ಆ್ಯಪ್ನಗರ

ಬೆಂಗಳೂರಿನಲ್ಲಿ ಪೆಟ್ರೋಲ್‌, ಡೀಸೆಲ್ ರೇಟ್‌ ಎಷ್ಟಿದೆ? ದೇಶದ ಮಹಾನಗರಗಳ ಇಂಧನ ದರ ಇಲ್ಲಿದೆ!

ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ರೇಟ್‌ ಎಷ್ಟಿದೆ? ಜಾಸ್ತಿಯಾಗಿದ್ಯಾ? ಹೆಚ್ಚಿದ್ಯಾ? ಇಲ್ಲಿದೆ ಈ ಬಗ್ಗೆ ವಿವರವಾದ ಮಾಹಿತಿ. ಮುಂಬಯಿ, ದೆಹಲಿ, ಚೆನ್ನೈ, ಬೆಂಗಳೂರಿನ ಇಂಧನ ದರ ಪಟ್ಟಿ ಇಲ್ಲಿದೆ.

Vijaya Karnataka Web 29 Jul 2020, 8:20 am
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದ ಪೆಟ್ರೋಲ್‌ ಹಾಗೂ ಡೀಸೆಲ್‌ ದರದಲ್ಲಿ ಬುಧವಾರ ಯಾವುದೇ ಏರಿಕೆ ಕಂಡು ಬಂದಿಲ್ಲ. ಎರಡು ದಿನಗಳಿಂದ ಪೆಟ್ರೋಲ್‌ ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದು ಮುಂದಿನ ದಿನಗಳಲ್ಲಿ ಇಂಧನ ದರಿ ಕಡಿಮೆಯಾಗುವ ಲಕ್ಷಣ ತೋರಿಸುತ್ತಿದೆ ಎನ್ನಲಾಗಿದೆ.
Vijaya Karnataka Web 73105469


ಒಂದು ವೇಳೆ ದರ ಇಳಿದರೆ ಜನರು ನಿರಾತಂಕವಾಗಿ ವಾಹನ ಓಡಿಸುವಂತಾಗಲಿದೆ. ಅಲ್ಲದೆ ಕೊರೊನಾ ಸಮಯದ ಆರ್ಥಿಕ ಬಿಕ್ಕಟ್ಟಿಗು ಇದು ವರದಾನವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಹಾಗಾದರೆ ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಜು.29ರಂದು ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ.

ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.

ಸಿಲಿಕಾನ್ ಸಿಟಿ ಬೆಂಗಳೂರು
ಪೆಟ್ರೋಲ್: 83.04 ರೂ. (ಯಾವುದೇ ಏರಿಕೆ ಇಲ್ಲ)
ಡೀಸೆಲ್: 77.88 ರೂ. (ಯಾವುದೇ ಏರಿಕೆ ಇಲ್ಲ)

ರಾಷ್ಟ್ರ ರಾಜಧಾನಿ ನವದೆಹಲಿ
ಪೆಟ್ರೋಲ್: 80.43 ರೂ.
ಡೀಸೆಲ್: 81.94 ರೂ. (15 ಪೈಸೆ ಏರಿಕೆ)

ಮಹಾರಾಷ್ಟ್ರ ರಾಜಧಾನಿ ಮುಂಬೈ
ಪೆಟ್ರೋಲ್: 87.19 ರೂ.
ಡೀಸೆಲ್: 80.11 ರೂ. (14 ಪೈಸೆ ಏರಿಕೆ)

ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್: 83.63 ರೂ.
ಡೀಸೆಲ್: 78.86 ರೂ.
ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಯೆಸ್‌ ಬ್ಯಾಂಕಿಗೆ ಶೇ.60 ನಷ್ಟ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ