ಆ್ಯಪ್ನಗರ

ಬುಧವಾರದ ಟ್ರೆಂಡಿಂಗ್‌ ಷೇರುಗಳು: ಎಲ್‌&ಟಿ, ಬಿಎಲ್ ಕಶ್ಯಪ್ ಅಂಡ್ ಸನ್ಸ್, ಟೊರೆಂಟ್‌ ಪವರ್‌

ಬುಧವಾರದ ಬೆಳಗ್ಗಿನ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 95.56 ಅಂಕ ಅಥವಾ ಶೇ.0.15ರಷ್ಟು ಏರಿಕೆ ಕಂಡು 62,888.44ಕ್ಕೆ ತಲುಪಿದ್ದರೆ, ನಿಫ್ಟಿ 50 ಸೂಚ್ಯಂಕ 52.55 ಅಂಕ ಅಥವಾ ಶೇ.0.28ರಷ್ಟು ಗಳಿಕೆ ಕಂಡು 18,651.55ಕ್ಕೆ ಮುಟ್ಟಿತ್ತು. ಮಧ್ಯಾಹ್ನದ ವೇಳೆಗೆ ಸೂಚ್ಯಂಕಗಳು ತಮ್ಮ ಗಳಿಕೆಯನ್ನು ಹೆಚ್ಚಿಸಿಕೊಂಡಿದ್ದು, ಈ ವೇಳೆ ಲಾರ್ಸೆನ್ & ಟೂಬ್ರೊ, ಬಿಎಲ್ ಕಶ್ಯಪ್ ಅಂಡ್ ಸನ್ಸ್ ಲಿಮಿಟೆಡ್ ಹಾಗೂ ಟೊರೆಂಟ್ ಪವರ್ ಷೇರುಗಳು ಟ್ರೆಂಡಿಂಗ್‌ನಲ್ಲಿದ್ದವು.

DSIJ 7 Jun 2023, 2:03 pm
ಬೆಳಗ್ಗಿನ ವಹಿವಾಟಿನಲ್ಲಿ ಪ್ರಮುಖ ಮಾರುಕಟ್ಟೆ ಸೂಚ್ಯಂಕಗಳು ಅಲ್ಪ ಗಳಿಕೆಯೊಂದಿಗೆ ವಹಿವಾಟು ನಡೆಸಿದವು. ರಿಯಾಲ್ಟಿ ಷೇರುಗಳು ಸತತ ಆರನೇ ವಹಿವಾಟಿನಲ್ಲಿ ಏರಿಕೆ ಕಂಡಿವೆ. ಪ್ರಮುಖ ಸೂಚ್ಯಂಕ ಎಸ್‌&ಪಿ ಬಿಎಸ್‌ಇ ಸೆನ್ಸೆಕ್ಸ್ 95.56 ಅಂಕ ಅಥವಾ ಶೇ. 0.15ರಷ್ಟು ಏರಿಕೆ ಕಂಡು 62,888.44ಕ್ಕೆ ತಲುಪಿದೆ. ನಿಫ್ಟಿ 50 ಸೂಚ್ಯಂಕ 52.55 ಅಂಕ ಅಥವಾ ಶೇ. 0.28ರಷ್ಟು ಏರಿಕೆ ಕಂಡು 18,651.55ಕ್ಕೆ ಮುಟ್ಟಿದೆ.
Vijaya Karnataka Web Top Trending Stock


ವಿಶಾಲ ಮಾರುಕಟ್ಟೆಯು ಮುಖ್ಯ ಸೂಚ್ಯಂಕಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಎಸ್‌&ಪಿ ಬಿಎಸ್‌ಇ ಮಿಡ್-ಕ್ಯಾಪ್ ಸೂಚ್ಯಂಕವು ಶೇ. 0.85ರಷ್ಟು ಏರಿಕೆ ಕಂಡಿದೆ. ಇದೇ ವೇಳೆ ಎಸ್‌&ಪಿ ಬಿಎಸ್‌ಇ ಸ್ಮಾಲ್-ಕ್ಯಾಪ್ ಸೂಚ್ಯಂಕವು ಶೇ. 1.04ರಷ್ಟು ಲಾಭ ದಾಖಲಿಸಿದೆ.

ಜೂನ್‌ 7, 2023 ಬುಧವಾರದ ಈ ಟ್ರೆಂಡಿಂಗ್ ಷೇರುಗಳನ್ನು ಸೂಕ್ಷ್ಮವಾಗಿ ಗಮನಿಸಿ:

ಲಾರ್ಸೆನ್ & ಟೂಬ್ರೊ: ಕಂಪನಿಯ ಕಟ್ಟಡಗಳು ಮತ್ತು ಕಾರ್ಖಾನೆಗಳ (ಬಿ&ಎಫ್) ವಿಭಾಗವು ಭಾರತದಲ್ಲಿ 1,000 ದಿಂದ 2,500 ಕೋಟಿ ರೂ.ವರೆಗಿನ ಇಪಿಸಿ ಆರ್ಡರ್‌ಗಳನ್ನು ಪಡೆದುಕೊಂಡಿದೆ ಎಂದು ಲಾರ್ಸೆನ್ ಆಂಡ್‌ ಟೂಬ್ರೊ ಲಿಮಿಟೆಡ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ. ಮುಂಬೈನಲ್ಲಿ ಎರಡು ವಾಣಿಜ್ಯ ಗೋಪುರಗಳನ್ನು ನಿರ್ಮಿಸುವ ಗುತ್ತಿಗೆಯನ್ನು ಪ್ರತಿಷ್ಠಿತ ಡೆವಲಪರ್ ಸಂಸ್ಥೆಯು ಕಂಪನಿಗೆ ನೀಡಿದೆ.

ಬಿಎಲ್ ಕಶ್ಯಪ್ ಅಂಡ್ ಸನ್ಸ್ ಲಿಮಿಟೆಡ್:
ಕಂಪನಿಯು ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಜ್ಯೂರಿ ಪುಣೆ ನಾಲೆಡ್ಜ್ ಪಾರ್ಕ್ ಪ್ರೈವೇಟ್ ಲಿಮಿಟೆಡ್‌ನಿಂದ 147 ಕೋಟಿ ರೂ. ಮೌಲ್ಯದ ಹೊಸ ಆರ್ಡರ್‌ನ್ನು ಸ್ವೀಕರಿಸಿರುವುದಾಗಿ ತಿಳಿಸಿದೆ. ಆರ್ಡರ್‌ ಎಲ್ಲಾ ಸಿವಿಲ್‌ ಮತ್ತು ರಚನಾತ್ಮಕ ಕೆಲಸಗಳು ಹಾಗೂ ಇತರ ಪೂರಕ ಚಟುವಟಿಕೆಗಳನ್ನು ಒಳಗೊಂಡಿದೆ. ಈ ಒಪ್ಪಂದದ ಪ್ರಕಾರ ಯೋಜನೆಯು 27 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಟೊರೆಂಟ್ ಪವರ್: ಟೊರೆಂಟ್ ಪವರ್ ಲಿಮಿಟೆಡ್ ಮಂಗಳವಾರದ ಷೇರು ಪೇಟೆ ವಹಿವಾಟು ಅವಧಿ ಮುಗಿದ ನಂತರ ಸಲ್ಲಿಸಿದ ವಿನಿಮಯ ಫೈಲಿಂಗ್‌ನಲ್ಲಿ ಒಟ್ಟು 5,700 ಮೆಗಾವ್ಯಾಟ್ ಸಾಮರ್ಥ್ಯದ ಮೂರು ಪಂಪ್ಡ್ ಸ್ಟೋರೇಜ್ ಹೈಡ್ರೋ ಪ್ರಾಜೆಕ್ಟ್‌ಗಳ ಅಭಿವೃದ್ಧಿಗಾಗಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿರುವುದಾಗಿ ಹೇಳಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಜಾರಿಗೊಳಿಸಲಿರುವ ಈ ಯೋಜನೆಗಳ ಅಂದಾಜು ವೆಚ್ಚ 27,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ನಿರ್ಮಾಣದ ಅವಧಿಯಲ್ಲಿ ಸರಿಸುಮಾರು 13,500 ಜನರಿಗೆ ಉದ್ಯೋಗ ಸಿಗಲಿದ್ದು, ಐದು ವರ್ಷಗಳ ಅವಧಿಯಲ್ಲಿ ಈ ಯೋಜನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ.

Disclaimer: ಈ ಲೇಖನವನ್ನು ಭಾರತದ ನಂ.1 ಹೂಡಿಕೆ ನಿಯತಕಾಲಿಕ 'ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್'ನಿಂದ ನಡೆಸಲಾಗುತ್ತಿದೆ. ಲಾಭದಾಯಕ ಷೇರುಗಳ ಬಗ್ಗೆ ನಿಯಮಿತವಾಗಿ ಮಾಹಿತಿ ಮತ್ತು ಶಿಫಾರಸುಗ ಳನ್ನು ಪಡೆಯಲು ಇಲ್ಲಿ ಕ್ಲಿಕ್
ಮಾಡುವ ಮೂಲಕ ಸೇರಿಕೊಳ್ಳಿ.

Disclaimer: This above is third-party content and TIL hereby disclaims any and all warranties, express or implied, relating to the same. TIL does not guarantee, vouch for or endorse any of the above content or its accuracy nor is responsible for it in any manner whatsoever. The content does not constitute any investment advice or solicitation of any kind. Users are advised to check with certified experts before taking any investment decision and take all steps necessary to ascertain that any information and content provided is correct, updated and verified.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ