ಆ್ಯಪ್ನಗರ

ದೇಶದಲ್ಲಿ ಮತ್ತೆ ಏರಿದ ಪೆಟ್ರೋಲ್‌ ದರ, ಮಹಾನಗರಗಳಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ!

ಪೆಟ್ರೋಲ್‌ ದರ ಕಳೆದ ಎರಡು ಮೂರು ದಿನಗಳಿಂದ ಏರುತ್ತಲೆ ಇದೆ. ಇದು ಜನ ಸಾಮಾನ್ಯರನ್ನ ಚಿಂತೆಗೆ ಕಾರಣವಾಗಿದೆ. ಪೆಟ್ರೋಲ್‌ ಬೆಲೆಯಲ್ಲಿ ಏರಿಕೆ ಕಂಡರು ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಳೆದ ಕೆಲವು ದಿನಗಳಿಂದ ಡೀಸೆಲ್‌ ದರ ಸ್ಥಿರವಾಗಿದೆ.

THE ECONOMIC TIMES 25 Aug 2020, 8:14 am
ಬೆಂಗಳೂರು: ದೇಶದಲ್ಲಿ ಮತ್ತೆ ಪೆಟ್ರೋಲ್‌ ಬೆಲೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ ಪೆಟ್ರೋಲ್ ದರ ಏರುತ್ತಲೆ ಇದೆ. ಬೆಂಗಳೂರಿನಲ್ಲಿ 85 ರ ಗಡಿ ಬಂದು ಪೆಟ್ರೋಲ್‌ ದರ ನಿಂತರೆ, ದೇಶದ ಉಳಿದ ಮಹಾನಗರಗಳಲ್ಲಿ ದರ 85ರ ಗಡಿ ದಾಟಿದೆ. ಹೀಗಾಗಿ ಸಹಜವಾಗೆ ಜನ ಸಾಮಾನ್ಯರಿಗೆ ತಲೆಬಿಸಿ ಆಗುತ್ತಿದೆ.
Vijaya Karnataka Web petrol


ಇದೇ ರೀತಿ ಏರುತ್ತಲೆ ಹೋದರೆ ಕೊರೊನಾದ ಆರ್ಥಿಕ ಬಿಕ್ಕಟ್ಟಿನ ನಡುವೆ ಇನ್ನೊಂದು ಸಮಸ್ಯೆ ಎದುರಾಗುವ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರಾಜ್ಯಗಳು ಸುಂಕವನ್ನ ಕಡಿತಗೊಳಿಸಿ ಜನರಿಗಾಗುವ ಹೊರೆಯನ್ನ ತಗ್ಗಿಸುವ ಮನವಿಯನ್ನ ಮಾಡುತ್ತಿದ್ದಾರೆ. ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿದ ಹಿನ್ನೆಲೆ ದೇಶದ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಹಾಗಾದರೆ ಆಗಸ್ಟ್‌ 25ರ ಮಂಗಳವಾರ ದೇಶದ ಮಹಾನಗರಗಳಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.

ಸಿಲಿಕಾನ್ ಸಿಟಿ ಬೆಂಗಳೂರು

ಪೆಟ್ರೋಲ್:84.39 ರೂ. ( ₹0.12 ಪೈಸೆ ಏರಿಕೆ)
ಡೀಸೆಲ್: 77.88 ರೂ. (ಬದಲಾವಣೆ ಇಲ್ಲ)

ರಾಷ್ಟ್ರ ರಾಜಧಾನಿ ನವದೆಹಲಿ
ಪೆಟ್ರೋಲ್: 81.73 ರೂ. ( ₹0.11 ಪೈಸೆ ಏರಿಕೆ)
ಡೀಸೆಲ್: 73.56 ರೂ. (ಬದಲಾವಣೆ ಇಲ್ಲ)

ಮಹಾರಾಷ್ಟ್ರ ರಾಜಧಾನಿ ಮುಂಬಯಿ
ಪೆಟ್ರೋಲ್: 88.39 ರೂ. ( ₹0.11 ಪೈಸೆ ಏರಿಕೆ)
ಡೀಸೆಲ್: 80.11 ರೂ. (ಬದಲಾವಣೆ ಇಲ್ಲ)

ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್:84.74 ರೂ. (₹0.10 ಪೈಸೆ ಏರಿಕೆ)
ಡೀಸೆಲ್: 78.86 ರೂ.(ಬದಲಾವಣೆ ಇಲ್ಲ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ