ಆ್ಯಪ್ನಗರ

ಬೆಂಗಳೂರು ಸೇರಿ ಮಹಾನಗರಗಳ ಪೆಟ್ರೋಲ್‌, ಡೀಸೆಲ್‌ ದರ ಮಂಗಳವಾರ ಎಷ್ಟಿದೆ? ಇಲ್ಲಿದೆ ಮಾಹಿತಿ!

ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಇಳಿಕೆಯಾದರೆ ಮೊದಲು ಖುಷಿಗೊಳ್ಳುವುದು ಜನ ಸಾಮಾನ್ಯರು. ಆದರೆ ಕಳೆದ ಎರಡು ವಾರಗಳಿಂದ ಇಂಧನ ದರದಲ್ಲಿ ಇಳಿಕೆ ಕಂಡುಬರದೆ ಇರುವುದು ಜನರಿಗೆ ನಿರಾಸೆ ಮೂಡಿಸಿದೆ. ಯಾಕಂದರೆ ಹಬ್ಬ ದಿನಗಳು ಆರಂಭವಾಗುತ್ತಿರುವುದರಿಂದ ಸಾಮಾನ್ಯವಾಗಿ ಹಣ ಉಳಿಸುವ ಯೋಚನೆಯಲ್ಲಿ ಸಾಮಾನ್ಯ ಜನರು ಇರುತ್ತಾರೆ. ಅಲ್ಲದೆ ಆಹಾರ ಸಾಮಾಗ್ರಿಗಳ ಬೆಲೆ ಕೂಡ ಕಡಿಮೆಯಾಗಹುದು.

THE ECONOMIC TIMES 11 Aug 2020, 8:19 am
ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ದರದಲ್ಲಿ ದೇಶದ ಯಾವುದೇ ಪ್ರಮುಖ ನಗರಗಳಲ್ಲಿ ಏರಿಕೆ ಹಾಗೂ ಇಳಿಕೆ ಕಂಡು ಬಂದಿಲ್ಲ. ಕಳೆದ ಎರಡು ವಾರಗಳಿಂದ ಇಂಧನ ದರ ಸ್ಥಿರವಾಗಿದೆ. ಅದಕ್ಕೆ ಪ್ರಮುಖ ಕಾರಣ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರದಲ್ಲಿ ಯಾವುದೇ ಬದಲಾವಣೆ ಕಂಡುಬರದೆ ಇರುವುದು.
Vijaya Karnataka Web litre


ಆದರೂ ಹಬ್ಬ ಹರಿದಿನಗಳು ಬರುವುದರಿಂದ ಜನ ಸಾಮಾನ್ಯರು ಮಾತ್ರ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯ ವಿಶ್ವಾಸದಲ್ಲಿದ್ದಾರೆ . ಹಾಗಾದರೆ ಆಗಸ್ಟ್‌ 11ರ ಮಂಗಳವಾರ ದೇಶದ ಮಹಾನಗರಗಳಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.

ಸಿಲಿಕಾನ್ ಸಿಟಿ ಬೆಂಗಳೂರು
ಪೆಟ್ರೋಲ್: 83.11 ರೂ. (ಯಾವುದೇ ಏರಿಕೆ ಇಲ್ಲ)
ಡೀಸೆಲ್: 77.88 ರೂ. (ಯಾವುದೇ ಏರಿಕೆ ಇಲ್ಲ)

ರಾಷ್ಟ್ರ ರಾಜಧಾನಿ ನವದೆಹಲಿ
ಪೆಟ್ರೋಲ್: 80.43 ರೂ.
ಡೀಸೆಲ್: 73.56 ರೂ.

ಮಹಾರಾಷ್ಟ್ರ ರಾಜಧಾನಿ ಮುಂಬಯಿ
ಪೆಟ್ರೋಲ್: 87.19 ರೂ.
ಡೀಸೆಲ್: 80.11 ರೂ.

ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್: 83.63 ರೂ.
ಡೀಸೆಲ್: 78.86 ರೂ.

ಕದಿಯಲಾಗದ ಚಿನ್ನ; ಮೇಕಿಂಗ್‌, ವೇಸ್ಟೇಜ್‌ನ ಗೊಡವೆಯಿಲ್ಲ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ