ಆ್ಯಪ್ನಗರ

ಪೆಟ್ರೋಲ್‌, ಡೀಸೆಲ್‌ ದರ ಯಥಾಸ್ಥಿತಿ: ಬೆಂಗಳೂರಿನ ಬೆಲೆ ವಿವರ ಇಲ್ಲಿದೆ

ಬೆಂಗಳೂರು ಸೇರಿ ರಾಷ್ಟ್ರದ ಎಲ್ಲ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನು,ಬೆಂಗಳೂರು ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಲ್ಲಿದೆ ನೋಡಿ.

Vijaya Karnataka Web 21 Feb 2020, 9:28 am
ಬೆಂಗಳೂರು: ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ದರ ಇಳಿಕೆಗೆ ಬ್ರೇಕ್‌ ಬಿದ್ದಿದ್ದು, 2 ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್‌ ದರ ರೂ.74.34 ಇದೆ.
Vijaya Karnataka Web petrol bunk vk


ಇನ್ನು, ರಾಷ್ಟ್ರದ ಎಲ್ಲ ಮೆಟ್ರೊ ನಗರಗಳಲ್ಲೂ ಪೆಟ್ರೋಲ್‌ ದರ ಎರಡು ದಿನಗಳಿಂದ ಒಂದೇ ಇದೆ. ಒಂದು ಲೀಟರ್‌ ಪೆಟ್ರೋಲ್‌ ದರ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 71.89 ರೂ., ಚೆನ್ನೈನಲ್ಲಿ 74.68 ರೂ., ಕೋಲ್ಕತಾದಲ್ಲಿ 74.53 ರೂ. ಹಾಗೂ ವಾಣಿಜ್ಯ ನಗರಿ ಮುಂಬಯಿನಲ್ಲಿ 77.56 ರೂ. ಇದೆ.

ಬೆಂಗಳೂರು ಸೇರಿ ದೇಶದ ಬಹುತೇಕ ನಗರಗಳಲ್ಲಿ ಡೀಸೆಲ್‌ ದರ ಸಹ ನಿನ್ನೆಯಷ್ಟೇ ಇದೆ. ಬೆಂಗಳೂರಿನಲ್ಲಿ ಲೀಟರ್‌ ಒಂದಕ್ಕೆ ರೂ. 66.84 ಇದೆ. ರಾಷ್ಟ್ರ ಇತರ ಮೆಟ್ರೊ ನಗರಗಳ ಪೈಕಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ರೂ. 64.65 ಇದೆ. ಚೆನ್ನೈನಲ್ಲಿ 68.27 ರೂ., ಕೋಲ್ಕತಾದಲ್ಲಿ 66.97 ರೂ. ಹಾಗೂ ಮುಂಬಯಿನಲ್ಲಿ 67.75 ರೂ. ಇದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲ ದರ 3,909 ರೂ. ಇದೆ.

ಸೂಚನೆ: ದೈನಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪರಿಷ್ಕರಣೆಯು ವಿತರಣಾ ಕಂಪನಿಗಳು ಮತ್ತು ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸಗಳು ಇರುತ್ತವೆ ಎಂಬುದನ್ನು ಗ್ರಾಹಕರು ಗಮನಿಸತಕ್ಕದ್ದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ