ಆ್ಯಪ್ನಗರ

ಅಷ್ಟಕ್ಕೂ ಎಟಿಎಂಗಳಲ್ಲೇಕೆ ಹಣ ಬೇಗ ಖಾಲಿಯಾಗುತ್ತಿದೆ?

ದೇಶದಲ್ಲಿ 1000 ರೂ. ಹಾಗೂ 500 ರೂ.ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದು, ಎಟಿಎಂ ಹಾಗೂ ಬ್ಯಾಂಕ್ ಮುಂದೆ ಜನರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ದೇಶಾದ್ಯಂತ ಸಾಮಾನ್ಯವಾಗಿದೆ.

ಏಜೆನ್ಸೀಸ್ 12 Nov 2016, 6:33 pm
ಹೊಸದಿಲ್ಲಿ: ದೇಶದಲ್ಲಿ 1000 ರೂ. ಹಾಗೂ 500 ರೂ.ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದು, ಎಟಿಎಂ ಹಾಗೂ ಬ್ಯಾಂಕ್ ಮುಂದೆ ಜನರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ದೇಶಾದ್ಯಂತ ಸಾಮಾನ್ಯವಾಗಿದೆ.
Vijaya Karnataka Web why atms are not working
ಅಷ್ಟಕ್ಕೂ ಎಟಿಎಂಗಳಲ್ಲೇಕೆ ಹಣ ಬೇಗ ಖಾಲಿಯಾಗುತ್ತಿದೆ?


ಈಗಾಗಲೇ ಬ್ಯಾಂಕುಗಳು ಹೊಸ 500 ರೂ ಹಾಗೂ 2000 ರೂ.ಮುಖಬೆಲೆಯ ನೋಟುಗಳನ್ನು ವಿತರಿಸುತ್ತಿದ್ದು, ಎಟಿಎಂಗಳಲ್ಲಿ ಹಣ ಅಭಾವ ಕಾಣಿಸುತ್ತಿದೆ. ಇನ್ನು ಕೆಲವು ವಾರಗಳ ಕಾಲ ಎಟಿಎಂಗಳಲ್ಲಿ 100 ರೂ.ಮುಖಬೆಲೆಯ ನೋಟುಗಳನ್ನು ಮಾತ್ರ ನೀಡಲಾಗುತ್ತದೆ. ಕಡಿಮೆ ಮುಖಬೆಲೆಯ ಹೆಚ್ಚಿನ ನೋಟುಗಳನ್ನು ಎಟಿಎಂಗಳಲ್ಲಿ ತುಂಬಿದ್ದು, ಬೇಗ ಬೇಗ ಖಾಲಿಯಾಗುತ್ತಿದೆ.

ಸಾಮಾನ್ಯವಾಗಿ ಎಟಿಎಂಗಳಲ್ಲಿ 1000 ರೂ. ಹಾಗೂ 500 ರೂ. ಮುಖಬೆಲೆಯ 88 ಲಕ್ಷ ರೂ.ಮೌಲ್ಯದ ಹಣವನ್ನು ತುಂಬಬಹುದೆಂದು ಆರ್‌ಬಿಐ ನಿಯಮ ವಿಧಿಸಿದೆ. ಎಂಟಿಎಂಗಳಲ್ಲಿ ನಾಲ್ಕು ಟ್ರೇಗಳಿರುತ್ತವೆ. ಪ್ರತಿಯೊಂದರಲ್ಲಿಯೂ 22 ಪ್ಯಾಕ್ ನೋಟುಗಳಿದ್ದು, ಪ್ರತಿ ಪ್ಯಾಕ್‌ನಲ್ಲಿಯೂ 100 ನೋಟುಗಳಿರುತ್ತವೆ. ಇದೀಗ ಹೆಚ್ಚಾಗಿ 100 ರೂ. ನೋಟುಗಳನ್ನೇ ತುಂಬುತ್ತಿದ್ದು, ಹಣದ ಮಿತಿ ಕೇವಲ 8.8 ಲಕ್ಷ ರೂ. ಮಾತ್ರವಾಗಿದೆ. ಈ ಕಾರಣದಿಂದ ಈ ಸಮಸ್ಯೆ ತಲೆದೂರುತ್ತಿದೆ.

ಎಟಿಎಂಗಳಲ್ಲಿ 2000 ರೂ.ಮೌಲ್ಯದ ನೋಟುಗಳನ್ನು ಹಾಕುವ ವ್ಯವಸ್ಥೆಯಿನ್ನೂ ಆಗಿಲ್ಲ. ಅಲ್ಲದೇ ಹಳೇ ನೋಟುಗಳನ್ನು ತೆಗೆದು, ಇದೀಗ ಚಲಾವಣೆಯಲ್ಲಿರುವ ನೋಟುಗಳನ್ನಿಡುವ ವ್ಯವಸ್ಥೆಯೂ ಕೆಲವೆಡೆ ಆಗಬೇಕಿದೆ.

'ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಬ್ಯಾಂಕ್‌ಗಳಿಗೂ ಕಾಲವಕಾಶ ಬೇಕಾದ ಕಾರಣ ಈ ಸಮಸ್ಯೆ ಇನ್ನೂ ಕೆಲವು ದಿನಗಳ ಮುಂದುವರಿಯಲಿದೆ. ಒಮ್ಮೆ ಎಟಿಎಂಗಳು ಸರಿಯಾಗಿ ಕಾರ್ಯನಿರ್ವಹಿಸಲು ಆರಂಭಿಸದ ಕೂಡಲೇ, ಪ್ರತೀ ಕಾರ್ಡಿಗೆ ದಿನಕ್ಕೆ 2 ಸಾವಿರ ರೂ.ನಷ್ಟು ಹಣವನ್ನು ನ.18ರವೆರೆಗೆ ಪಡೆಯಬಹುದು. ನಂತರ ಈ ಮೌಲ್ಯವನ್ನು ದಿನಕ್ಕೆ 4,000ಕ್ಕೆ ಸೀಮಿತಗೊಳಿಸಲಾಗುವುದು,' ಎಂದು ಆರ್‌ಬಿಐ ವೆಬ್‌ಸೈಟ್‌ನಲ್ಲಿ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ