ಆ್ಯಪ್ನಗರ

ಮತ್ತೆ ಇಳಿಯಿತು ಡೀಸೆಲ್‌ ದರ, ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಇಂಧನ ಬೆಲೆ ಎಷ್ಟಿದೆ?

ಡೀಸೆಲ್‌ ದರ ಇಳಿಕೆಯಿಂದ ಅಗತ್ಯ ವಸ್ತುಗಳ ಬೆಲೆಯು ಇಳಿಯುತ್ತದೆ ಎನ್ನುವುದು ಮಾರುಕಟ್ಟೆ ಪರಿಣಿತರ ಅಭಿಪ್ರಾಯ. ಸರಕು ಸಾಗಾಟದ ವೆಚ್ಚ ಕಡಿಮೆಯಾದಂತೆ ವಸ್ತುಗಳ ಬೆಲೆಯು ಇಳಿಯುತ್ತದೆ. ಇನ್ನು ಪೆಟ್ರೋಲ್‌ ಬೆಲೆಯಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಹಾಗಾದರೆ ಅಕ್ಟೋಬರ್‌ 2ರ ಶುಕ್ರವಾರ ದೇಶದ ಮಹಾನಗರಗಳಲ್ಲಿ ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ.

Vijaya Karnataka 2 Oct 2020, 8:37 am
ಬೆಂಗಳೂರು: ಶುಕ್ರವಾರ ದೇಶದ ಮಹಾನಗರಗಳಲ್ಲಿ ಮತ್ತೆ ಡೀಸೆಲ್‌ ದರ ಇಳಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ಡೀಸೆಲ್‌ ದರದಲ್ಲಿ ಕೊಂಚ ಕೊಂಚವಾಗೆ ಇಳಿಕೆ ಕಾಣುತ್ತಿದೆ. ಇದು ಜನ ಸಾಮಾನ್ಯನಿಗೆ ಭಾರೀ ಖುಷಿ ನೀಡಿದೆ. ಯಾಕೆಂದರೆ ಡೀಸೆಲ್‌ ದರ ಇಳಿಕೆಯಿಂದ ಅಗತ್ಯ ವಸ್ತುಗಳ ಬೆಲೆಯು ಇಳಿಯುತ್ತದೆ ಎನ್ನುವುದು ಮಾರುಕಟ್ಟೆ ಪರಿಣಿತರ ಅಭಿಪ್ರಾಯ.
Vijaya Karnataka Web Petrol
(Representative image)


ಸರಕು ಸಾಗಾಟದ ವೆಚ್ಚ ಕಡಿಮೆಯಾದಂತೆ ವಸ್ತುಗಳ ಬೆಲೆಯು ಇಳಿಯುತ್ತದೆ. ಇನ್ನು ಪೆಟ್ರೋಲ್‌ ಬೆಲೆಯಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಹಾಗಾದರೆ ಅಕ್ಟೋಬರ್‌ 2ರ ಶುಕ್ರವಾರ ದೇಶದ ಮಹಾನಗರಗಳಲ್ಲಿ ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ.

ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.


ಸಿಲಿಕಾನ್ ಸಿಟಿ ಬೆಂಗಳೂರು
ಪೆಟ್ರೋಲ್: 83.69 ರೂ.
ಡೀಸೆಲ್: 74.63 ರೂ. (₹0.19 ಪೈಸೆ ಇಳಿಕೆ )

ರಾಷ್ಟ್ರ ರಾಜಧಾನಿ ನವದೆಹಲಿ
ಪೆಟ್ರೋಲ್: 81.06 ರೂ.
ಡೀಸೆಲ್: 70.46 ರೂ. (₹0.19 ಪೈಸೆ ಇಳಿಕೆ )

ಮಹಾರಾಷ್ಟ್ರ ರಾಜಧಾನಿ ಮುಂಬಯಿ
ಪೆಟ್ರೋಲ್: 87.74 ರೂ.
ಡೀಸೆಲ್: 76.86 ರೂ. (₹0.19 ಪೈಸೆ ಇಳಿಕೆ )

ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್:84.14 ರೂ.
ಡೀಸೆಲ್: 75.95 ರೂ. (₹0.15 ಪೈಸೆ ಇಳಿಕೆ )

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ