ಆ್ಯಪ್ನಗರ

ಪೆಟ್ರೋಲ್, ಡೀಸೆಲ್‌ ಅಬಕಾರಿ ಸುಂಕ ಹೆಚ್ಚಿಸಿದ ಕೇಂದ್ರ : ತೈಲ ಬೆಲೆ ₹3 ತುಟ್ಟಿ!

ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್‌ ಮೇಲೆ ವಿಶೇಷ ಅಬಕಾರಿ ಸುಂಕ ವಿಧಿಸಿದ್ದು, ಪೆಟ್ರೋಲ್‌ ಬೆಲೆ 2-8 ರೂಪಾಯಿ ಏರಿಕೆಯಾಗಲಿದೆ. ಡೀಸೆಲ್‌ ಬೆಲೆ 4 ರೂಪಾಯಿ ಏರಿಕೆಯಾಗಲಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ರೋಡ್‌ ಸೆಸ್‌ಅನ್ನು ಕೂಡ ಹೆಚ್ಚಳ ಮಾಡಿದೆ.

Vijaya Karnataka Web 14 Mar 2020, 10:28 am
ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದು, ತೈಲ ಬೆಲೆ ₹3ರಷ್ಟು ಏರಿಕೆಯಾಗಲಿದೆ. ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಡಿಮೆಯಾಗಿ ಡೀಸೆಲ್, ಪೆಟ್ರೋಲ್ಗಳ ಬೆಲೆ ಇಳಿಕೆಯಾದ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಅವುಗಳ ಮೇಲಿನ ಅಬಕಾರಿ ಸುಂಕವನ್ನು 2 ರೂಪಾಯಿಯಷ್ಟು ಹೆಚ್ಚಿಸಿದೆ. ಇದರ ಪರಿಣಾಮ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಅಂದಾಜು 3 ರೂಪಾಯಿ ಏರಿಕೆಯಾಗಲಿದೆ.
Vijaya Karnataka Web petrol diesel price


ಪೆಟ್ರೋಲ್ ಮತ್ತು ಡೀಸೆಲ್‌ ಮೇಲೆ ವಿಶೇಷ ಅಬಕಾರಿ ಸುಂಕ ವಿಧಿಸಿದ್ದು, ಪೆಟ್ರೋಲ್‌ ಬೆಲೆ 2-8 ರೂಪಾಯಿ ಏರಿಕೆಯಾಗಲಿದೆ. ಡೀಸೆಲ್‌ ಬೆಲೆ 4 ರೂಪಾಯಿ ಏರಿಕೆಯಾಗಲಿದೆ.

ಪೆಟ್ರೋಲ್‌ ಮೇಲಿನ ರೋಡ್‌ ಸೆಸ್‌ ಅನ್ನು ಪ್ರತಿ ಲೀಟರ್‌ಗೆ 1 ರೂಪಾಯಿ ಏರಿಕೆ ಮಾಡಿದ್ದರೆ, ಡೀಸೆಲ್‌ ಮೇಲಿನ ರೋಡ್‌ ಸೆಸ್‌ಅನ್ನು ಪ್ರತಿ ಲೀಟರ್‌ಗೆ 10 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಮತ್ತಷ್ಟು ಇಳಿಕೆ: ಇಂದಿನ ಬೆಲೆ ವಿವರ ಹೀಗಿದೆ..

ಕರೋನಾ ವೈರಸ್ ಸೋಂಕಿನ ಕಾರಣಕ್ಕೆ ಜಾಗತಿಕವಾಗಿ ಕೆಲವೆಡೆ ಘೋಷಿತ ಮತ್ತು ಕೆಲವೆಡೆ ಅಘೋಷಿತ ಆರೋಗ್ಯ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದು, ಉತ್ಪಾದನಾ ಚಟುವಟಿಕೆ ಸೇರಿ ಹಲವು ಚಟುವಟಿಕೆಗಳು ಸ್ಥಗಿತಗೊಂಡಿವೆ. ಹೀಗಾಗೆ ತೈಲದ ಬೇಡಿಕೆಯೂ ಕುಸಿದಿದೆ. ಇದರಿಂದಾಗಿ ತೈಲ ಬೆಲೆಯೂ ಇಳಿಕೆಯಾಗಿತ್ತು.

ಜಾಗತಿಕ ವಿದ್ಯಮಾನಗಳಿಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲೂ ವ್ಯತ್ಯಯವಾಗುತ್ತದೆ. ಇದರಂತೆ, ಪೆಟ್ರೋಲ್, ಡೀಸೆಲ್ ಬೆಲೆಯೂ ಲೀಟರಿಗೆ ಅಂದಾಜು 2 ರೂಪಾಯಿ ಇಳಿಕೆಯಾಗಿತ್ತು. ಮಾರ್ಚ್ 11ರಂದು ಪೆಟ್ರೋಲ್ ಬೆಲೆ ಲೀಟರಿಗೆ 2.69 ರೂಪಾಯಿ ಇಳಿಕೆಯಾಗಿ 70.29 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಸಿಗುತ್ತಿತ್ತು. ಅದೇ ರೀತಿ, ಡೀಸೆಲ್ ಲೀಟರ್ ಬೆಲೆ 2.33 ರೂಪಾಯಿ ಕುಸಿದು 63.01 ರೂಪಾಯಿ ತಲುಪಿತ್ತು. ಇದೀಗ ಅಬಕಾರಿ ಸುಂಕ ಹೆಚ್ಚಳದಿಂದ ಮತ್ತೆ ತೈಲ ಬೆಲೆ ಏರಿಕೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ