ಆ್ಯಪ್ನಗರ

ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್‌, ಡೀಸೆಲ್‌ ದರ: ಇಂದಿನ ಬೆಲೆ ವಿವರ ಇಲ್ಲಿದೆ..

ಪ್ರತಿದಿನವೂ ಪರಿಷ್ಕೃತಗೊಳ್ಳುವ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕಳೆದ ಒಂದು ತಿಂಗಳಿನಿಂದ ವ್ಯತ್ಯಾಸ ಕಂಡು ಬಂದಿಲ್ಲ. ಆದರೆ ರಾಜ್ಯ ಬಜೆಟ್‌ಗಳಲ್ಲಿ ತೆರಿಗೆ ಏರಿಕೆ ಪರಿಣಾಮಗಳಿಂದ ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಏಪ್ರಿಲ್‌ 1 ರಿಂದ ಬೆಲೆ ಏರಿಕೆಯಾಗಿದೆ.

Vijaya Karnataka Web 26 Apr 2020, 7:29 am
ಬೆಂಗಳೂರು: ದೇಶದಲ್ಲಿ ಲಾಕ್‌ಡೌನ್‌ ಸ್ವಲ್ಪ ಮಟ್ಟಿಗೆ ಸಡಿಲಿಕೆ ಆಗುತ್ತಿದ್ದು, ವಾಹನಗಳು ಕ್ರಮೇಣವಾಗಿ ರಸ್ತೆಗಿಳಿಯಯುತ್ತಿವೆ. ಭಾನುವಾರ ಬೆಂಗಳೂರು ಸೇರಿ ದೇಶದೆಲ್ಲೆಡೆ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
Vijaya Karnataka Web petrol bunk bccl 123


ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್‌ ದರ 73.55 ರೂ. ಇದ್ದು, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್‌ ದರ ಪ್ರಸ್ತುತ 69.59 ರೂ. ಇದೆ. ಇನ್ನು, ಚೆನ್ನೈನಲ್ಲಿ 72.28 ರೂ. ಕೋಲ್ಕತದಲ್ಲಿ 73.30 ರೂ. ಹಾಗೂ ವಾಣಿಜ್ಯ ನಗರಿ ಮುಂಬಯಿನಲ್ಲಿ 76.31 ರೂ. ಇದೆ.

ಇನ್ನೊಂದೆಡೆ, ಬೆಂಗಳೂರು ಸೇರಿದಂತೆ ರಾಷ್ಟ್ರದ ಪ್ರಮುಖ ನಗರಗಳಲ್ಲಿ ಡೀಸೆಲ್‌ ದರ ಸಹ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ ಒಂದು ಲೀಟರ್‌ ಡೀಸೆಲ್‌ ದರ 65.96 ರೂ. ಇದ್ದು, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 62.29 ರೂ., ಚೆನ್ನೈನಲ್ಲಿ 65.71 ರೂ., ಕೋಲ್ಕತದಲ್ಲಿ 65.62 ರೂ., ಹಾಗೂ ಮುಂಬಯಿನಲ್ಲಿ 66.21 ರೂ. ಇದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲ ದರ 1,355 ರೂ. ಇದೆ.

ಸೂಚನೆ: ದೈನಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪರಿಷ್ಕರಣೆಯು ವಿತರಣಾ ಕಂಪನಿಗಳು ಮತ್ತು ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸಗಳು ಇರುತ್ತವೆ ಎಂಬುದನ್ನು ಗ್ರಾಹಕರು ಗಮನಿಸತಕ್ಕದ್ದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ