ಆ್ಯಪ್ನಗರ

ಆಮದು ಸುಂಕ ಹೆಚ್ಚಳ: ಟಿವಿ, ವಾಷಿಂಗ್‌ ಮೆಶೀನ್‌, ಫ್ರಿಡ್ಜ್‌ ದುಬಾರಿ ಸಂಭವ

ಭಾರತವು ಮೇಕ್‌ ಇನ್‌ ಇಂಡಿಯಾ ಅಭಿಯಾನಕ್ಕೆ ಆದ್ಯತೆ ನೀಡುವ ಸಲುವಾಗಿ ಟಿವಿ, ವಾಷಿಂಗ್‌ ಮೆಶೀನ್‌, ರೆಫ್ರಿಜರೇಟರ್‌ ಮೊದಲಾದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಏರಿಸಲಿದೆ. ಸ್ವದೇಶಿ ಉತ್ಪಾದನೆ, ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲು ಹಾಗೂ ಆಮದನ್ನು ತಗ್ಗಿಸಲು ಸರಕಾರ ತೆಗೆದುಕೊಂಡಿರುವ ಈ ಕ್ರಮ ಸ್ವಾಗತಾರ್ಹವಾದರೂ, ತಾತ್ಕಾಲಿಕವಾಗಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ನಿರೀಕ್ಷೆ ಇದೆ.

Vijaya Karnataka 5 Aug 2018, 9:41 am
ಹೊಸದಿಲ್ಲಿ : ಭಾರತವು ಮೇಕ್‌ ಇನ್‌ ಇಂಡಿಯಾ ಅಭಿಯಾನಕ್ಕೆ ಆದ್ಯತೆ ನೀಡುವ ಸಲುವಾಗಿ ಟಿವಿ, ವಾಷಿಂಗ್‌ ಮೆಶೀನ್‌, ರೆಫ್ರಿಜರೇಟರ್‌ ಮೊದಲಾದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಏರಿಸಲಿದೆ. ಸ್ವದೇಶಿ ಉತ್ಪಾದನೆ, ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲು ಹಾಗೂ ಆಮದನ್ನು ತಗ್ಗಿಸಲು ಸರಕಾರ ತೆಗೆದುಕೊಂಡಿರುವ ಈ ಕ್ರಮ ಸ್ವಾಗತಾರ್ಹವಾದರೂ, ತಾತ್ಕಾಲಿಕವಾಗಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ನಿರೀಕ್ಷೆ ಇದೆ.
Vijaya Karnataka Web tv


ದೇಶದಲ್ಲಿಯೇ ಮೊಬೈಲ್‌ ಉತ್ಪಾದನೆಯನ್ನು ಹೆಚ್ಚಿಸಲು ಇಂಥ ಉಪಕ್ರಮವನ್ನು ಸರಕಾರ ತೆಗೆದುಕೊಂಡು ಯಶಸ್ವಿಯಾಗಿತ್ತು. ಇದೀಗ ಎಲೆಕ್ಟ್ರಾನಿಕ್ಸ್‌ ಮತ್ತು ಟೆಲಿಕಾಂ ವಲಯದ ಉತ್ಪನ್ನಗಳಿಗೂ ಸ್ವದೇಶಿ ಉತ್ಪಾದನೆಗೆ ಉತ್ತೇಜನ ನೀಡಲು ಇಂಥ ಕ್ರಮದ ಅಗತ್ಯ ಇದೆ ಎನ್ನುತ್ತಾರೆ ಹಿರಿಯ ಸರಕಾರಿ ಅಧಿಕಾರಿಗಳು.

ಪ್ರತಿ ವರ್ಷ 200 ಕೋಟಿ ಡಾಲರ್‌ (13,600 ಕೋಟಿ ರೂ.) ಮೌಲ್ಯದ ವಾಷಿಂಗ್‌ ಮೆಶೀನ್‌, ಎಸಿ, ಟಿವಿ, ರೆಫ್ರಿಜರೇಟರ್‌ ಇತ್ಯಾದಿಗಳು ಆಮದಾಗುತ್ತವೆ. ಸ್ಥಳೀಯ ಕಂಪನಿಗಳು ಶೇ.20ರಷ್ಟು ಆಮದು ಸುಂಕಕ್ಕೆ ಲಾಬಿ ನಡೆಸುತ್ತಿವೆ.

ಅಮೆರಿಕದಿಂದ ಭಾರತಕ್ಕೆ ಆಮದಾಗುವ 29 ಉತ್ಪನ್ನಗಳ ಮೇಲೆ ಸೆಪ್ಟೆಂಬರ್‌ 18ರಿಂದ ಆಮದು ಸುಂಕ ಹೆಚ್ಚಳವಾಗಲಿದೆ. ಬಾದಾಮಿ, ವಾಲ್ನಟ್‌, ಆಹಾರ ಧಾನ್ಯಗಳು ಇದರಲ್ಲಿವೆ. ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳಿಗೆ ಅಮೆರಿಕ ಆಮದು ಸುಂಕ ಏರಿಸಿದ್ದಕ್ಕೆ ಪ್ರತಿಯಾಗಿ ಭಾರತ ಈ ಕ್ರಮ ತೆಗೆದುಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ