ಆ್ಯಪ್ನಗರ

ಕಪ್ ಮತ್ತು ಹ್ಯಾಂಡಲ್ ಮಾದರಿ ಬ್ರೇಕ್ಔಟ್ ಸಾಧಿಸಿದೆ ಅರಿಹಂತ್ ಕ್ಯಾಪಿಟಲ್ ಮಾರ್ಕೆಟ್ಸ್!

ಅರಿಹಂತ್ ಕ್ಯಾಪಿಟಲ್ ಮಾರ್ಕೆಟ್ಸ್ ಸೋಮವಾರದ ವಹಿವಾಟಿನಲ್ಲಿ ಶೇ. 3 ಕ್ಕಿಂತ ಹೆಚ್ಚು ಗಳಿಕೆ ದಾಖಲಿಸಿದ್ದು, ಕಂಪನಿಯ ಷೇರುಗಳು ತನ್ನ 49 ತಿಂಗಳ ಕಪ್ ಮತ್ತು ಹ್ಯಾಂಡಲ್ ಮಾದರಿಯಲ್ಲಿ ಇಂದೇ ಬ್ರೇಕ್ಔಟ್ ಸಾಧಿಸಿದೆ

DSIJ 3 Jan 2022, 12:23 pm
ಅರಿಹಂತ್ ಕ್ಯಾಪಿಟಲ್ ಮಾರ್ಕೆಟ್ಸ್ (BSE ಕೋಡ್ 511605) ಇಂದು ಶೇ. 3 ಕ್ಕಿಂತ ಹೆಚ್ಚು ಗಳಿಕೆ ದಾಖಲಿಸಿದೆ. ಕಂಪನಿಯ ಷೇರುಗಳು ತನ್ನ 49-ತಿಂಗಳ ಕಪ್ ಮತ್ತು ಹ್ಯಾಂಡಲ್ ಮಾದರಿಯಲ್ಲಿ ಇಂದು ಬ್ರೇಕ್ಔಟ್ ಸಾಧಿಸಿದೆ. ವಾಲ್ಯೂಮ್‌ನಲ್ಲಿನ ಏರಿಕೆಯಿಂದ ಈ ಬ್ರೇಕ್‌ಔಟ್ ಸಾಧ್ಯವಾಗಿದೆ. ಇದು ಇಂದು ತನ್ನ ತಾಜಾ 52 ವಾರಗಳ ಗರಿಷ್ಠ ಷೇರು ದರ 208 ರೂ. ತಲುಪಿದೆ. ಷೇರು 130-135 ಹಂತಗಳ ಬಳಿ ತನ್ನ ಬೇಸ್ ಅನ್ನು ರಚಿಸಿಕೊಂಡಿದ್ದು ಮತ್ತು ಅಲ್ಲಿಂದ ಬಲವಾದ ಪುನರಾಗಮನವನ್ನು ಮಾಡಿದೆ. ಈ ವಾದವನ್ನು ಬೆಂಬಲಿಸುವಂತೆ ಆರ್‌ಎಸ್ಐ ಗೂಳಿ ಜಿಗಿತದ ಪ್ರವೃತ್ತಿ ತೋರಿಸುತ್ತಿದೆ. ಅಲ್ಲದೆ, ಟ್ರೆಂಡ್‌ನ್ನು ಸೂಚಿಸುವ ಎಡಿಎಕ್ಸ್ 37ರಲ್ಲಿದೆ ಮತ್ತು ಸ್ಥಿರವಾಗಿ ಏರುತ್ತಿದೆ. ಹೆಚ್ಚುತ್ತಿರುವ ಎಡಿಎಕ್ಸ್ ಪ್ರಬಲವಾದ ಷೇರು ಬೆಲೆ ಏರಿಕೆಯ ಸಂಕೇತವಾಗಿದೆ.
Vijaya Karnataka Web Arihant image resized


ಎಂಎಸಿಡಿ ಹಿಸ್ಟೋಗ್ರಾಮ್ ಕೂಡ ಹೆಚ್ಚುತ್ತಿದೆ. ಇದು ಷೇರಿನ ಹೆಚ್ಚಿನ ದರಕ್ಕೆ ಏರಿಕೆಯಾಗುವ ಉತ್ತಮ ಸಾಮರ್ಥ್ಯವನ್ನು ಸೂಚಿಸುತ್ತದೆ. ಇದರೊಂದಿಗೆ, ಎಲ್ಡರ್ ಇಂಪಲ್ಸ್ ಸಿಸ್ಟಮ್ ಹೊಸ ಖರೀದಿ ಸಂಕೇತವನ್ನು ನೀಡುತ್ತಿದೆ. ಮ್ಯಾನ್ಸ್‌ಫೀಲ್ಡ್ ರಿಲೇಟಿವ್ ಸ್ಟ್ರೆಂತ್ ಇಂಡಿಕೇಟರ್ ಒಂದು ದೊಡ್ಡ ಮಾರ್ಜಿನ್‌ನಿಂದ ವಿಶಾಲ ಮಾರುಕಟ್ಟೆಗಳ ವಿರುದ್ಧ ಷೇರು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎನ್ನುವುದನ್ನು ಸೂಚಿಸುತ್ತದೆ. ಕಪ್ ಮತ್ತು ಹ್ಯಾಂಡಲ್ ಮಾದರಿಯ ಪ್ರಕಾರ, ಷೇರು ಮಧ್ಯಮದಿಂದ ದೀರ್ಘಾವಧಿಯವರೆಗೆ 300+ ಮಟ್ಟವನ್ನು ಕ್ಲೈಮ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಚಾರ್ಟ್‌ಗಳಲ್ಲಿ ವ್ಯಕ್ತಪಡಿಸಿದಂತೆ, ಕಳೆದ ವರ್ಷದಲ್ಲಿ ಷೇರುಗಳು ತನ್ನ ಹೂಡಿಕೆದಾರರಿಗೆ ಸುಮಾರು ಶೇ. 156 ರಷ್ಟು ಆದಾಯವನ್ನು ನೀಡಿವೆ. ಒಂದು ತಿಂಗಳ ಅಲ್ಪಾವಧಿಯಲ್ಲಿಯೂ ಸಹ, ಷೇರು ತನ್ನ ಬೆಲೆಯಲ್ಲಿ ಶೇ. 34 ಕ್ಕಿಂತ ಹೆಚ್ಚು ಹೆಚ್ಚಳವನ್ನು ವರದಿ ಮಾಡಿದೆ. ಇದು ಷೇರುಗಳು ಹೊಂದಿರುವ ಬಲವಾದ ಟ್ರೆಂಡ್‌ ಅನ್ನು ತೋರಿಸುತ್ತದೆ.

ಅರಿಹಂತ್ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಭಾರತದ ಪ್ರಮುಖ ಹಣಕಾಸು ಸೇವಾ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯು ವ್ಯಕ್ತಿಗಳು ಮತ್ತು ಹಣಕಾಸು ಸಂಸ್ಥೆಗಳಂಥ ಪ್ರಮುಖ ಮತ್ತು ವೈವಿಧ್ಯಮಯ ಗ್ರಾಹಕರಿಗೆ ಭದ್ರತೆಗಳು ಮತ್ತು ಸರಕುಗಳ ಬ್ರೋಕಿಂಗ್, ಹಣಕಾಸು ಯೋಜನೆ, ಠೇವಣಿ ಸೇವೆಗಳು ಮತ್ತು ವ್ಯಾಪಾರಿ ಬ್ಯಾಂಕಿಂಗ್ ಸೇವೆಗಳನ್ನು ಒಳಗೊಂಡಂತೆ ಉತ್ಪನ್ನಗಳು ಮತ್ತು ಸೇವೆಗಳ ಹರವುಗಳನ್ನು ಒದಗಿಸುತ್ತದೆ. ಇಂತಹ ವೈವಿಧ್ಯಮಯ ವ್ಯವಹಾರ ಮತ್ತು ಬಲವಾದ ವ್ಯವಹಾರ ನಿರ್ವಹಣೆಯೊಂದಿಗೆ, ಮುಂಬರುವ ದಿನಗಳಲ್ಲಿ ಷೇರುಗಳು ಹೊಸ ಗರಿಷ್ಠ ಮಟ್ಟವನ್ನು ತಲುಪಲು ಸಿದ್ಧವಾಗಿದೆ.

ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ. ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು.

ಹಕ್ಕುತ್ಯಾಗ ( Disclaimer): ಮೇಲಿನ ವಿಷಯವನ್ನು ದಲಾಲ್‌ ಸ್ಟ್ರೀಟ್‌ ಇನ್ವೆಸ್ಟ್‌ಮೆಂಟ್‌ ಜರ್ನಲ್‌ (DSIJ)ಪರವಾಗಿ ಬರೆಯಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಥವಾ ಸೂಚಿಸಿದ, ಅದಕ್ಕೆ ಸಂಬಂಧಿಸಿದ ಎಲ್ಲ ವಾರಂಟಿಗಳನ್ನು ಟಿಐಎಲ್‌ ನಿರಾಕರಿಸುತ್ತದೆ. ಒದಗಿಸಿರುವ ಯಾವುದೇ ಮಾಹಿತಿ ಮತ್ತು ವಿಷಯವು ಸರಿಯಾಗಿದೆ, ನವೀಕರಿಸಲಾಗಿದೆ ಮತ್ತು ಪರಿಶೀಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ