ಆ್ಯಪ್ನಗರ

ಭೋಪಾಲ್, ಔರಂಗಾಬಾದ್‌ನಲ್ಲಿ 80ರ ಗಡಿ ದಾಟಿದ ಪೆಟ್ರೋಲ್: ಬೆಂಗಳೂರಿನಲ್ಲಿ ಇಂದಿನ ದರ?

ಮಧ್ಯಪ್ರದೇಶದ ಭೋಪಾಲ್ ಹಾಗೂ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಪೆಟ್ರೋಲ್ ದರ 80ರ ಗಡಿದಾಟಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

Vijaya Karnataka Web 29 Sep 2019, 11:13 am
ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆಯಾಗುತ್ತಿದ್ದು, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ 80ರ ಗಡಿದಾಟಿದೆ.
Vijaya Karnataka Web petrol


ಸೌದಿ ಅರೇಬಿಯಾದ ಆರಾಮ್ಕೊ ಕಂಪೆನಿಯ ತೈಲ ಘಟಕಗಳ ಮೇಲಿನ ಬಂಡುಕೋರರ ದಾಳಿ ಹಾಗೂ ಆರ್ಥಿಕ ಕುಸಿತದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿದೆ. ದೈನಂದಿನ ಬೆಲೆ ಏರಿಕೆ ಪ್ರಕ್ರಿಯೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಭಾನುವಾರ) ಪ್ರತಿ ಲೀಟರ್ ಪೆಟ್ರೋಲ್ ಬೆಲೆ 76.88 ರೂಪಾಯಿ ಹಾಗೂ ಡೀಸೆಲ್ ಬೆಲೆ 69.53 ರೂಪಾಯಿ ಇದೆ. ಶನಿವಾರದ ದರಕ್ಕೆ ಹೋಲಿಸಿದರೆ, ರಾಜ್ಯದಲ್ಲಿ ತೈಲ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.

ಮುಂಬೈಯಲ್ಲಿ 80ರೂಗೆ ಏರಿದ ಪೆಟ್ರೋಲ್ ದರ, ಬೆಂಗಳೂರಲ್ಲಿ 76.88 ರೂ

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 74.34 ರೂಪಾಯಿ ಹಾಗೂ ಡಿಸೇಲ್ ಬೆಲೆ 67.24 ರೂಪಾಯಿ ಇದೆ. ವಾಣಿಜ್ಯ ನಗರಿ ಮುಂಬಯಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 80 ರೂಪಾಯಿಗೆ ತಲುಪಿದ್ದರೆ, ಡಿಸೇಲ್ ದರ 70.55 ರೂಪಾಯಿ ಆಗಿದೆ.

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 77.03 ರೂಪಾಯಿ ಮತ್ತು ಡೀಸೆಲ್ ದರ 69.66 ರೂಪಾಯಿ. ತಮಿಳುನಾಡಿನ ಚೆನ್ನೈ ಮಹಾನಗರದಲ್ಲಿ ಪೆಟ್ರೋಲ್ 77.28 ರೂಪಾಯಿ ಹಾಗೂ ಡಿಸೇಲ್ 71.09 ರೂಪಾಯಿ ಇದೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 82.59 ರೂಪಾಯಿ ತಲುಪಿದ್ದರೆ, ಡಿಸೇಲ್ ದರ 73.57 ರೂಪಾಯಿ ಇದೆ. ಅಂತೆಯೇ, ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಪೆಟ್ರೋಲ್ 81.03 ರೂಪಾಯಿ ಹಾಗೂ ಡಿಸೇಲ್ 71.59 ರೂಪಾಯಿ ಇದೆ.

ತೈಲ ಕಂಪೆನಿಗಳ ಕಳೆದ ದಿನಗಳ ಸರಾಸರಿ ದರ ಆಧರಿಸಿ ಪೆಟ್ರೋಲ್, ಡೀಸೆಲ್ ಬೆಲೆ ನಿರ್ಣಯವಾಗುತ್ತದೆ ಎನ್ನುವುದು ಗಮನಾರ್ಹ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ