ಆ್ಯಪ್ನಗರ

ದೇಶದ ಮಹಾನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ!

ದೇಶದ ಮಹಾನಗರಗಳ ಪೈಕಿ ಮುಂಬಯಿನಲ್ಲಿ ಪೆಟ್ರೋಲ್‌ ದರ 85 ರ ಗಡಿ ದಾಟಿದೆ. ಚೆನ್ನೈನಲ್ಲಿ ಇದರ ದರ 85ರ ಗಡಿ ಬಳಿ ಇದೆ. ಕಳೆದ ಎರಡು ದಿನಗಳಿಂದ ಕೊಂಚ ಕೊಂಚವಾಗೇ ಪೆಟ್ರೋಲ್‌ ದರ ಇಳಿಕೆಯಾಗಿರುವುದು ಈ ನಗರಗಳ ಜನರಲ್ಲಿ ಮಂದಹಾಸ ಮೂಡುವಂತೆ ಮಾಡಿತ್ತು.

Agencies 24 Sep 2020, 8:15 am
ಬೆಂಗಳೂರು: ಗುರುವಾರ ಪೆಟ್ರೋಲ್‌, ಡೀಸೆಲ್‌ ದರ ಸ್ಥಿರವಾಗಿದೆ. ಯಾವುದೇ ನಗರಗಳಲ್ಲಿ ದರ ಏರಿಕೆ ಅಥವಾ ಇಳಿಕೆ ಕಂಡಿಲ್ಲ. ಕಳೆದ ಎರಡು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಇಳಿಕೆ ಕಂಡಿತ್ತು. ಹೀಗಾಗಿ ಇಂದು ಕೂಡ ಇಳಿಕೆ ಕಾಣುವ ಭರವಸೆಯಲ್ಲಿ ಜನ ಸಾಮಾನ್ಯರು ಇದ್ದರು.
Vijaya Karnataka Web petrol price


ಆದರೆ ಅಂತರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿನ ದರದಲ್ಲಿ ಯಾವುದೇ ಬದಲಾವಣೆ ಕಂಡು ಬರದ ಹಿನ್ನೆಲೆ ದೇಶದಲ್ಲಿಯು ಇಂಧನ ದರದಲ್ಲಿ ಬದಲಾಗಿಲ್ಲ. ಹಾಗಾದರೆ ಸೆಪ್ಟೆಂಬರ್ 24ರ ಗುರುವಾರ ದೇಶದ ಮಹಾನಗರಗಳಲ್ಲಿ ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ.

ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.

ಸಿಲಿಕಾನ್ ಸಿಟಿ ಬೆಂಗಳೂರು
ಪೆಟ್ರೋಲ್: 83.69 ರೂ.
ಡೀಸೆಲ್: 75.50 ರೂ.

ರಾಷ್ಟ್ರ ರಾಜಧಾನಿ ನವದೆಹಲಿ
ಪೆಟ್ರೋಲ್: 81.06 ರೂ.
ಡೀಸೆಲ್: 71.28 ರೂ.

ಮಹಾರಾಷ್ಟ್ರ ರಾಜಧಾನಿ ಮುಂಬಯಿ
ಪೆಟ್ರೋಲ್: 87.74 ರೂ.
ಡೀಸೆಲ್: 77.73 ರೂ.

ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್:84.21 ರೂ.
ಡೀಸೆಲ್: 76.78 ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ