ಆ್ಯಪ್ನಗರ

ನಾಸ್ಕಾಮ್‌ ನೂತನ ಅಧ್ಯಕ್ಷರಾಗಿ ರಿಷಾದ್‌ ಪ್ರೇಮ್‌ಜೀ

ಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜೀ ಅವರ ಪುತ್ರ ರಿಷಾದ್‌ ಪ್ರೇಮ್‌ಜೀ, ಭಾರತೀಯ ಸಾಫ್ಟ್‌ವೇರ್‌ ವಲಯದ ಪ್ರಾತಿನಿಧಿಕ ಸಂಸ್ಥೆಯಾದ ನಾಸ್ಕಾಮ್‌ನ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

Vijaya Karnataka 11 Apr 2018, 10:29 am
ಹೊಸದಿಲ್ಲಿ: ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜೀ ಅವರ ಪುತ್ರ ರಿಷಾದ್‌ ಪ್ರೇಮ್‌ಜೀ, ಭಾರತೀಯ ಸಾಫ್ಟ್‌ವೇರ್‌ ವಲಯದ ಪ್ರಾತಿನಿಧಿಕ ಸಂಸ್ಥೆಯಾದ ನಾಸ್ಕಾಮ್‌ನ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
Vijaya Karnataka Web Nasscom


ವಿಪ್ರೊ ಕಂಪನಿಯ ಆಡಳಿತ ಮಂಡಳಿಯ ಸದಸ್ಯ ರಿಷಾದ್‌ ಪ್ರೇಮ್‌ಜೀ 2018-19ರ ಸಾಲಿಗೆ ನಾಸ್ಕಾಮ್‌ನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ವಿಪ್ರೊದ ಮುಖ್ಯ ಕಾರ‍್ಯತಂತ್ರ ಅಧಿಕಾರಿಯಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ. 2017-18ರ ಸಾಲಿಗೆ ನಾಸ್ಕಾಮ್‌ನ ಉಪಾಧ್ಯಕ್ಷರಾಗಿದ್ದರು. ನಾಸ್ಕಾಮ್‌ನ ಹಾಲಿ ಅಧ್ಯಕ್ಷ ರಮಣ್‌ ರಾಯ್‌ ಆಗಿದ್ದಾರೆ.

'' ನಾಸ್ಕಾಮ್‌ನ ಅಧ್ಯಕ್ಷರಾಗಿ ನೇಮಕವಾಗಿರುವುದು ಸಂತಸ ತಂದಿದೆ. ನಾಸ್ಕಾಮ್‌ನ ಹಲವಾರು ವಿಭಾಗಗಳ ಜತೆ ನಿಕಟವಾಗಿ ಸಂಪರ್ಕದಲ್ಲಿದ್ದು, ಭವಿಷ್ಯದ ಯೋಜನೆಗಳನ್ನು ರೂಪಿಸುತ್ತೇನೆ'' ಎಂದು ರಿಷಾದ್‌ ತಿಳಿಸಿದ್ದಾರೆ. ಕೇಶವ್‌ ಮುರುಗೇಶ್‌ ಅವರು ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಅವರು ಮುಂಬಯಿ ಮೂಲದ ಡಬ್ಲ್ಯುಎನ್‌ಎಸ್‌ ಗ್ಲೋಬಲ್‌ ಸವೀರ್‍ಸ್‌ ಐಟಿ ಕಂಪನಿಯ ಸಿಇಒ ಆಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ