ಆ್ಯಪ್ನಗರ

ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಅಲ್ಪ ಇಳಿಕೆ: 80 ರ ಗಡಿಯಲ್ಲೇ ಉಳಿದಿರುವ ಬೆಲೆ

ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿದಿನವೂ ಏರಿಳಿತ ಸಾಮಾನ್ಯ. ಬೆಂಗಳೂರಲ್ಲಿ ಇಂದು ಪೆಟ್ರೋಲ್‌ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದ್ದು, ಪ್ರತಿ ಲೀಟರ್‌ಗೆ 76.36 ರೂ. ನಿಗದಿಯಾಗಿದೆ. ಡೀಸೆಲ್‌ ಬೆಲೆ 69.38 ರೂ.ಗೆ ನಿಗದಿಯಾಗಿದೆ.

Vijaya Karnataka Web 6 Oct 2019, 12:02 pm
ಬೆಂಗಳೂರು: ದೇಶದ ಪ್ರಮುಖ ಮಹಾನಗರಗಳಲ್ಲಿ ತೈಲ ದರದಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು, ದೈನಂದಿನ ಬೆಲೆ ಏರಿಳಿತ ಪ್ರಕ್ರಿಯಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 76.36 ರೂಪಾಯಿ ಇದೆ. ನಿನ್ನೆಯ (ಶನಿವಾರ) ದರಕ್ಕೆ ಹೋಲಿಸಿದರೆ, ಪೆಟ್ರೋಲ್ ಬೆಲೆ 15 ಪೈಸೆಯಷ್ಟು ಇಳಿಕೆ ಕಂಡಿದೆ. ಡೀಸೆಲ್ ದರ 69.38ರೂ.ಗೆ ನಿಗದಿಯಾಗಿದ್ದು, ನಿನ್ನೆಯ ದರಕ್ಕೆ ಹೋಲಿಸಿದರೆ, 21 ಪೈಸೆಯಷ್ಟು ಇಳಿಕೆ ಕಂಡಿದೆ.
Vijaya Karnataka Web petrol diesel price


ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 82.05 ರೂಪಾಯಿಗೆ ತಲುಪಿದ್ದರೆ, ಡೀಸೆಲ್ ಬೆಲೆ 73.30ರೂಪಾಯಿ ಇದೆ.

ಅದರಂತೆ ಮಹಾರಾಷ್ಟ್ರದ ಮುಂಬಯಿನಲ್ಲಿ ಪೆಟ್ರೋಲ್ 79.65 ರೂಪಾಯಿ ಮತ್ತು ಡೀಸೆಲ್ 70.61 ರೂಪಾಯಿ ಇದೆ. ಔರಂಗಾಬಾದ್‌ನಲ್ಲಿ ಪೆಟ್ರೋಲ್ 80.53 ರೂಪಾಯಿ ಮತ್ತು ಡೀಸೆಲ್ 71.65 ರೂಪಾಯಿ ಇದೆ. ಕಳೆದೊಂದು ವಾರದಿಂದ ಈ ಮೂರು ನಗರಗಳಲ್ಲಿ ಪೆಟ್ರೋಲ್ ದರ 80ರ ಗಡಿ ದಾಟುತ್ತಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.

ತೈಲ ದರದಿಂದ ತತ್ತರಿಸಿದ ಮುಂಬಯಿ ಜನತೆ: ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 73.89 ರೂಪಾಯಿ ಇದ್ದು, ನಿನ್ನೆಯ (ಶುಕ್ರವಾರ) ದರಕ್ಕೆ ಹೋಲಿಸಿದರೆ 15ವಪೈಸೆಯಷ್ಟು ಇಳಿಕೆಯಾಗಿದೆ. ಮತ್ತು ಡೀಸೆಲ್ 67.03 ರೂಪಾಯಿ ಇದ್ದು, ನಿನ್ನೆಯ (ಶುಕ್ರವಾರ) ದರಕ್ಕೆ ಹೋಲಿಸಿದರೆ, ಡೀಸೆಲ್‌ ದರದಲ್ಲಿ 12 ಪೈಸೆಯಷ್ಟು ಇಳಿಕೆಯಾಗಿದೆ.

ತಮಿಳುನಾಡಿನ ಚೆನ್ನೈ ಮಹಾನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 76.74 ರೂಪಾಯಿ ಮತ್ತು ಡೀಲೆಸ್ ಬೆಲೆ 70.81ರೂಪಾಯಿ ಇದೆ.

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಪೆಟ್ರೋಲ್ 76.53 ರೂಪಾಯಿ ಇದ್ದರೆ, ಡೀಸೆಲ್ ದರ 69.39 ರೂಪಾಯಿ ಇದೆ.

ತೈಲ ಕಂಪನಿಗಳ ಕಳೆದ ದಿನದ ಸರಾಸರಿ ಬೆಲೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಆಧರಿಸಿ ಪೆಟ್ರೋಲ್, ಡೀಸೆಲ್ ದರ ನಿರ್ಣಯವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ