಕೆಟ್‌ ಕಾರ್ಯಾಚರಣೆ ನಡೆಸುವ ಅವಧಿಯಲ್ಲಿ ಯಾವಾಗಲಾದರೂ ಅಂದಿನ ಬೆಲೆಗೆ ಮಾರಾಟ ಮಾಡಬಹುದು. ಗೋಲ್ಡ್‌ ಇಟಿಎಫ್‌ ಹೂಡಿಕೆಯ ಸುಲಭ ಮತ್ತು ಲಾಭದಾಯಕ ದಾರಿಯಾಗಬಲ್ಲದು.

ಚಿನ್ನ ಖರೀದಿಗೂ ಮೊದಲು ನೀವು ತಿಳಿಯಲೇಬೇಕಾದ 5 ಪ್ರಮುಖ ಅಂಶಗಳಿವು!

ಚಿನ್ನದ ಬೆಲೆ ಇಳಿಕೆಯಾದಾಗ ಖರೀದಿಸಿ ಬೆಲೆ ಏರಿಕೆಯಾದ ಕೂಡಲೇ ಮಾರಾಟ ಮಾಡಿ ಲಾಭ ಗಳಿಸಬಹುದು. ಗೋಲ್ಡ್‌ ಇಟಿಫ್‌ ಮಾತ್ರವಲ್ಲದೆ ಇಟಿಎಫ್‌ಗಳಲ್ಲಿ ಹಲವು ವಿಧಗಳಿವೆ. ಇಂಥ ಹತ್ತು ಹಲವು ಇಟಿಎಫ್‌ಗಳ ಓದುಗರಿಗೆ ತಿಳಿಸಿಕೊಡಲು ಐಸಿಐಸಿಐ ವಿಜಯ ಕರ್ನಾಟಕ ಸಹಯೋಗದೊಂದಿಗೆ ಡಿ. 28ರ ಸೋಮವಾರ 4 ಗಂಟೆಗೆ 'ಸ್ಮಾರ್ಟ್‌ ಇನ್ವೆಸ್ಟರ್‌' ಉಚಿತ ವೆಬಿನಾರ್‌ ಆಯೋಜಿಸಿದೆ. ಈ ವೆಬಿನಾರ್‌ನಲ್ಲಿ ವಿವಿಧ ರೀತಿಯ ಇಟಿಎಫ್‌ಗಳ ಕುರಿತು ತಜ್ಞರು ವಿವರಿಸಲಿದ್ದಾರೆ. ಐಸಿಐಸಿಐನ ಚಿರಂತ್‌ ಕುಮಾರ್‌ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ಗಳ ಕುರಿತು ಸರಳವಾಗಿ ವಿವರಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ