ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆಯಾಗುತ್ತಿದ್ದು, ಇಂದು (ಮಂಗಳವಾರ) ಮಧ್ಯಪ್ರದೇಶದ ಭೋಪಾಲ್ ಹಾಗೂ ಮಹಾರಾಷ್ಟ್ರದ ಔರಂಗಾಬಾದ್ ಮತ್ತು ಮುಂಬಯಿನಲ್ಲಿ ಪೆಟ್ರೋಲ್ ದರ 80ರ ಗಡಿ ದಾಟಿದೆ.
ಭೋಪಾಲ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 82.67 ರೂಪಾಯಿ ಮತ್ತು ಡಿಸೇಲೆ 73.67 ರೂಪಾಯಿ ಇದ್ದರೆ, ಔರಂಗಾಬಾದ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 81.11 ರೂಪಾಯಿ ಮತ್ತು ಡಿಸೇಲ್ ದರ 71.68 ರೂಪಾಯಿ ಇದೆ.
ಕಳೆದ ವಾರದಿಂದ ಭೋಪಾಲ್ ಹಾಗೂ ಔರಂಗಾಬಾದ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಬೆಂಗಳೂರಲ್ಲಿ ಅಲ್ಪ ಏರಿಕೆ ಕಂಡ ಪೆಟ್ರೋಲ್ ದರ
ದೈನಂದಿನ ಬೆಲೆ ಏರಿಕೆ ಪ್ರಕ್ರಿಯೆಯಲ್ಲಿ ಇಂದು (ಮಂಗಳವಾರ) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 76.97 ರೂಪಾಯಿ ಇದ್ದರೆ, ಡೀಸೆಲ್ ದರ 69.63 ರೂಪಾಯಿ ಇದೆ. ನಿನ್ನೆಯ (ಸೋಮವಾರ) ದರಕ್ಕೆ ಹೋಲಿಸಿದರೆ, ನಗರದಲ್ಲಿ ತೈಲ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.
ಭೋಪಾಲ್, ಔರಂಗಾಬಾದ್ನಲ್ಲಿ 80ರ ಗಡಿ ದಾಟಿದ ಪೆಟ್ರೋಲ್
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ದರ 74.42 ರೂಪಾಯಿ ಮತ್ತು ಡೀಸೆಲ್ 67.33 ರೂಪಾಯಿ ಇದೆ. ಮಹಾರಾಷ್ಟ್ರದ ಮುಂಬಯಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 80.08 ರೂಪಾಯಿ ಮತ್ತು ಡೀಸೆಲ್ 70.64 ರೂಪಾಯಿ ತಲುಪಿದೆ.
ತಮಿಳುನಾಡಿನ ಚೆನ್ನೈ ಮಹಾನಗರದಲ್ಲಿ ಪೆಟ್ರೋಲ್ ದರ 77.36 ರೂಪಾಯಿ ಮತ್ತು ಡಿಸೇಲ್ ಬೆಲೆ 71.19 ರೂಪಾಯಿ ಇದೆ. ಅದರಂತೆ, ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಪೆಟ್ರೋಲ್ 77.10 ರೂಪಾಯಿ ಮತ್ತು ಡೀಸೆಲ್ 70.64 ರೂಪಾಯಿ ಇದೆ.