ಆ್ಯಪ್ನಗರ

ಇಂಧನ ಬೆಲೆಗಳಲ್ಲಿ ಏರಿಳಿತ: ಪೆಟ್ರೋಲ್‌ 7 ಪೈಸೆ ಏರಿಕೆ, ಡೀಸೆಲ್‌ ಬೆಲೆ ಸ್ಥಿರ

ದೇಶದಲ್ಲಿ ಪೆಟ್ರೋಲ್‌ ಬೆಲೆ ಸ್ವಲ್ಪ ಮಟ್ಟಿನನ ಏರಿಕೆ ಕಂಡಿದ್ದರೆ, ಡೀಸೆಲ್ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಬೆಂಗಳೂರಲ್ಲಿ ಶನಿವಾರ ಪೆಟ್ರೋಲ್‌ ಬೆಲೆಯಲ್ಲಿ 7 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 77.45 ರೂ. ನಿಗದಿಯಾಗಿದೆ. ಡೀಸೆಲ್ ದರ ಸ್ಥಿರವಾಗಿದ್ದು, ಪ್ರತಿ ಲೀಟರ್‌ಗೆ 68.29 ರೂ. ನಿಗದಿಯಾಗಿದೆ.

THE ECONOMIC TIMES 14 Dec 2019, 9:27 am
ಬೆಂಗಳೂರು: ದೇಶದಲ್ಲಿ ಪೆಟ್ರೋಲ್‌ ಬೆಲೆಯಲ್ಲಿ ಶನಿವಾರ ಅಲ್ಪಮಟ್ಟಿನ ಏರಿಕೆಯಾಗಿದೆ. ದೈನಂದಿನ ಬೆಲೆ ಏರಿಳಿತ ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 77.45 ರೂಪಾಯಿ ಇದೆ. ನಿನ್ನೆಯ (ಶುಕ್ರವಾರ) ದರಕ್ಕೆ ಹೋಲಿಸಿದರೆ, ಪೆಟ್ರೋಲ್ ಬೆಲೆಯಲ್ಲಿ 7 ಪೈಸೆ ಏರಿಕೆಯಾಗಿದೆ. ಡೀಸೆಲ್ ದರದಲ್ಲಿ ಸ್ಥಿರವಾಗಿದ್ದು ಶುಕ್ರವಾರದ ದರವೇ ( 68.29ರೂ) ಮುಂದುವರಿದಿದೆ.
Vijaya Karnataka Web petrol diesel price


ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 83.17 ರೂಪಾಯಿಗೆ ತಲುಪಿದೆ. ನಿನ್ನೆಯ ಬೆಲೆಗೆ ಹೋಲಿಸಿದರೆ 6 ಪೈಸೆಯಷ್ಟು ಏರಿಕೆಯಾಗಿದೆ. ಡೀಸೆಲ್ ಬೆಲೆ 72.30 ರೂಪಾಯಿ ಇದೆ.

ಅದರಂತೆ ಮಹಾರಾಷ್ಟ್ರದ ಮುಂಬಯಿನಲ್ಲಿ ಪೆಟ್ರೋಲ್ 80.54 ರೂಪಾಯಿ ಮತ್ತು ಡೀಸೆಲ್ 70.31 ರೂಪಾಯಿ ಇದೆ.

ಔರಂಗಬಾದ್‌ನಲ್ಲಿ ಪೆಟ್ರೋಲ್ 81.57 ರೂಪಾಯಿ ನಿಗದಿಯಾಗಿದ್ದು, ನಿನ್ನೆಯ ಬೆಲೆಗೆ ಹೋಲಿಸಿದರೆ 6 ಪೈಸೆ ಏರಿಕೆಯಾಗಿದೆ. ಡೀಸೆಲ್ ಬೆಲೆ 69.27 ರೂಪಾಯಿ ಇದೆ.

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 74.89 ರೂಪಾಯಿ ಇದ್ದು, ನಿನ್ನೆಯ (ಶುಕ್ರವಾರ) ದರಕ್ಕೆ ಹೋಲಿಸಿದರೆ 6 ಪೈಸೆ ಏರಿಕೆಯಾಗಿದೆ. ಮತ್ತು ಡೀಸೆಲ್ ಬೆಲೆ 66.04 ರೂಪಾಯಿ ಇದೆ.

ತಮಿಳುನಾಡಿನ ಚೆನ್ನೈ ಮಹಾನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 77.86 ರೂಪಾಯಿ ಮತ್ತು ಡೀಸೆಲ್‌ ಬೆಲೆ 69.81 ರೂಪಾಯಿ ಇದೆ. ನಿನ್ನೆಯ ದರಕ್ಕೆ ಹೋಲಿಸಿದರೆ ಪೆಟ್ರೋಲ್‌ ದರದಲ್ಲಿ 6 ಪೈಸೆಯಷ್ಟು ಏರಿಕೆಯಾಗಿದೆ.

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಪೆಟ್ರೋಲ್ 77.55 ರೂಪಾಯಿ ಇದ್ದರೆ, ಡೀಸೆಲ್ ದರ 68.45 ರೂಪಾಯಿ ಇದೆ.

ತೈಲ ಕಂಪನಿಗಳ ಕಳೆದ ದಿನದ ಸರಾಸರಿ ಬೆಲೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಆಧರಿಸಿ ಪೆಟ್ರೋಲ್, ಡೀಸೆಲ್ ದರ ನಿರ್ಣಯವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ