ಆ್ಯಪ್ನಗರ

Bank holidays in November 2022| ರಾಜ್ಯೋತ್ಸವ, ಕನಕದಾಸ ಜಯಂತಿ ಸೇರಿ ನವೆಂಬರ್‌ನಲ್ಲಿ ಬ್ಯಾಂಕ್‌ಗಳಿಗಿದೆ ಹಲವು ದಿನ ರಜೆ, ಇಲ್ಲಿದೆ ಪೂರ್ಣ ಪಟ್ಟಿ

Bank holidays in November 2022 Karnataka | ನವೆಂಬರ್‌ನಲ್ಲಿ ಹಬ್ಬಗಳು, ಜಯಂತಿಗಳು, ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರದ ರಜೆಗಳು ಸೇರಿ ಒಟ್ಟು 8 ದಿನಗಳ ಕಾಲ ಕರ್ನಾಟಕದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

THE ECONOMIC TIMES 26 Oct 2022, 5:21 pm
ಹೊಸದಿಲ್ಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ ನವೆಂಬರ್‌ನಲ್ಲಿ ಹಬ್ಬಗಳು, ಜಯಂತಿಗಳು, ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರದ ರಜೆಗಳು ಸೇರಿ ಒಟ್ಟು 11 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಅಕ್ಟೋಬರ್ ತಿಂಗಳಲ್ಲಿ ಸುಮಾರು 21 ಬ್ಯಾಂಕ್ ರಜೆಗಳಿದ್ದವು.
Vijaya Karnataka Web Bank Holidays


ಬ್ಯಾಂಕ್‌ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಎಲ್ಲಾ ರಾಜ್ಯಗಳಲ್ಲು 11 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರುವುದಿಲ್ಲ. ಇದರಲ್ಲಿ ಕರ್ನಾಟಕಕ್ಕೆ ಅನ್ವಯವಾಗುವ ಬ್ಯಾಂಕ್‌ ರಜೆಗಳ ವಿವರ ಇಲ್ಲಿದೆ.

ನವೆಂಬರ್‌ನಲ್ಲಿ ಕರ್ನಾಟಕಕ್ಕೆ ಅನ್ವಯವಾಗುವ ಬ್ಯಾಂಕ್ ರಜಾದಿನಗಳು

ನವೆಂಬರ್ 1: ಮಂಗಳವಾರ - ಕನ್ನಡ ರಾಜ್ಯೋತ್ಸವ ಪ್ರಯುಕ್ತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ನವೆಂಬರ್‌ 6: ಭಾನುವಾರ - ವಾರದ ರಜೆ

ನವೆಂಬರ್ 11: ಶುಕ್ರವಾರ - ಕನಕದಾಸ ಜಯಂತಿ ನಿಮಿತ್ತ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.

ನವೆಂಬರ್‌ 12: ಶನಿವಾರ - ಎರಡನೇ ಶನಿವಾರದ ರಜೆ

ನವೆಂಬರ್‌ 13: ಭಾನುವಾರ - ವಾರದ ರಜೆ

ನವೆಂಬರ್‌ 20: ಭಾನುವಾರ - ವಾರದ ರಜೆ

ನವೆಂಬರ್‌ 26: ಶನಿವಾರ - ನಾಲ್ಕನೇ ಶನಿವಾರದ ರಜೆ

ನವೆಂಬರ್ 27: ಭಾನುವಾರ - ವಾರದ ರಜೆ

ನವೆಂಬರ್‌ನಲ್ಲಿ ಒಟ್ಟು 8 ದಿನ ಕರ್ನಾಟಕದಲ್ಲಿ ಬ್ಯಾಂಕ್‌ಗಳು ತೆರೆಯುವುದಿಲ್ಲ. ಕನಕದಾಸ ಜಯಂತಿ, ಎರಡನೇ ಶನಿವಾರ ಹಾಗೂ ಭಾನುವಾರದ ರಜೆಗಳು ಸಾಲು ಸಾಲಾಗಿ ಬರಲಿರುವುದರಿಂದ ನವೆಂಬರ್‌ 11 ರಿಂದ 13ರವರೆಗೆ ಮೂರು ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರಲಿವೆ.

ಗಮನಿಸಬೇಕಾದ ಅಂಶವೆಂದರೆ ಬ್ಯಾಂಕ್‌ ರಜೆ ದಿನಗಳಲ್ಲೂ ಎಂದಿನಂತೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಮತ್ತು ಎಟಿಎಂ ಸೇವೆಗಳು ಕಾರ್ಯನಿರ್ವಹಿಸುತ್ತವೆ. ಬ್ಯಾಂಕ್‌ ಗ್ರಾಹಕರು ಬ್ಯಾಂಕಿಂಗ್‌ ಸೇವೆಗಳಿಗಾಗಿ ಇವುಗಳ ಸಹಾಯ ಪಡೆದುಕೊಳ್ಳಬಹುದಾಗಿದೆ.

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ 'ಎಕನಾಮಿಕ್ ಟೈಮ್ಸ್' ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ