ಆ್ಯಪ್ನಗರ

ಭಾರತದಲ್ಲಿ ಕಾರ್ಮಿಕರ ಮಾಸಿಕ ಕನಿಷ್ಠ ದಿನಗೂಲಿ ಪಾಕಿಸ್ತಾನಕ್ಕಿಂತಲೂ ಕಡಿಮೆ!

ಭಾರತದಲ್ಲಿ ಕಾರ್ಮಿಕರ ಮಾಸಿಕ ಕನಿಷ್ಠ ಸರಾಸರಿ ವೇತನ 4,300 ರೂಪಾಯಿಗಳಿದ್ದರೆ, ಪಾಕಿಸ್ತಾನದಲ್ಲಿ9,820 ರೂಪಾಯಿ ಇದೆ ಎಂದು ವಿಶ್ವಸಂಸ್ಥೆಯ ಕಾರ್ಮಿಕ ವಿಭಾಗದ ಅಧ್ಯಯನ ವರದಿ ತಿಳಿಸಿದೆ.

Agencies 5 Dec 2020, 8:32 pm
ಹೊಸದಿಲ್ಲಿ: ಭಾರತದಲ್ಲಿ ದಿನಗೂಲಿ ಕಾರ್ಮಿಕರ ಮಾಸಿಕ ಕನಿಷ್ಠ ಸರಾಸರಿ ವೇತನ 4,300 ರೂ.ಗಳಿದ್ದರೆ, ಪಾಕಿಸ್ತಾನದಲ್ಲಿ 9,820 ರೂ. ಇದೆ ಎಂದು ವಿಶ್ವಸಂಸ್ಥೆಯ ಕಾರ್ಮಿಕ ವಿಭಾಗದ ಅಧ್ಯಯನ ವರದಿ ತಿಳಿಸಿದೆ.
Vijaya Karnataka Web Narega
ಸಾಂದರ್ಭಿಕ ಚಿತ್ರ


ಭಾರತದಲ್ಲಿ ಒಟ್ಟಾರೆಯಾಗಿ ದಿನಗೂಲಿ ಕಾರ್ಮಿಕರ ಕನಿಷ್ಠ ವೇತನವು ಪಾಕಿಸ್ತಾನ, ಶ್ರೀಲಂಕಾ, ನೇಪಾಳದಲ್ಲಿರುವುದಕ್ಕಿಂತಲೂ ಕಡಿಮೆ ಎಂದು ವರದಿ ತಿಳಿಸಿದೆ. ಲಾಕ್‌ ಡೌನ್‌ ಅವಧಿಯ ಮೊದಲ 40 ದಿನಗಳಲ್ಲಿ ದಿನಗೂಲಿ ಕಾರ್ಮಿಕರಿಗೆ ಯಾವುದೇ ವೇತನ ಸಿಕ್ಕಿರಲಿಲ್ಲ. ಇದರ ಪರಿಣಾಮ ವಾರ್ಷಿಕ ಆದಾಯದಲ್ಲಿ ದಿನಗೂಲಿ ಕಾರ್ಮಿಕರಿಗೆ ಶೇಕಡಾ 22‌ರಷ್ಟು ಕಡಿತವಾದಂತಾಗಿದೆ. ಸಂಘಟಿತ ವಲಯದ ಕಾರ್ಮಿಕರ ಸ್ಥಿತಿ ಸುಧಾರಿಸಿದ್ದು, ಅವರಿಗೆ ಆಗಿರುವ ವಾರ್ಷಿಕ ವೇತನ ನಷ್ಟ ಶೇ.3.6 ಎಂದು ವರದಿ ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ಸರಾಸರಿ ದಿನಗೂಲಿ ವೇತನ 9,720 ರೂ.ಗಳಾಗಿದೆ. ಚೀನಾದಲ್ಲಿ 7,060 ರೂ, ನೇಪಾಳದಲ್ಲಿ 7,920 ರೂ, ಭಾರತದಲ್ಲಿ 4,300 ರೂ, ಶ್ರೀಲಂಕಾದಲ್ಲಿ 4,940 ರೂ. ಇದೆ ಎಂದು ವರದಿ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ