ಆ್ಯಪ್ನಗರ

ಈಗ ವಾಟ್ಸಾಪ್ ಮೂಲಕವೇ 'ಹೋಮ್‌ಲೋನ್‌' ಪಡೆಯಬಹುದು! ನೂತನ ಸೌಲಭ್ಯ ಆರಂಭಿಸಿದ HDFC!

HDFC ಬ್ಯಾಂಕ್ ತನ್ನ ಗ್ರಾಹಕರಿಗಾಗಿ ವಿಶೇಷ ಸೌಲಭ್ಯ ಆರಂಭಿಸಿದೆ. ಇದಕ್ಕಾಗಿ 'ವಾಟ್ಸಾಪ್‌ನಲ್ಲಿ ಸ್ಪಾಟ್ ಆಫರ್' ಆರಂಭಿಸಿದೆ. ಈ ಸೌಲಭ್ಯವು ವಾರದ ಎಲ್ಲ ದಿನಗಳಲ್ಲೂ ದಿನದ 24 ಗಂಟೆಯೂ ಲಭ್ಯವಿರಲಿದೆ. ವಸತಿ ಸಾಲ ಮಂಜೂರಾತಿ ಪತ್ರಕ್ಕೆ ‘ವೇಟಿಂಗ್ ಪೀರಿಯಡ್’ ಇರುವುದಿಲ್ಲ.

Edited byಬಾನುಪ್ರಸಾದ ಕೆ.ಎನ್\u200c. | Vijaya Karnataka Web 18 May 2022, 6:08 pm

ಹೈಲೈಟ್ಸ್‌:

  • ಎಚ್‌ಡಿಎಫ್‌ಸಿ ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯ ಬಿಡುಗಡೆ ಮಾಡಿದೆ
  • ಇದಕ್ಕಾಗಿ 'ಸ್ಪಾಟ್ ಆಫರ್ ಆನ್ ವಾಟ್ಸಾಪ್' ಆರಂಭಿಸಲಾಗಿದೆ.
  • ಈ ಸೌಲಭ್ಯವು ದಿನದ 24 ಗಂಟೆಯೂ ಲಭ್ಯವಿರುತ್ತದೆ.
  • ವಸತಿ ಸಾಲ ಮಂಜೂರಾತಿ ಪತ್ರಕ್ಕೆ‘ವೇಟಿಂಗ್ ಪೀರಿಯಡ್’ ಇರುವುದಿಲ್ಲ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web home loan
ಹೊಸದಿಲ್ಲಿ: ವಾಟ್ಸ್‌ಆಪ್ ಮೂಲಕ ಎರಡೇ ನಿಮಿಷಗಳಲ್ಲಿ ಗೃಹಸಾಲ ಒದಗಿಸುವ ಹೊಸ ಯೋಜನೆಯೊಂದನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಜಾರಿಗೆ ತಂದಿದೆ. ಗೃಹ ಸಾಲ ಪಡೆಯುವವರ ಅನುಕೂಲಕ್ಕಾಗಿ ಎಚ್‌ಡಿಎಫ್‌ಸಿ, 'ಸ್ಪಾಟ್ ಆಫರ್ ಆನ್ ವಾಟ್ಸ್‌ಆಪ್' ಪರಿಚಯಿಸಿದೆ.
ಸಾಲ ಪಡೆಯಲು ಬಯಸುವವರು, ಎಚ್‌ಡಿಎಫ್‌ಸಿ ವಾಟ್ಸ್‌ಆಪ್ ನಂಬರ್ (+91 9867000000)ಗೆ ಮೆಸೇಜ್ ಕಳುಹಿಸಿ, ಅಲ್ಲಿ ಕೊಟ್ಟಿರುವ ಸೂಚನೆಯ ಅನುಸಾರ, ಕೆಲವೊಂದು ವಿವರ ಮತ್ತು ದಾಖಲೆ ನೀಡಿದರೆ ಸಾಕಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಗ್ರಾಹಕರು ಒದಗಿಸುವ ಮಾಹಿತಿ ಮತ್ತು ದಾಖಲೆ ಪರಿಶೀಲಿಸಿ, ತಕ್ಷಣವೇ ಅವರಿಗೆ ಗೃಹ ಸಾಲ ಮಂಜೂರು ಮಾಡಲಾಗಿರುವ ಪತ್ರವನ್ನು ಎಚ್‌ಡಿಎಫ್‌ಸಿ ವಾಟ್ಸ್‌ಆಪ್ ಮೂಲಕವೇ ಕಳುಹಿಸಲಿದೆ.

ಹೋಮ್‌ಲೋನ್‌ ಬಡ್ಡಿ ಹೆಚ್ಚಾದರೆ ಮಾಡುವುದೇನು? EMI ಹೆಚ್ಚಳವೋ? ಅವಧಿ ವಿಸ್ತರಣೆಯೋ? ಇಲ್ಲಿದೆ ಪರಿಹಾರ

ಈ ಸೌಲಭ್ಯ 24X7 ಲಭ್ಯವಿದ್ದು, ಗ್ರಾಹಕರು ಗೃಹ ಸಾಲ ಪಡೆಯಲು ಕೆಲವೇ ಸುಲಭ ಹಂತಗಳನ್ನು ಅನುಸರಿಸಿದರೆ ಸಾಕು. ದೇಶದ ವೇತನಸಹಿತ ಉದ್ಯೋಗಿಗಳಿಗೆ ಈ ಸೌಲಭ್ಯ ದೊರೆಯುತ್ತದೆ ಎಂದು ಎಚ್‌ಡಿಎಫ್‌ಸಿ ಹೇಳಿದೆ.

ಗೃಹ ಸಾಲ ಪಡೆಯಲು ಇರುವ ಆರಂಭಿಕ ಪ್ರಕ್ರಿಯೆ ಮತ್ತು ಮಂಜೂರಾತಿ ಪತ್ರ ಪಡೆಯುವ ಸಮಯವನ್ನು ಇದು ತ್ವರಿತವಾಗಿ ಅನುವು ಮಾಡಿಕೊಡುತ್ತದೆ ಎಂದು ಎಚ್‌ಡಿಎಫ್‌ಸಿ ಹೇಳಿಕೆಯಲ್ಲಿ ತಿಳಿಸಿದೆ.

ಬಡ್ಡಿ ದರ ಹೆಚ್ಚಿಸಿದ ಬ್ಯಾಂಕ್‌ ಆಫ್‌ ಬರೋಡಾ, ಐಸಿಐಸಿಐ ಬ್ಯಾಂಕ್‌, ಗ್ರಾಹಕರ ಮೇಲೆ ಹೆಚ್ಚಿನ EMI ಹೊರೆ

24X7 ಸೌಲಭ್ಯ ದೊರೆಯಲಿದೆ
ಈ ಸೌಲಭ್ಯವು ಎಲ್ಲ ಏಳು ದಿನಗಳ ಕಾಲವೂ ಲಭ್ಯವಿರುತ್ತದೆ ಎಂದು ಹೇಳಿದೆ. ವಸತಿ ಸಾಲ ಮಂಜೂರಾತಿ ಪತ್ರಕ್ಕೆ ‘ವೇಟಿಂಗ್ ಪೀರಿಯಡ್’ ಇರುವುದಿಲ್ಲ. ಈ ಸೌಲಭ್ಯವು ಸಂಬಳ ಪಡೆಯುವ ಭಾರತೀಯ ನಿವಾಸಿಗಳಿಗೆ ಮಾತ್ರ. ಆದ್ದರಿಂದ ನೀವು ಸಹ ಈ ವರ್ಗಕ್ಕೆ ಸೇರಿದ್ದರೆ ಮತ್ತು ಹೋಮ್ ಲೋನ್‌ಗಾಗಿ ಯೋಜಿಸುತ್ತಿದ್ದರೆ, HDFCಯ ಈ ಸೌಲಭ್ಯವು ನಿಮಗೆ ಹೆಚ್ಚು ಉಪಯುಕ್ತವಾಗಿದೆ ಎಂದು ಸಾಬೀತುಪಡಿಸಬಹುದು.
ಲೇಖಕರ ಬಗ್ಗೆ
ಬಾನುಪ್ರಸಾದ ಕೆ.ಎನ್\u200c.
ವಿಜಯ ಕರ್ನಾಟಕ ಡಿಜಿಟಲ್\u200c ಪತ್ರಕರ್ತ. ವಿಜ್ಞಾನ ತಂತ್ರಜ್ಞಾನ, ರಾಷ್ಟ್ರೀಯ- ಅಂತಾರಾಷ್ಟ್ರೀಯ, ಸಾಹಿತ್ಯ-ಕಲೆ, ಶಿಕ್ಷಣ, ಆಸಕ್ತಿಯ ವಿಷಯಗಳು... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ