ಆ್ಯಪ್ನಗರ

ಬೆಂಗಳೂರಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್, ಡೀಸೆಲ್ 11 ಪೈಸೆ ಇಳಿಕೆ

ಬೆಂಗಳೂರಲ್ಲಿ ಪೆಟ್ರೋಲ್ ದರ ಸ್ಥಿರವಾಗಿದ್ದು, ಡೀಸೆಲ್ ದರದಲ್ಲಿ 11 ಪೈಸೆ ಇಳಿಕೆಯಾಗಿದೆ.

THE ECONOMIC TIMES 18 Oct 2019, 9:56 am
ಬೆಂಗಳೂರು: ಕಳೆದ ಮೂರು ದಿನಗಳಿಂದ ಬೆಂಗಳೂರಲ್ಲಿ ಪೆಟ್ರೋಲ್ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಶುಕ್ರವಾರದ ದರ ಕೂಡ ನಿನ್ನೆ ಅಷ್ಟೇ ಇದ್ದು ಯಾವುದೇ ಬದಲಾವಣೆಯಾಗಿಲ್ಲ. ಆದರೆ ಡೀಸೆಲ್ ಬೆಲೆಯಲ್ಲಿ ಲೀಟರ್‌ಗೆ 11 ಪೈಸೆ ಇಳಿಕೆಯಾಗಿದೆ.
Vijaya Karnataka Web Petrol


ನಗರದಲ್ಲಿ ಪೆಟ್ರೋಲ್ ದರ ಮೂರು ದಿನದಿಂದ 75.72 ಇದ್ದರೆ, ಡೀಸೆಲ್ ದರ ಲೀಟರ್‌ಗೆ 68.51 ರೂಪಾಯಿ ಇದೆ. ನಿನ್ನೆ 68.62ಪೈಸಾ ಇತ್ತು.

ದೇಶದ ಎಲ್ಲ ಮಹಾನಗರಗಳಲ್ಲಿ ಬುಧವಾರ ಪೆಟ್ರೋಲ್ ಬೆಲೆ ಸ್ಥಿರವಾಗಿದ್ದು ಮತ್ತು ಡೀಸೆಲ್ ಬೆಲೆ 10, 11 ಪೈಸೆ ಇಳಿದಿದೆ. ಮುಂಬಯಿನಲ್ಲಿ ಪೆಟ್ರೋಲ್ 78.88 ರೂಪಾಯಿ ಮತ್ತು ಡೀಸೆಲ್ 69.50 ರೂಪಾಯಿ ಇದೆ.

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 73.27 ರೂಪಾಯಿ, ಡೀಸೆಲ್ ಬೆಲೆ 66.31 ರೂಪಾಯಿ ಇದೆ.

ತಮಿಳುನಾಡಿನ ಚೆನ್ನೈ ಮಹಾನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 76.09 ರೂಪಾಯಿ ಮತ್ತು ಡೀಸೆಲ್ ಬೆಲೆ 70. 04ರೂಪಾಯಿ ಇದೆ.

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಪೆಟ್ರೋಲ್ 75.92 ರೂಪಾಯಿ ಇದ್ದರೆ, ಡೀಸೆಲ್ ದರ 68.67 ರೂಪಾಯಿ ಇದೆ.

ತೈಲ ಕಂಪನಿಗಳ ಕಳೆದ ದಿನದ ಸರಾಸರಿ ಬೆಲೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಆಧರಿಸಿ ಪೆಟ್ರೋಲ್, ಡೀಸೆಲ್ ದರ ನಿರ್ಣಯವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ