ಆ್ಯಪ್ನಗರ

ಅದಾನಿ-ಹಿಂಡೆನ್‌ಬರ್ಗ್ ಪ್ರಕರಣ: ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ್‌

Adani Hindenburg Case: ಅದಾನಿ ವಿರುದ್ಧ ಜನವರಿಯಲ್ಲಿ ಶಾರ್ಟ್‌ ಸೆಲ್ಲರ್‌ ಹಿಂಡನ್‌ಬರ್ಗ್ ರಿಸರ್ಚ್ ಮಾಡಿದ್ದ ವಿವಿಧ ಆರೋಪಗಳ ಬಗ್ಗೆ ತಾನು ನಡೆಸಿದ ತನಿಖೆಯ ವರದಿಯನ್ನು ಸೆಬಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಈ ನಡುವೆ ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಇನ್ನೊಂದೆಡೆ ಅದಾನಿ ಷೇರುಗಳ ಬೆಲೆ ಕುಸಿದಿದ್ದರಿಂದ 12 ಸಂಸ್ಥೆಗಳಿಗೆ ಲಾಭವಾಗಿದೆ ಎಂದು ಇ.ಡಿ ಪತ್ತೆ ಹಚ್ಚಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಮಾಡಿದೆ.

Written byಎನ್‌. ಸಚ್ಚಿದಾನಂದ | Agencies 29 Aug 2023, 7:21 pm

ಹೈಲೈಟ್ಸ್‌:

  • ಅದಾನಿ ವಿರುದ್ಧ ಜನವರಿಯಲ್ಲಿ ವಿವಿಧ ಆರೋಪಗಳನ್ನು ಮಾಡಿದ್ದ ಶಾರ್ಟ್‌ ಸೆಲ್ಲರ್‌ ಹಿಂಡನ್‌ಬರ್ಗ್ ರಿಸರ್ಚ್
  • ಹಿಂಡನ್‌ಬರ್ಗ್‌ ಆರೋಪಗಳ ಬಗ್ಗೆ ತಾನು ನಡೆಸಿದ ತನಿಖೆಯ ವರದಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಸೆಬಿ
  • ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Hindenburg report
ಅದಾನಿ-ಹಿಂಡನ್‌ಬರ್ಗ್‌ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿಕೆ ಮಾಡಿದೆ. ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿಯು ತನ್ನ ತನಿಖೆಗೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ನಡುವೆಯೇ ವಿಚಾರಣೆಯನ್ನು ಮುಂದೂಡಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಭಾರತದ ಮುಖ್ಯ ನ್ಯಾಯಾಧೀಶರ ನೇತೃತ್ವದ ಸಾಂವಿಧಾನಿಕ ಪೀಠವು ಜಮ್ಮು ಮತ್ತು ಕಾಶ್ಮೀರದಲ್ಲಿನ 370ನೇ ವಿಧಿಯ ರದ್ದತಿಯನ್ನು ಪ್ರಶ್ನಿಸಿದ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಮುಂದುವರಿಸಲು ತೀರ್ಮಾನಿಸಿದ್ದು, ಅದಾನಿ ಪ್ರಕರಣದ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

ಬಂದರಿನಿಂದ ಇಂಧನದವರೆ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಸಂಘಟಿತ ಸಂಸ್ಥೆ ಅದಾನಿ ವಿರುದ್ಧ ಜನವರಿಯಲ್ಲಿ ಶಾರ್ಟ್‌ ಸೆಲ್ಲರ್‌ ಹಿಂಡನ್‌ಬರ್ಗ್ ರಿಸರ್ಚ್ ವಿವಿಧ ಆರೋಪಗಳನ್ನು ಮಾಡಿತ್ತು. ಈ ಆರೋಪಗಳ ಸಂಬಂಧ ನಡೆಸಿದ ತನಿಖೆಯ ವರದಿಯನ್ನು ಸೆಬಿ ಆಗಸ್ಟ್ 25 ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

ಪಟ್ಟಭದ್ರ ಹಿತಾಸಕ್ತಿಗಳಿಂದ ಹಿಂಡನ್‌ಬರ್ಗ್‌ ವರದಿಯ ದುರ್ಬಳಕೆ: ಅದಾನಿ ಕಿಡಿ
ಗಮನಾರ್ಹ ಸಂಖ್ಯೆಯ ಘಟಕಗಳು ಕಡಲಾಚೆಯ ತೆರಿಗೆ ಸ್ವರ್ಗಗಳಲ್ಲಿ ನೆಲೆಗೊಂಡಿವೆ. ಹೀಗಾಗಿ 12 ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆದಾರರ (ಎಫ್‌ಪಿಐ) ಷೇರುದಾರರ ಹಣಕಾಸಿನ ಪಾಲನ್ನು ನಿರ್ಧರಿಸುವುದು ತನಿಖೆಯಲ್ಲಿ ಸವಾಲಿನ ಅಂಶವಾಗಿದೆ ಎಂದು ಸೆಬಿ ತನ್ನ ವರದಿಯಲ್ಲಿ ಹೇಳಿದೆ.

ಸಂಘಟಿತ ಸಂಸ್ಥೆಯೊಂದಿಗೆ ತೊಡಗಿಸಿಕೊಂಡಿರುವ ವಿದೇಶಿ ಹೂಡಿಕೆದಾರರ ಹಿಂದಿರುವ ನಿಜವಾದ ಫಲಾನುಭವಿಗಳನ್ನು ಗುರುತಿಸಲು ಐದು ಕಡಲಾಚೆಯ ತೆರಿಗೆ ಸ್ವರ್ಗಗಳಿಂದ ದತ್ತಾಂಶಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಸೆಬಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಅದಾನಿ ಷೇರುಗಳ ಬೆಲೆ ಕುಸಿದಿದ್ದರಿಂದ 12 ಸಂಸ್ಥೆಗಳಿಗೆ ಲಾಭವಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಪತ್ತೆ ಹಚ್ಚಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯು ಹೇಳಿದೆ. ಶಾರ್ಟ್-ಸೆಲ್ಲರ್‌ಗಳಲ್ಲಿ ಎರಡು ಭಾರತೀಯ ಕಂಪನಿಗಳೂ ಸೇರಿದ್ದು, ಒಂದು ನವದೆಹಲಿಯಲ್ಲಿ ಮತ್ತು ಇನ್ನೊಂದು ಮುಂಬೈನಲ್ಲಿ ನೋಂದಾವಣೆಗೊಂಡಿದೆ ಎಂದು ವರದಿ ವಿವರ ನೀಡಿದೆ.

ಇವರಲ್ಲಿ ದೆಹಲಿ ಮೂಲದ ಕಂಪನಿಯ ಮಾಲೀಕರು, ಹೂಡಿಕೆದಾರರಿಗೆ ವಂಚಿಸಿದ ಮತ್ತು ಷೇರು ಮಾರುಕಟ್ಟೆಯಲ್ಲಿ ಮ್ಯಾನುಪ್ಯುಲೇಷನ್‌ ನಡೆಸಿದ ಆರೋಪ ಹೊಂದಿದ್ದು, ಇವರು ಸೆಬಿಯಿಂದ ಆದೇಶವನ್ನೂ ಪಡೆದವರಾಗಿದ್ದಾರೆ ಎಂದು ವರದಿ ಹೇಳಿದೆ.

ಅಮೆರಿಕದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಹಿಂಡನ್‌ಬರ್ಗ್‌ ರಿಸರ್ಚ್ ಎತ್ತಿದ ಆಡಳಿತದ ಆತಂಕಗಳಿಗೆ ಪ್ರತಿಕ್ರಿಯೆಯಾಗಿ ಸೆಬಿ ಸಂಸ್ಥೆಯು ಗೌತಮ್ ಅದಾನಿ ನೇತೃತ್ವದ ಗುಂಪಿನ ಬಗ್ಗೆ ತನಿಖೆಯನ್ನು ಪ್ರಾರಂಭಿಸಿತ್ತು. ಹಿಂಡನ್‌ಬರ್ಗ್‌ ವರದಿಯಿಂದ ಒಂದು ಹಂತದಲ್ಲಿ ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯ ಸುಮಾರು 150 ಬಿಲಿಯನ್‌ ಡಾಲರ್‌ಗಳಷ್ಟು ಕುಸಿತ ಕಂಡಿತ್ತು.
ಲೇಖಕರ ಬಗ್ಗೆ
ಎನ್‌. ಸಚ್ಚಿದಾನಂದ
2019ರಿಂದ ವಿಜಯ ಕರ್ನಾಟಕ ವೆಬ್‌ನಲ್ಲಿ ಉಪಸಂಪಾದಕರಾಗಿದ್ದಾರೆ. 2015ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಇವರು ಸದ್ಯ ‘ವಿಕ’ ವೆಬ್‌ನ ವಾಣಿಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ