ಆ್ಯಪ್ನಗರ

ಬೆಂಗಳೂರು ಸೇರಿ ದೇಶದ ಮಹಾನಗರಗಳ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ? ಇಲ್ಲಿದೆ ಮಾಹಿತಿ !

ಸದ್ಯ ಪೆಟ್ರೋಲ್‌ ಡೀಸೆಲ್‌ ದರದಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ಇದು ಜನರನ್ನ ಕೊಂಚ ನಿರಾತಂಕ ಮಾಡಿದೆ. ಆದರೆ ಇಂಧನ ದರ ಇಳಿಕೆಯ ವಿಶ್ವಾಸದಲ್ಲಿ ಜನ ಸಾಮಾನ್ಯರಿದ್ದಾರೆ. ಹಾಗಾದರೆ ಆ.3ರ ಸೋಮವಾರ ಬೆಂಗಳೂರು ಸೇರಿ ಮಹಾನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ? ಇಲ್ಲಿದೆ ಮಾಹಿತಿ.

THE ECONOMIC TIMES 3 Aug 2020, 8:35 am
ಬೆಂಗಳೂರು: ಕಳೆದ ಒಂದು ವಾರಗಳಿಂದ ಪೆಟ್ರೋಲ್, ಡೀಸೆಲ್‌ ದರದಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ಹೀಗಾಗಿ ಜೇಬು ಸುಡುವ ತಲೆಬಿಸಿಯಲ್ಲಿದ್ದ ವಾಹನ ಸವಾರರಿಗೆ ಕೊಂಚ ಖುಷಿಯಾಗಿದೆ. ಆದರೆ ಪೆಟ್ರೋಲ್‌, ಡೀಸೆಲ್‌ ದರದ ಇಳಿಕೆಯಲ್ಲಿ ಜನರಿದ್ದಾರೆ. ಯಾಕಂದರೆ ಸದ್ಯ ಕೊರೊನಾದಿಂದ ಆಗಿರುವಂತಹ ಆರ್ಥಿಕ ಬಿಕಟ್ಟಿಗೆ ಹಣ ಹೊಂದಿಸುವುದು ಸವಾಲಾಗಿದೆ.
Vijaya Karnataka Web 73105469


ಇಲ್ಲಿ ಉಳಿತಾಯವಾದರೆ ಅದು ಬೇರೆ ಕಡೆಗಳಲ್ಲಿ ಬಳಸಬಹುದು ಅನ್ನುವುದು ಜನರ ಲೆಕ್ಕಚಾರವಾಗಿದೆ. ಇತ್ತೀಚೆಗೆ ದೆಹಲಿ ಸರಕಾರ ಹೊಸ ದಿಲ್ಲಿಯ ಡೀಸೆಲ್‌ ವ್ಯಾಟನ್ನ ಕಡಿತಗೊಳಿಸಿತ್ತು. ಇದರಿಂದಾಗಿ ಸುಮಾರು ಎಂಟು ರೂ. ಗ್ರಾಹಕನಿಗೆ ಲಾಭವಾಗಿತ್ತು. ಹಾಗಾದರೆ ಆ.3ರ ಸೋಮವಾರ ಬೆಂಗಳೂರು ಸೇರಿ ಮಹಾನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ? ಇಲ್ಲಿದೆ ಮಾಹಿತಿ.

ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.

ಸಿಲಿಕಾನ್ ಸಿಟಿ ಬೆಂಗಳೂರು
ಪೆಟ್ರೋಲ್: 83.11 ರೂ. (ಯಾವುದೇ ಏರಿಕೆ ಇಲ್ಲ)
ಡೀಸೆಲ್: 77.88 ರೂ. (ಯಾವುದೇ ಏರಿಕೆ ಇಲ್ಲ)

ರಾಷ್ಟ್ರ ರಾಜಧಾನಿ ನವದೆಹಲಿ
ಪೆಟ್ರೋಲ್: 80.43 ರೂ.
ಡೀಸೆಲ್: 73.56 ರೂ. (8.38 ರೂ. ಇಳಿಕೆ)

ಮಹಾರಾಷ್ಟ್ರ ರಾಜಧಾನಿ ಮುಂಬೈ
ಪೆಟ್ರೋಲ್: 87.19 ರೂ.
ಡೀಸೆಲ್: 80.11 ರೂ.

ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್: 83.63 ರೂ. (1 ಪೈಸೆ ಏರಿಕೆ)
ಡೀಸೆಲ್: 78.86 ರೂ.

11 ಲಕ್ಷ ಕೋಟಿ ರೂ. ಮೌಲ್ಯದ ಮೊಬೈಲ್‌ ಉತ್ಪಾದನೆಗೆ ಕಂಪನಿಗಳಿಂದ ಪ್ರಸ್ತಾಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ