ಆ್ಯಪ್ನಗರ

ಏರಿಕೆ ಹಾದಿಗೆ ಮರಳಿದ ಸೆನ್ಸೆಕ್ಸ್‌, ನಿಫ್ಟಿ; ಅಪ್ಪರ್‌ ಸರ್ಕ್ಯೂಟ್‌ ತಲುಪಿವೆ ಐದು ಷೇರುಗಳು

ಭಾರತೀಯ ಮಾರುಕಟ್ಟೆಗಳು ತಮ್ಮ ಹಿಂದಿನ ಕುಸಿತದಿಂದ ಹೊರ ಬಂದಿದ್ದು, ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಗೂಳಿಯಂತೆ ಜಿಗಿತ ಕಂಡಿವೆ. ಸೆನ್ಸೆಕ್ಸ್ 700ಕ್ಕಿಂತ ಹೆಚ್ಚು ಅಂಕ ಗಳಿಕೆ ಕಂಡಿದ್ದು ಮತ್ತೆ 58,000 ಮಟ್ಟಕ್ಕೆ ಏರಿಕೆಯಾಗಿದೆ.

DSIJ 28 Jan 2022, 12:53 pm
ಭಾರತೀಯ ಮಾರುಕಟ್ಟೆಗಳು ತಮ್ಮ ಹಿಂದಿನ ಕುಸಿತದಿಂದ ನಿಟ್ಟುಸಿರು ಪಡೆದುಕೊಂಡಿದ್ದು, ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಗೂಳಿಯಂತೆ ಜಿಗಿಯುತ್ತಾ ಸಾಗಿದೆ. ಸೆನ್ಸೆಕ್ಸ್ 58,000 ಅಂಕಗಳನ್ನು ಮರಳಿ ಗಳಿಸಿದ್ದು, 58,039ರಲ್ಲಿ ವಹಿವಾಟು ಮುಂದುವರಿಸಿದೆ. ಇಂದಿನ ವಹಿವಾಟಿನಲ್ಲಿ ಎಲ್‌ಐಸಿ ಹೌಸಿಂಗ್ ಫೈನಾನ್ಸ್, ಜೆಎಸ್‌ಡಬ್ಲ್ಯೂ ಹೋಲ್ಡಿಂಗ್, ಗುಜರಾತ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್, ಅರವಿಂದ್ ಮತ್ತು ಹಿಕಲ್ ಷೇರುಗಳು ಶೇ. 8 ಕ್ಕಿಂತ ಹೆಚ್ಚು ಗಳಿಕೆ ದಾಖಲಿಸಿವೆ. ಇದೇ ವೇಳೆ ಸ್ವರಾಜ್ ಎಂಜಿನಿಯರಿಂಗ್, ಜೆಬಿ ಕೆಮಿಕಲ್ಸ್ ಆಂಡ್‌ ಫಾರ್ಮಾಸ್ಯುಟಿಕಲ್ಸ್ ಮತ್ತು ವೈಭವ್ ಗ್ಲೋಬಲ್ ತಲಾ ಶೇ. 4 ಕ್ಕಿಂತ ಹೆಚ್ಚು ಕುಸಿತ ಕಂಡಿದ್ದು, ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಹೆಚ್ಚಿನ ನಷ್ಟ ಅನುಭವಿಸಿವೆ.
Vijaya Karnataka Web Penny stocks in upper circuit


ನಿಫ್ಟಿ 50 ಸೂಚ್ಯಂಕ 17,350 ಮಟ್ಟವನ್ನು ಮರಳಿ ಗಳಿಸಿ ಇದೀಗ 17,344ರಲ್ಲಿ ವಹಿವಾಟು ಮುಂದುವರಿಸಿದೆ. ನಿನ್ನೆಯ ವಹಿವಾಟಿಗಿಂತ 234 ಅಂಕ ಅಥವಾ ಶೇ. 1.37ರಷ್ಟು ಗಳಿಕೆ ಕಂಡಿದೆ. ಇದೇ ರೀತಿ ನಿಫ್ಟಿ ಬ್ಯಾಂಕ್ 166 ಅಂಕಗಳ ಜಿಗಿತದೊಂದಿಗೆ 38,148.35 ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ನಿಫ್ಟಿ ಮಿಡ್‌ಕ್ಯಾಪ್ 203 ಅಂಕಗಳ ಏರಿಕೆಯೊಂದಿಗೆ 8,552.15 ಮಟ್ಟದಲ್ಲಿ ವಹಿವಾಟು ಮುಂದುವರಿಸಿದೆ.

ನಿಫ್ಟಿ 50 ಸೂಚ್ಯಂಕದಲ್ಲಿ ಇಂದಿನ ಬೆಳಗಿನ ಅವಧಿಯಲ್ಲಿ ಎನ್‌ಟಿಪಿ, ಒಎನ್‌ಜಿಸಿ, ಮಹೀಂದ್ರಾ & ಮಹೀಂದ್ರಾ, ಇಂಡಸ್‌ಇಂಡ್‌ ಬ್ಯಾಂಕ್‌ ಷೇರುಗಳು ಲಾಭ ಗಳಿಸಿದವು. ಆದರೆ, ಮಾರುತಿ, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಹಿಂದೂಸ್ತಾನ್ ಯೂನಿಲಿವರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಕುಸಿತ ಕಂಡವು.

ಇಂದು ಅಪ್ಪರ್ ಸರ್ಕ್ಯೂಟ್‌ನಲ್ಲಿ ಲಾಕ್ ಆಗಿರುವ ಸಣ್ಣ ಪುಟ್ಟ ಕಂಪನಿಗಳ ಷೇರುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಮುಂಬರುವ ಸೆಷನ್‌ಗಳಿಗಾಗಿ ಈ ಕೌಂಟರ್‌ಗಳ ಮೇಲೆ ಕಣ್ಣಿಟ್ಟಿರಿ.

ಕ್ರಮ ಸಂಖ್ಯೆಷೇರಿನ ಹೆಸರುಎಲ್‌ಟಿಪಿಪ್ರೈಸ್‌ ಗೇಯ್ನ್ (%)
1ವಿಕಾಸ್‌ ಇಕೋಟೆಕ್‌ 6.654.72
2ಎಂಪಿಎಸ್‌ ಇನ್ಫೋಟೆಕ್ನಿಕ್ಸ್‌ 1.653.13
3ಕನ್ಸೋಲ್‌ ಕನ್‌ಸ್ಟ್ರಕ್ಷನ್‌ 2.83.7
4ಅಂಟಾರ್ಟಿಕಾ ಲಿ. 3.053.39
5ಗೋಯೆಂಕಾ ಡೈಮಂಡ್‌3.754.17

ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ. ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು.

Disclaimer: This above is third party content and TIL hereby disclaims any and all warranties, express or implied, relating to the same. TIL does not guarantee, vouch for or endorse any of the above content or its accuracy nor is responsible for it in any manner whatsoever. The content does not constitute any investment advice or solicitation of any kind. Users are advised to check with certified experts before taking any investment decision and take all steps necessary to ascertain that any information and content provided is correct, updated and verified.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ