ಆ್ಯಪ್ನಗರ

ಎಫ್‌ಡಿ ಮೇಲಿನ ಬಡ್ಡಿದರದಲ್ಲಿ ಭಾರೀ ಹೆಚ್ಚಳ : ಯಾವ ಬ್ಯಾಂಕಲ್ಲಿ ಎಷ್ಟು ಬಡ್ಡಿ ನಿಗದಿ? ಇಲ್ಲಿದೆ ವಿವರ

Fixed Deposit Rate : ಎಚ್‌ಡಿಎಫ್‌ಸಿ ಬ್ಯಾಂಕ್‌ 33 ತಿಂಗಳ ನಿಶ್ಚಿತ ಠೇವಣಿಗಳ (ಎಫ್‌ಡಿ) ಮೇಲಿನ ಬಡ್ಡಿ ದರವನ್ನು ಶೇ. 6.75 ಕ್ಕೆ ಮತ್ತು 99 ತಿಂಗಳ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 7.05ಕ್ಕೆ ಹೆಚ್ಚಿಸಿದೆ. ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್ (HDFC), ಐಡಿಬಿಐ ಬ್ಯಾಂಕ್ (IDBI) ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಇತ್ತೀಚೆಗೆ ಹೂಡಿಕೆದಾರರಿಗೆ FD ಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡಲು ನಿರ್ಧರಿಸಿವೆ.

Authored byಬಾನುಪ್ರಸಾದ ಕೆ.ಎನ್\u200c. | Vijaya Karnataka Web 22 Jun 2022, 3:58 pm
ಹೊಸದಿಲ್ಲಿ : ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಹೆಚ್ಚಿಸಿದ ಬೆನ್ನಲ್ಲೇ ಬ್ಯಾಂಕುಗಳು ನಿಶ್ಚಿತ ಠೇವಣಿ (Fixed Deposit - FD)ಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿವೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೇರಿದಂತೆ ಹಲವು ಬ್ಯಾಂಕ್‌ಗಳು ಎಫ್‌ಡಿ ಮೇಲಿನ ಬಡ್ಡಿ ದರ ಹೆಚ್ಚಿಸಿವೆ.
Vijaya Karnataka Web FD


ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್ (HDFC), ಐಡಿಬಿಐ ಬ್ಯಾಂಕ್ (IDBI) ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಇತ್ತೀಚೆಗೆ ಹೂಡಿಕೆದಾರರಿಗೆ FD ಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡಲು ನಿರ್ಧರಿಸಿವೆ.

ಎಸ್‌ಬಿಐ ಬಡ್ಡಿದರಗಳು ಹೀಗಿವೆ
ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ ಕೋಟ್ಯಂತರ ಗ್ರಾಹಕರಿಗೆ ಭರ್ಜರಿ ಸುದ್ದಿ ನೀಡಿದೆ. ಎಫ್‌ಡಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಲು ನಿರ್ಧರಿಸಿದೆ (SBI FD Rate Hike). ಹೊಸ ಬಡ್ಡಿ ದರಗಳು ಜೂನ್ 14ರಿಂದಲೇ ಜಾರಿಗೆ ಬಂದಿವೆ. ಆದರೆ, ಎಲ್ಲ ಅವಧಿಯ ಎಫ್‌ಗಳ ಮೇಲೆ ಬಡ್ಡಿ ಹೆಚ್ಚಳ ಮಾಡಿಲ್ಲ. ಎಸ್‌ಬಿಐ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, 2 ಕೋಟಿ ರೂ.ಗಿಂತ ಕಡಿಮೆ ಮತ್ತು 211 ದಿನಗಳಿಂದ ಮೂರು ವರ್ಷಗಳ ಅವಧಿಯ ಸ್ಥಿರ ಠೇವಣಿಗಳಿಗೆ ಬಡ್ಡಿ ಹೆಚ್ಚಿಸಲಾಗಿದೆ. ಹೊಸ ಬಡ್ಡಿ ದರಗಳ ವಿವರ ಇಲ್ಲಿದೆ.
  • 211 ದಿನದಿಂದ 1 ವರ್ಷ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರ ಶೇ. 4.60 ಕ್ಕೆ ಏರಿದೆ. ಈ ಹಿಂದೆ ಇದು ಶೇ 4.40ರಷ್ಟಿತ್ತು. ಹಿರಿಯ ನಾಗರಿಕರಿಗೆ ಶೇ. 5.10ರಷ್ಟು ಬಡ್ಡಿ ಸಿಗಲಿದೆ. (ಹಿಂದಿನ ಬಡ್ಡಿದರ ಶೇ. 4.90ರಷ್ಟಿತ್ತು).
  • 1 ವರ್ಷದಿಂದ 2 ವರ್ಷ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರದಲ್ಲಿ ಶೇ.0.20ರಷ್ಟು ಹೆಚ್ಚಳ ಮಾಡಿದ್ದು, ಶೇ.5.30ಕ್ಕೆ ನಿಗದಿಯಾಗಿದೆ. ಹಿರಿಯ ನಾಗರಿಕರಿಗೆ ಶೇ.5.80ರಷ್ಟು ಬಡ್ಡಿ ಸಿಗಲಿದೆ.
  • 2 ರಿಂದ 3 ವರ್ಷ ಅವಧಿಯ ಎಫ್‌ಡಿ ಮೇಲಿನ ಬಡ್ಡಿ ದರವನ್ನು ಶೇ. 5.20 ರಿಂದ 5.35 ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ ಹಿರಿಯ ನಾಗರಿಕರಿಗೆ ಶೇ.5.85 ಬಡ್ಡಿ ಸಿಗಲಿದೆ.
  • 2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡಾ 0.75 ರಷ್ಟು ಹೆಚ್ಚಿಸಲಾಗಿದೆ.

FD ಮೇಲಿನ ಬಡ್ಡಿ ಹೆಚ್ಚಿಸಿದ ಪ್ರಮುಖ ಬ್ಯಾಂಕುಗಳು! ಹೊಸ ದರ ಎಷ್ಟಿದೆ? ಇಲ್ಲಿದೆ ವಿವರ

ಎಚ್‌ಡಿಎಫ್‌ಸಿ ಬ್ಯಾಂಕ್ ಬಡ್ಡಿ ದರದಲ್ಲಿ ಭಾರೀ ಹೆಚ್ಚಳ
ಎಚ್‌ಡಿಎಫ್‌ಸಿ ಬ್ಯಾಂಕ್ ಜೂನ್ 15 ರಿಂದಲೇ ಜಾರಿಗೆ ಬರುವಂತೆ ಎಫ್‌ಡಿ ಬಡ್ಡಿ ದರದಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು (ಶೇ.0.25) ಹೆಚ್ಚಿಸಿದೆ.
  • 6 ತಿಂಗಳಿಂದ 9 ತಿಂಗಳ ಕಡಿಮೆ ಅವಧಿಯ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಶೇ. 4.40 ರಿಂದ ಶೇ. 4.65ಕ್ಕೆ ಹೆಚ್ಚಿಸಲಾಗಿದೆ.
  • 9 ತಿಂಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಶೇ. 4.50 ರಿಂದ ಶೇ. 4.65 ಕ್ಕೆ ಹೆಚ್ಚಿಸಿದೆ.
  • 1 ವರ್ಷದಿಂದ 2 ವರ್ಷಗಳ ಅವಧಿಯ FDಗಳ ಮೇಲಿನ ಬಡ್ಡಿದರವನ್ನು ಶೇ. 5.10 ರಿಂದ ಶೇ.5.35ಕ್ಕೆ ಹೆಚ್ಚಿಸಲಾಗಿದೆ.
  • 33 ತಿಂಗಳ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡಾ 6.75 ಕ್ಕೆ ಮತ್ತು 99 ತಿಂಗಳ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇಕಡಾ 7.05 ಕ್ಕೆ ಹೆಚ್ಚಿಸಿದೆ.

ಐಡಿಬಿಐ ಬ್ಯಾಂಕ್ ಕೂಡ ಬಡ್ಡಿ ಹೆಚ್ಚಳಕ್ಕೆ ನಿರ್ಧರಿಸಿದೆ
ಐಡಿಬಿಐ ಬ್ಯಾಂಕ್ ಮಂಗಳವಾರ 2 ಕೋಟಿಗಿಂತ ಕಡಿಮೆ ಮೊತ್ತದ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಎಫ್‌ಡಿಗಳ ಮೇಲೆ 25 ಬೇಸಿಸ್ ಪಾಯಿಂಟ್‌ಗಳಷ್ಟು (ಶೇ.0.25) ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರಿಗೆ ಬಡ್ಡಿದರದಲ್ಲಿ 75 ಬೇಸಿಸ್ ಪಾಯಿಂಟ್‌ಗಳಷ್ಟು (ಶೇ.0.75) ಹೆಚ್ಚಳ ಮಾಡಲಾಗಿದೆ.

ಎಫ್‌ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ! ಇಲ್ಲಿದೆ ಪರಿಷ್ಕೃತ ದರಗಳ ವಿವರ

ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲೂ ಎಫ್‌ಡಿ ಬಡ್ಡಿ ಹೆಚ್ಚಳ
ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಪ್ರಸ್ತುತ ಉಳಿತಾಯ ಖಾತೆಯಲ್ಲಿನ 50 ಲಕ್ಷ ರೂ.ಗಿಂತ ಹೆಚ್ಚಿನ ದೈನಂದಿನ ಬ್ಯಾಲೆನ್ಸ್‌ಗೆ ವಾರ್ಷಿಕ ಶೇ. 4 ಬಡ್ಡಿ ನೀಡುತ್ತಿದೆ. ಈ ಮೊದಲು ಇದು ಶೇ.3.50ರಷ್ಟಿತ್ತು. ಇದೀಗ 50 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆಯಾಗಿದೆ. ಆಯ್ದ ಅವಧಿಯ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಶೇ.0.10 ರಿಂದ ಶೇ.0.25ರಷ್ಟು ಹೆಚ್ಚಳ ಮಾಡಲಾಗಿದೆ.

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ 'ಎಕನಾಮಿಕ್ ಟೈಮ್ಸ್' ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.
ಲೇಖಕರ ಬಗ್ಗೆ
ಬಾನುಪ್ರಸಾದ ಕೆ.ಎನ್\u200c.
ವಿಜಯ ಕರ್ನಾಟಕ ಡಿಜಿಟಲ್\u200c ಪತ್ರಕರ್ತ. ವಿಜ್ಞಾನ ತಂತ್ರಜ್ಞಾನ, ರಾಷ್ಟ್ರೀಯ- ಅಂತಾರಾಷ್ಟ್ರೀಯ, ಸಾಹಿತ್ಯ-ಕಲೆ, ಶಿಕ್ಷಣ, ಆಸಕ್ತಿಯ ವಿಷಯಗಳು... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ