ಆ್ಯಪ್ನಗರ

ಬೆಂಗಳೂರಲ್ಲಿ ಪೆಟ್ರೋಲ್‌ ದರ 76.06 ರೂ.

ರಾಷ್ಟ್ರದ ಎಲ್ಲ ಮೆಟ್ರೊ ನಗರಗಳಲ್ಲಿ ಪೆಟ್ರೋಲ್‌ ದರದಲ್ಲಿಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಬುಧವಾರವಿದ್ದ ದರವೇ ಇಂದು ಮುಂದುವರಿದಿದೆ. ಬೆಂಗಳೂರಲ್ಲಿ ಪೆಟ್ರೋಲ್‌ ದರ 76.06 ರೂ. ಇದೆ.

THE ECONOMIC TIMES 30 Jan 2020, 8:51 am
ಬೆಂಗಳೂರು: ಜನವರಿ 22ರಂದು ಬೆಂಗಳೂರಲ್ಲಿ ಒಂದು ಲೀಟರ್‌ ಪೆಟ್ರೋಲ್‌ ದರ 77.32 ರೂ. ಇತ್ತು. ಇದೀಗ 1 ರೂ. 30 ಪೈಸೆಗಳಷ್ಟು ಕಡಿಮೆಯಾಗಿದ್ದು 76.06 ರೂ.ಗೆ ತಲುಪಿದೆ. ಇತ್ತೀಚಿನ ದಿನಗಳಲ್ಲಿ 10-15 ಪೈಸೆ ದಿನನಿತ್ಯ ಕಡಿಮೆಯಾಗುತ್ತಿದೆ.
Vijaya Karnataka Web petrol pump


ರಾಷ್ಟ್ರದ ಎಲ್ಲ ಮೆಟ್ರೊ ನಗರಗಳಲ್ಲಿ ಪೆಟ್ರೋಲ್‌ ದರ 11-12 ಪೈಸೆ ಕಡಿಮೆಯಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಇಂದಿನ ಪೆಟ್ರೋಲ್‌ ದರ 73.60 ರೂ., ಚೆನ್ನೈನಲ್ಲಿ 76.44 ರೂ., ಕೋಲ್ಕತಾದಲ್ಲಿ 76.22 ರೂ. ಹಾಗೂ ವಾಣಿಜ್ಯ ನಗರಿ ಮುಂಬಯಿನಲ್ಲಿ 79.21 ರೂ. ಇದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯೂ ಇಳಿಕೆಯಾಗಿತ್ತಿದೆ. ಇದರ ಪರಿಣಾಮ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಇಳಿಕೆಯಾಗುತ್ತಿವೆ. ಎಂದಿನಂತೆ ಡೀಸೆಲ್‌ ದರದಲ್ಲಿ 14 ಪೈಸೆ ಇಳಿಕೆಯಾಗಿದ್ದು ಬೆಂಗಳೂರಿನಲ್ಲಿ ಡೀಸೆಲ್‌ ದರ 68.79 ರೂ. ಇದೆ. ಇನ್ನು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 66.58 ರೂ., ಚೆನ್ನೈನಲ್ಲಿ 70.33 ರೂ., ಕೋಲ್ಕತಾದಲ್ಲಿ 68.94 ರೂ. ಹಾಗೂ ಮುಂಬಯಿನಲ್ಲಿ 69.79 ರೂ. ಇದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲ ದರ 3,809 ರೂ. ಇದೆ.

ಸೂಚನೆ: ದೈನಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪರೀಷ್ಕರಣೆಯು ವಿತರಣಾ ಕಂಪನಿಗಳು ಮತ್ತು ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸಗಳು ಇರುತ್ತವೆ ಎಂಬುದನ್ನು ಗ್ರಾಹಕರು ಗಮನಿಸತಕ್ಕದ್ದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ