ಆ್ಯಪ್ನಗರ

ದೇಶದ ಮಹಾನಗರಗಳಲ್ಲಿ ಶುಕ್ರವಾರ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ಗೊತ್ತಾ?

ಕಳೆದ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯಾಗುವ ಭರವಸೆಯಲ್ಲಿದ್ದ ಜನ ಸಾಮಾನ್ಯನಿಗೆ ಇನ್ನೂ ಸಿಹಿಸುದ್ದಿ ಸಿಕ್ಕಿಯೇ ಇಲ್ಲ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿನ ಹಗ್ಗಜಗ್ಗಾಟದಿಂದಾಗಿ ಬೆಲೆ ಇಳಿಕೆಯ ಭರವಸೆಯ ಬಗ್ಗೆ ಸದ್ಯಕ್ಕೆ ಹೇಳಲಾಗದು ಎನ್ನುವುದು ಮಾರುಕಟ್ಟೆ ಪರಿಣಿತರ ಅಭಿಪ್ರಾಯ.

Vijaya Karnataka Web 11 Sep 2020, 11:20 am
ಬೆಂಗಳೂರು: ಕಳೆದ ಅನೇಕ ವಾರಗಳಿಂದ ಏರುತ್ತಲೇ ಹೋಗುತ್ತಿರುವ ಪೆಟ್ರೋಲ್‌ ಡೀಸೆಲ್ ದರ ಮಧ್ಯೆ ಮಧ್ಯೆ ಏರಿಳಿತ ಕಂಡು ಹಾವು ಏಣಿಯಾಟ ಆಡುತ್ತಿದೆ. ವಾಹನ ಮಾಲಕರಿಗೆ ಪೆಟ್ರೋಲ್ ಡೀಸೆಲ್ ದರ ನುಂಗಲಾರದ ಬಿಸಿತುಪ್ಪವಾದರೂ ಅನಿವಾರ್ಯವಾಗಿ ಹಾಕಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ. ಗುರುವಾರಕ್ಕೆ ಹೋಲಿಸಿದರೆ ಇಂದು ಕೆಲವು ನಗರಗಳಲ್ಲಿ ಮತ್ತೆ ಪೆಟ್ರೋಲ್‌ ಬೆಲೆಯಲ್ಲಿ ಕೆಲ ಪೈಸೆಗಳಷ್ಟು ಏರಿಕೆಯಾಗಿದೆ. ಉಳಿದಂತೆ ನಿನ್ನೆಯ ದರವೇ ಬಹುತೇಕ ನಗರಗಳಲ್ಲಿ ಇಂದು ಕೂಡ ಮುಂದುವರಿದಿದೆ.
Vijaya Karnataka Web petrol
Representative image


‘ನೀವು ಎಲ್ಲಿಗೂ ಹೋಗೋದಿಲ್ಲ, ಇದನ್ನು ಅರ್ಥ ಮಾಡ್ಕೊಳ್ಳಿ..’: ಪಕ್ಷ ತೊರೆದ ರಘುವಂಶ್‌ಗೆ ಲಾಲು ಪ್ರಸಾದ್ ಭಾವನಾತ್ಮಕ ಪತ್ರ

ಕಳೆದ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯಾಗುವ ಭರವಸೆಯಲ್ಲಿದ್ದ ಜನ ಸಾಮಾನ್ಯನಿಗೆ ಇನ್ನೂ ಸಿಹಿಸುದ್ದಿ ಸಿಕ್ಕಿಯೇ ಇಲ್ಲ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿನ ಹಗ್ಗಜಗ್ಗಾಟದಿಂದಾಗಿ ಬೆಲೆ ಇಳಿಕೆಯ ಭರವಸೆಯ ಬಗ್ಗೆ ಸದ್ಯಕ್ಕೆ ಹೇಳಲಾಗದು ಎನ್ನುವುದು ಮಾರುಕಟ್ಟೆ ಪರಿಣಿತರ ಅಭಿಪ್ರಾಯ. ಹಾಗಾದರೆ ಬೆಲೆ ಪರಿಷ್ಕರಣೆಗೊಂಡ ಬಳಿಕ ಸೆಪ್ಟೆಂಬರ್ 11ರ ಶುಕ್ರವಾರ ದೇಶದ ಮಹಾನಗರಗಳಲ್ಲಿ ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ.

ಲೋಕಸಭೆಗೆ ಡೆಪ್ಯೂಟಿ ಸ್ಪೀಕರ್‌ ಆಯ್ಕೆಯನ್ನು ಶೀಘ್ರ ಮಾಡುಂತೆ ಕಾಂಗ್ರೆಸ್‌ ಪತ್ರ; ಏನಿದು ತಂತ್ರಗಾರಿಕೆ..!?

ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.

ಸಿಲಿಕಾನ್ ಸಿಟಿ ಬೆಂಗಳೂರು
ಪೆಟ್ರೋಲ್: 84.6r ರೂ.

ಡೀಸೆಲ್: 77.34 ರೂ.

ರಾಷ್ಟ್ರ ರಾಜಧಾನಿ ನವದೆಹಲಿ
ಪೆಟ್ರೋಲ್: 81.99 ರೂ.

ಡೀಸೆಲ್: 73.05 ರೂ.

ಮಹಾರಾಷ್ಟ್ರ ರಾಜಧಾನಿ ಮುಂಬಯಿ
ಪೆಟ್ರೋಲ್: 88.64 ರೂ.

ಡೀಸೆಲ್: 79.57 ರೂ.

ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್:84.96 ರೂ.

ಡೀಸೆಲ್: 78.38 ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ