ಆ್ಯಪ್ನಗರ

ಹುಬ್ಬೇರಿಸಬೇಡಿ, ಈ ಕಂಪನಿಯಲ್ಲಿ 2 ವರ್ಷ ಹಿಂದೆ ₹1 ಲಕ್ಷ ಹೂಡಿಕೆ ಮಾಡಿದ್ದಲ್ಲಿ ನೀವಿಂದು ₹20.81 ಲಕ್ಷದ ಒಡೆಯರಾಗ್ತಿದ್ರಿ!

ಬೋರೋಸಿಲ್‌ ರಿನ್ಯೂವಬಲ್ ಲಿ. ಷೇರುಗಳು ಕಳೆದ ಒಂದು ವರ್ಷದಲ್ಲಿ ಶೇ. 140ರಷ್ಟು ಏರಿಕೆ ಕಂಡಿದ್ದು, ಎರಡು ವರ್ಷಗಳ ಅವಧಿಯಲ್ಲಿ ಕಂಡು ಕೇಳರಿಯದ ಶೇ. 1981 ಅಥವಾ 19 ಪಟ್ಟು ಲಾಭ ನೀಡಿವೆ!

DSIJ 29 Mar 2022, 1:23 pm
ಸೌರ ಗಾಜು (ಸೋಲಾರ್‌ ಗ್ಲಾಸ್‌) ಸೋಲಾರ್ ಪ್ಯಾನಲ್‌ನ ಪ್ರಮುಖ ಘಟಕಾಂಶವಾಗಿದ್ದು, ಪ್ಯಾನಲ್‌ ಮಾಡ್ಯೂಲ್‌ನ ಉತ್ಪಾದನೆಯ ವೆಚ್ಚದಲ್ಲಿ ಇದರ ಪಾಲೇ ಶೇ. 7-8ರಷ್ಟಿರುತ್ತದೆ. ಸೋಲಾರ್ ಗ್ಲಾಸ್‌ನ ಹೆಚ್ಚಿನ ಭಾಗವನ್ನು ಚೀನಾ ಮತ್ತು ಮಲೇಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದರೂ, ಸೋಲಾರ್ ಗ್ಲಾಸ್ ವಿಭಾಗದಲ್ಲಿ ಮೂರನೇ ಒಂದರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ದೇಶೀಯ ಕಂಪನಿಯೆಂದರೆ ಅದು ಬೊರೊಸಿಲ್ ರಿನ್ಯೂವಬಲ್ ಲಿ.
Vijaya Karnataka Web borosil


ಬೋರೋಸಿಲ್‌ ರಿನ್ಯೂವಬಲ್ ಲಿ. ಕಳೆದ ಒಂದು ವರ್ಷದಲ್ಲಿ ಶೇ. 140ರಷ್ಟು ಏರಿಕೆ ಕಂಡಿದ್ದು, ಎರಡು ವರ್ಷಗಳ ಅವಧಿಯಲ್ಲಿ ಕಂಡು ಕೇಳರಿಯದ ಶೇ. 1981 ಅಥವಾ 19 ಪಟ್ಟು ಲಾಭ ನೀಡಿದೆ.

* ಒಂದೊಮ್ಮೆ ಈ ಕಂಪನಿಯಲ್ಲಿ ಆರು ತಿಂಗಳ ಹಿಂದೆ ನೀವು 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ ಅದೇ ಹಣ ಇಂದು 1,93,660 ರೂ. ಆಗಿರುತ್ತಿತ್ತು. ಅಂದರೆ ಪ್ರತಿ ಷೇರಿನ ಮೇಲೆ ಶೇ. 93.66 ಲಾಭ ನಿಮ್ಮದಾಗುತ್ತಿತ್ತು.

* ಅದೇ ಈ ಷೇರಿನಲ್ಲಿ ನೀವು ವರ್ಷದ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ ಇಂದು ನಿಮ್ಮ ಹಣ 2,39,930 ರೂ. ಆಗಿರುತ್ತಿತ್ತು. ಅಂದರೆ ಪ್ರತಿ ಷೇರಿನ ಮೇಲೆ ಶೇ. 139.93ರಷ್ಟು ಲಾಭವನ್ನು ನೀವು ಗಳಿಸಬಹುದಾಗಿತ್ತು.

* ಒಂದೊಮ್ಮೆ ಎರಡು ವರ್ಷದ ಹಿಂದೆ ಇದೇ ಷೇರಿನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ದಲ್ಲಿ ನೀವು ಇಂದು ಬರೋಬ್ಬರಿ 20,81,240 ಲಕ್ಷ ರೂ.ಗಳ ಮಾಲಿಕರಾಗುತ್ತಿದ್ರಿ. ಅಂದರೆ ಪ್ರತಿ ಷೇರಿನ ಮೇಲೆ ನಿಮಗೆ ಶೇ. 1981.24ರಷ್ಟು ಲಾಭ ಸಿಗುತ್ತಿತ್ತು.

ಬೋರೋಸಿಲ್‌ ರಿನ್ಯೂವಬಲ್ ಲಿ. (ಬಿಆರ್‌ಎಲ್‌) ತನ್ನ ಗಾಜಿನ ಸಾಮರ್ಥ್ಯವನ್ನು 180 ಟಿಪಿಡಿಯಿಂದ 450 ಟಿಪಿಡಿಗೆ ವಿಸ್ತರಿಸಿದೆ. ಇದು ವಾರ್ಷಿಕವಾಗಿ 2.5 ಗಿಗಾವ್ಯಾಟ್ ಸೋಲಾರ್ ಮಾಡ್ಯೂಲ್‌ಗಳ ಉತ್ಪಾದನೆಗೆ ಸಮಾನವಾಗಿದೆ. ಕಂಪನಿಯು ತನ್ನ ಸೌರ ಗಾಜಿನ ಉತ್ಪಾದನಾ ಸಾಮರ್ಥ್ಯವನ್ನು ದಿನಕ್ಕೆ 450 ಟನ್‌ಗಳಿಂದ 1000 ಟಿಪಿಡಿಗೆ ಏರಿಕೆ ಮಾಡಲಿದ್ದು, ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಿದೆ. 2024ರ ವೇಳೆಗೆ ಸಾಮರ್ಥ್ಯವನ್ನು ಹಂತ ಹಂತವಾಗಿ 2,100 ಟಿಪಿಡಿಗೆ ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ. ಹೆವಿ ಕ್ಯಾಪೆಕ್ಸ್ ಮತ್ತು ವಿಸ್ತರಣೆ ಯೋಜನೆಗಳು 2022ರ ವೇಳೆಗೆ 100 ಗಿಗಾವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಘಟಕಗಳನ್ನು ಸ್ಥಾಪಿಸುವ ಸರ್ಕಾರದ ಗುರಿಗೆ ಅನುಗುಣವಾಗಿದೆ. 2030ರ ವೇಳೆಗೆ ಇದನ್ನು 300 ಗಿಗಾವ್ಯಾಟ್‌ಗೆ ಹೆಚ್ಚಿಸುವ ಗುರಿಯನ್ನು ಸರಕಾರ ಹಾಕಿಕೊಂಡಿದೆ.

ಕಂಪನಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಡಿಸೆಂಬರ್ 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ನಿವ್ವಳ ಆದಾಯದಲ್ಲಿ ಶೇ. 20.26ರಷ್ಟು ಏರಿಕೆಯನ್ನು ವರದಿ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಂಪನಿಯ ಲಾಭದಲ್ಲಿ ಶೇ. 332.36ರಷ್ಟು ಏರಿಕೆಯಾಗಿದ್ದು 45.73 ಕೋಟಿ ರೂ.ಗಳಿಗೆ ತಲುಪಿದೆ. ಇದೇ ವೇಳೆ 27.14% ಮಾರ್ಜಿನ್‌ ಇದೆ. 2020ರ ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಪಿಎಟಿ (PAT) ಮಾರ್ಜಿನ್ 1960 ಮೂಲ ಅಂಕಗಳಷ್ಟು ಹೆಚ್ಚಾಗಿದೆ.

ಹೆಚ್ಚಿನ ಲಾಭ ಮತ್ತು ಮಾರ್ಜಿನ್ ಬೆಳವಣಿಗೆ, ಮಹತ್ವಾಕಾಂಕ್ಷೆಯ ವಿಸ್ತರಣೆ ಯೋಜನೆಗಳು ಮತ್ತು ಉದ್ಯಮದ ಬೆಳವಣಿಗೆಯ ಅವಕಾಶಗಳು ಮಾರುಕಟ್ಟೆಯ ಮುಂಚೂಣಿಯಲ್ಲಿರುವ ಬಿಆರ್‌ಎಲ್‌ ಪರವಾಗಿರುವಂತೆ ತೋರುತ್ತಿವೆ. ಆದಾಗ್ಯೂ, ಋಣಾತ್ಮಕ ಅಂಶಗಳಿಗೆ ಬಂದಾಗ ಏರುತ್ತಿರುವ ತೈಲ ಬೆಲೆಗಳು ಬಿಆರ್‌ಎಲ್‌ಗೆ ಚಿಂತೆಯ ವಿಷಯವಾಗಿರಬಹುದು. ಇದು 2022 ರಲ್ಲಿಯೂ ತನ್ನ ಮಲ್ಟಿಬ್ಯಾಗರ್ ಹಣೆಪಟ್ಟಿಗೆ ತಕ್ಕಂತೆ ಪ್ರದರ್ಶನ ನೀಡಲಿದೆಯೇ ಎಂಬುದನ್ನು ವೀಕ್ಷಿಸಬೇಕಾಗಿದೆ!

ಬಿಆರ್‌ಎಲ್‌ನ ಷೇರುಗಳು ಡಿಸೆಂಬರ್ 17 ರಂದು 52-ವಾರಗಳ ಗರಿಷ್ಠ ಮಟ್ಟ 748 ರೂ. ಅನ್ನು ತಲುಪಿತ್ತು ಮತ್ತು ಪ್ರಸ್ತುತ 41.13ರ ಟಿಟಿಎಂ ಪಿಇ (TTM PE) ಗುಣಾತ್ಮಕತೆಯೊಂದಿಗೆ 568 ರೂ.ಗಳಲ್ಲಿ ವಹಿವಾಟು ನಡೆಸುತ್ತಿದೆ. ಬಿಆರ್‌ಎಲ್‌ 7,664 ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.

ಷೇರು ಮಾರುಕಟ್ಟೆಗೆ ಹೊಸಬರೇ? 1986 ರಿಂದ ಭಾರತದ #1 ಹೂಡಿಕೆ ಪತ್ರಿಕೆಯಾಗಿರುವ "ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್" ನ ಮನೆಯ ಕ್ರಾಂತಿಕಾರಿ ಉತ್ಪನ್ನದಲ್ಲಿ ನಿಮ್ಮ 'ಮೊದಲ ಹೆಜ್ಜೆ'ಯನ್ನು ಇಡಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Disclaimer:This above is third party content and TIL hereby disclaims any and all warranties, express or implied, relating to the same. TIL does not guarantee, vouch for or endorse any of the above content or its accuracy nor is responsible for it in any manner whatsoever. The content does not constitute any investment advice or solicitation of any kind. Users are advised to check with certified experts before taking any investment decision and take all steps necessary to ascertain that any information and content provided is correct, updated and verified.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ