ಆ್ಯಪ್ನಗರ

ಪೆಟ್ರೋಲ್‌-ಡೀಸೆಲ್: ಬೆಂಗಳೂರು ಸೇರಿ ದೇಶದ ಮಹಾನಗರಗಳ ಇಂಧನ ದರ ಪಟ್ಟಿ ಇಲ್ಲಿದೆ?

ಕೊರೊನಾದ ಆರ್ಥಿಕ ಸಮಸ್ಯೆಯ ನಡುವೆ ಪೆಟ್ರೋಲ್‌ ಹಾಗೂ ಡೀಸೆಲ್‌ ದರದ ಚಿಂತೆ ಜನ ಸಾಮಾನ್ಯರಿಗೆ ಕಾಡುತ್ತಿದೆ. ಆದರೆ ಕಳೆದ ಒಂದು ವಾರದಿರಂದ ಯಾವುದೇ ಬೆಲೆ ಏರಿಕೆ ಆಗಿಲ್ಲ. ಸದ್ಯ ಸ್ಥಿರವಾಗಿದೆ. ಆದರೆ ಹೀಗೆ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಯಾವುದೇ ಸಮಯದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಏರಿಕೆಯು ಆಗಬಹುದು, ಇಳಿಯಲುಬಹುದು.

THE ECONOMIC TIMES 30 Jul 2020, 4:13 pm
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದ ಪೆಟ್ರೋಲ್‌ ಹಾಗೂ ಡೀಸೆಲ್‌ ದರದಲ್ಲಿ ಗುರುವಾರ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಇದು ಜನರನ್ನ ಕೊಂಚ ಉಸಿರುಬಿಡುವಂತೆ ಮಾಡಿದೆ. ಆದರೆ ವಾರದ ಹಿಂದೆ ಏರಿದ್ದ ದರ ಇಳಿದರೆ ಸಾಕು ಎನ್ನುತ್ತಿದ್ದಾರೆ ಜನ.

ಯಾಕೆಂದರೆ ಕೊರೊನಾ ಸಮಯದಲ್ಲಿ ಇಂಧನ ದರ ಏರಿಕೆ ಆದರೆ ಅದು ನೇರವಾಗಿ ಆಹಾರ ಸಾಮಗ್ರಿಗಳ ಮೇಲೆ ಹೊರೆ ಬೀಳುತ್ತದೆ. ಆಹಾರ ವಸ್ತುಗಳು ತುಟ್ಟಿಯಾದರೆ ಜನ ಸಾಮಾನ್ಯರಿಗೆ ಇದರಿಂದ ಭಾರೀ ತೊಂದರೆಯಾಗಲಿದೆ ಎನ್ನುವುದು ಸಾಮಾನ್ಯ ಆರ್ಥಿಕತೆ. ಹಾಗಾದರೆ ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಜು.30 ರಂದು ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ.

ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.

ಸಿಲಿಕಾನ್ ಸಿಟಿ ಬೆಂಗಳೂರು
ಪೆಟ್ರೋಲ್: 83.04 ರೂ. (ಯಾವುದೇ ಏರಿಕೆ ಇಲ್ಲ)
ಡೀಸೆಲ್: 77.88 ರೂ. (ಯಾವುದೇ ಏರಿಕೆ ಇಲ್ಲ)

ರಾಷ್ಟ್ರ ರಾಜಧಾನಿ ನವದೆಹಲಿ
ಪೆಟ್ರೋಲ್: 80.43 ರೂ.
ಡೀಸೆಲ್: 81.94 ರೂ.

ಮಹಾರಾಷ್ಟ್ರ ರಾಜಧಾನಿ ಮುಂಬೈ
ಪೆಟ್ರೋಲ್: 87.19 ರೂ.
ಡೀಸೆಲ್: 80.11 ರೂ.

ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್: 83.63 ರೂ.
ಡೀಸೆಲ್: 78.86 ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ