ಆ್ಯಪ್ನಗರ

ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಭಾರೀ ಇಳಿಕೆ, ದೇಶದ ಮಹಾನಗರಗಳ ಪೈಕಿ ಎಲ್ಲಿ ಎಷ್ಟಿದೆ?

ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಭರ್ಜರಿ ಇಳಿಕೆ ಕಂಡಿದೆ. ಅಂತರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಾದ ಬದಲಾವಣೆಯಿಂದಾಗಿ ಅದು ಭಾರತದ ಇಂಧನದ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಇದೆ ಮೊದಲ ಬಾರಿಗೆ ಇಷ್ಟು ಮೊತ್ತ ಇಳಿಕೆ ಕಂಡಿದೆ. ಹಾಗಾದರೆ ಶನಿವಾರ ಎಲ್ಲಿ ಎಷ್ಟು ದರವಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ.

Agencies 19 Sep 2020, 8:25 am
Vijaya Karnataka Web Petrol
ಬೆಂಗಳೂರು: ದೇಶದಲ್ಲಿ ಕೊರೊನಾ ಲಾಕ್‌ಡೌನ್‌ ಬಳಿಕ ಇದೇ ಮೊದಲ ಬಾರಿಗೆ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಭಾರೀ ಇಳಿಕೆ ಕಂಡಿದೆ. ಪೆಟ್ರೋಲ್‌ ದರದಲ್ಲಿ ಎಲ್ಲಾ ನಗರಗಳಲ್ಲಿಯು ಸರಿ ಸುಮಾರು 30 ರಿಂದ 40 ಪೈಸೆ ಇಳಿಕೆ ಕಂಡರೆ, ಡೀಸೆಲ್‌ನಲ್ಲಿ ಸರಿ ಸುಮಾರು 50 ರಿಂದ 80 ಪೈಸೆ ಇಳಿಕೆ ಕಂಡಿದೆ.

ಬಹು ದೊಡ್ಡ ಮೊತ್ತದ ಇಳಿಕೆಯಿಂದಾಗಿ ಶನಿವಾರ ಜನರ ಮುಖದಲ್ಲಿ ಮಂದಹಾಸ ಮೂಡುವುದಂತು ಪಕ್ಕಾ ಎಂಬುವಂತಾಗಿದೆ. ಹಾಗಾದರೆ ಸೆಪ್ಟೆಂಬರ್ 19ರ ಶನಿವಾರ ದೇಶದ ಮಹಾನಗರಗಳಲ್ಲಿ ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ.
ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.

ಸಿಲಿಕಾನ್ ಸಿಟಿ ಬೆಂಗಳೂರು
ಪೆಟ್ರೋಲ್: 83.78 ರೂ. ( ₹0.26 ಪೈಸೆ ಇಳಿಕೆ)
ಡೀಸೆಲ್: 76.04 ರೂ. (₹0.62 ಪೈಸೆ ಇಳಿಕೆ )

ರಾಷ್ಟ್ರ ರಾಜಧಾನಿ ನವದೆಹಲಿ
ಪೆಟ್ರೋಲ್: 81.14 ರೂ. ( ₹0.26 ಪೈಸೆ ಇಳಿಕೆ)
ಡೀಸೆಲ್: 71.82 ರೂ. (₹0.55 ಪೈಸೆ ಇಳಿಕೆ )

ಮಹಾರಾಷ್ಟ್ರ ರಾಜಧಾನಿ ಮುಂಬಯಿ
ಪೆಟ್ರೋಲ್: 87.82 ರೂ. ( ₹0.24 ಪೈಸೆ ಇಳಿಕೆ)
ಡೀಸೆಲ್: 78.27 ರೂ. (₹0.58 ಪೈಸೆ ಇಳಿಕೆ )

ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್:84.21 ರೂ. (₹0.30 ಪೈಸೆ ಇಳಿಕೆ)
ಡೀಸೆಲ್: 77.21 ರೂ. (₹0.70 ಪೈಸೆ ಇಳಿಕೆ )

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ