ಆ್ಯಪ್ನಗರ

ಬೆಂಗಳೂರಲ್ಲಿ ಕಳೆದ ಐದು ದಿನಗಳಲ್ಲಿ ಪೆಟ್ರೋಲ್‌ ದರ 1 ರೂ. ಕಡಿಮೆಯಾಗಿದೆ

ರಾಷ್ಟ್ರದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆಯಾಗುತ್ತಿದ್ದು ಗ್ರಾಹಕರಲ್ಲಿ ಕೊಂಚ ನೆಮ್ಮದಿ ನೀಡಿದೆ. ಬೆಂಗಳೂರಲ್ಲಿ ಪೆಟ್ರೋಲ್‌ ದರ 17 ಪೈಸೆ ಕಡಿಮೆಯಾದರೆ, ಡೀಸೆಲ್‌ ದರ 21 ಪೈಸೆ ಕಡಿಮೆಯಾಗಿದೆ.

Vijaya Karnataka Web 22 Jan 2020, 8:35 am
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಪೆಟ್ರೋಲ್‌ ದರ ನಿರಂತರವಾಗಿ ಇಳಿಕೆ ಕಂಡು ಬಂದಿದೆ. ಕಳೆದ 10 ದಿನಗಳಲ್ಲಿ 1.30 ರೂ.ಗಳಷ್ಟು ಕಡಿಮೆಯಾಗಿದೆ. ಜನವರಿ 12ರಂದು ಬೆಂಗಳೂರಲ್ಲಿ ಪೆಟ್ರೋಲ್‌ ದರ 78.44 ರೂ. ಇತ್ತು. ಇದೀಗ ಲೀಟರ್‌ ಒಂದಕ್ಕೆ ಪೆಟ್ರೋಲ್‌ ದರ 77.32 ರೂ. ಇದೆ.
Vijaya Karnataka Web Bharath Petroleum


ರಾಷ್ಟ್ರದ ಎಲ್ಲ ಮೆಟ್ರೊ ನಗರಗಳಲ್ಲು ಕೆಲವು ದಿನಗಳಿಂದ ಪ್ರತಿ ದಿನ 10-15 ಪೈಸೆ ಇಳಿಕೆಯಾಗುತ್ತಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 74.82 ರೂ. ಇದೆ. ಚೆನ್ನೈನಲ್ಲಿ 77.72 ರೂ., ಕೋಲ್ಕತಾದಲ್ಲಿ 77.42 ರೂ., ಹಾಗೂ ವಾಣಿಜನ್ಯ ನಗರಿ ಮುಂಬಯಿನಲ್ಲಿ ಪೆಟ್ರೋಲ್‌ ದರ 80.42 ರೂ. ಇದೆ.

ಎಲ್ಲ ಮೆಟ್ರೊ ನಗರಗಳಲ್ಲಿ ಡೀಸಲ್‌ ದರವೂ ಕಡಿಮೆಯಾಗುತ್ತಿದೆ. ಬೆಂಗಳೂರಿನಲ್ಲಿ 21 ಪೈಸೆ ಕಡಿಮೆಯಾಗಿದ್ದು, ಇದೀಗ ಡೀಸೆಲ್‌ ದರ 70.32 ರೂ. ಇದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 68.05 ರೂ., ಚೆನ್ನೈನಲ್ಲಿ 71.90 ರೂ., ಕೋಲ್ಕತಾದಲ್ಲಿ 70.41 ರೂ. ಹಾಗೂ ವಾಣಿಜ್ಯ ನಗರಿ ಮುಂಬಯಿನಲ್ಲಿ 71.35 ರೂ. ಇದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲ ದರ 4,181 ರೂ. ಇದೆ.

ಸೂಚನೆ: ದೈನಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪರೀಷ್ಕರಣೆಯು ವಿತರಣಾ ಕಂಪನಿಗಳು ಮತ್ತು ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸಗಳು ಇರುತ್ತವೆ ಎಂಬುದನ್ನು ಗ್ರಾಹಕರು ಗಮನಿಸತಕ್ಕದ್ದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ