ಆ್ಯಪ್ನಗರ

ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಮತ್ತೆ ಇಳಿಕೆ; ದೇಶದ ಮಹಾನಗರಗಳ ಪೈಕಿ ಎಲ್ಲಿ ಎಷ್ಟಿದೆ?

ದೇಶದ ಪ್ರಮುಖ ನಗರಗಳಲ್ಲಿ ಕೊಂಚ ಕೊಂಚವಾಗೇ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಇಳಿಕೆ ಕಾಣುತ್ತಿದೆ. ಇದೀಗ ಮತ್ತೆ ಇಂಧನ ದರದಲ್ಲಿ ಇಳಿಕೆ ಕಂಡಿದ್ದು ಜನ ಸಾಮಾನ್ಯರ ಮುಖದಲ್ಲಿ ನಗು ಬೀರುವಂತೆ ಮಾಡಿದೆ. ಅಂತರಾಷ್ಟ್ರೀಯ ಕಚ್ಚಾತೈಲ ದರದಲ್ಲಿ ಬದಲಾವಣೆ ಕಂಡು ಬಂದ ಹಿನ್ನೆಲೆ ಇದರ ನೇರ ಪರಿಣಾಮ ದೇಸಿ ಮಾರುಕಟ್ಟೆಯ ಪೆಟ್ರೋಲ್‌, ಡೀಸೆಲ್‌ ದರದ ಮೇಲೆ ಬಿದ್ದಿದೆ.

Agencies 23 Sep 2020, 8:05 am
ಬೆಂಗಳೂರು: ಜನರ ಅಗತ್ಯ ವಸ್ತುಗಳಾಗಿರುವ ಪೆಟ್ರೋಲ್‌, ಡೀಸೆಲ್‌ ದರ ದೇಶದ ಮಹಾನಗರಗಳಲ್ಲಿ ಮತ್ತೆ ಇಳಿಕೆ ಕಂಡಿದೆ. ಹೀಗಾಗಿ ಜನ ಸಾಮಾನ್ಯರ ಮುಖದಲ್ಲಿ ಬುಧವಾರ ನಗು ಕಾಣುವ ಸಾಧ್ಯತೆ ಇದೆ. ಗುಡ್‌ನ್ಯೂಸ್‌ ಅಂದರೆ ಕಳೆದ ಎರಡು ವಾರಗಳಲ್ಲಿ ಕೊಂಚ ಕೊಂಚವಾಗೇ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ ಕಾಣುತ್ತಿದೆ.
Vijaya Karnataka Web petrol


ಒಂದು ದಿನ ಪೆಟ್ರೋಲ್‌ ಇಳಿಕೆ ಕಂಡರೆ ಇನ್ನೊಂದು ದಿನ ಡೀಸೆಲ್‌ ಬೆಲೆ ಇಳಿಕೆ ಕಾಣುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ದರ ಬದಲಾವಣೆಯಿಂದ ದೇಸಿ ಮಾರುಕಟ್ಟೆಯ ಮೇಲೆಯೂ ಇದರ ಪರಿಣಾಮ ಬೀರುತ್ತದೆ. ಹಾಗಾದರೆ ಸೆಪ್ಟೆಂಬರ್ 23ರ ಬುಧವಾರ ದೇಶದ ಮಹಾನಗರಗಳಲ್ಲಿ ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ.


ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.


ಸಿಲಿಕಾನ್ ಸಿಟಿ ಬೆಂಗಳೂರು
ಪೆಟ್ರೋಲ್: 83.69 ರೂ. ( ₹0.09 ಪೈಸೆ ಇಳಿಕೆ)
ಡೀಸೆಲ್: 75.50 ರೂ. (₹0.14 ಪೈಸೆ ಇಳಿಕೆ )

ರಾಷ್ಟ್ರ ರಾಜಧಾನಿ ನವದೆಹಲಿ
ಪೆಟ್ರೋಲ್: 81.06 ರೂ. ( ₹0.08 ಪೈಸೆ ಇಳಿಕೆ)
ಡೀಸೆಲ್: 71.28 ರೂ. (₹0.15 ಪೈಸೆ ಇಳಿಕೆ )

ಮಹಾರಾಷ್ಟ್ರ ರಾಜಧಾನಿ ಮುಂಬಯಿ
ಪೆಟ್ರೋಲ್: 87.74 ರೂ. ( ₹0.08 ಪೈಸೆ ಇಳಿಕೆ)
ಡೀಸೆಲ್: 77.73 ರೂ. (₹0.14 ಪೈಸೆ ಇಳಿಕೆ )

ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್:84.21 ರೂ. (₹0.08 ಪೈಸೆ ಇಳಿಕೆ)
ಡೀಸೆಲ್: 76.78 ರೂ. (₹0.16 ಪೈಸೆ ಇಳಿಕೆ )

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ