ಆ್ಯಪ್ನಗರ

ಅದಾನಿ ಷೇರುಗಳ ಅಬ್ಬರದಿಂದ 220 ಅಂಕ ಲಾಭದಲ್ಲಿದೆ ಸೆನ್ಸೆಕ್ಸ್‌; ಅಪ್ಪರ್‌ ಸರ್ಕ್ಯೂಟ್‌ನಲ್ಲಿವೆ 5 ಪೆನ್ನಿ ಷೇರುಗಳು

ಮಂಗಳವಾರ ಬೆಳಗ್ಗೆ ಬಿಎಸ್‌ಇ ಸೆನ್ಸೆಕ್ಸ್ ಶೇ.0.33ರಷ್ಟು ಗಳಿಕೆ ಕಂಡು 62,165 ಮಟ್ಟವನ್ನು ತಲುಪಿತ್ತು. ಇದೇ ವೇಳೆ ನಿಫ್ಟಿ 50 ಸೂಚ್ಯಂಕವು ಶೇ.0.43ರಷ್ಟು ಏರಿಕೆ ಕಂಡು 18,392 ಮಟ್ಟಕ್ಕೆ ಮುಟ್ಟಿತ್ತು. ಅದಾನಿ ಗ್ರೂಪ್‌ನ ಬಹುತೇಕ ಷೇರುಗಳು ಆಯಾ ಅಪ್ಪರ್‌ ಸರ್ಕ್ಯೂಟ್‌ನಲ್ಲಿ ಲಾಕ್‌ ಆಗಿವೆ. ಅದಾನಿ ಎಂಟರ್‌ಪ್ರೈಸಸ್‌ ಷೇರುಗಳು ಶೇ.10ಕ್ಕಿಂತ ಹೆಚ್ಚು ಏರಿಕೆ ಕಂಡಿದ್ದು ನಾಗಾಲೋಟದಲ್ಲಿವೆ. ಇದರಿಂದ ಏಷ್ಯಾದ ಮಾರುಕಟ್ಟೆಯ ದುರ್ಬಲ ವಹಿವಾಟಿನ ನಡುವೆಯೂ ದೇಶದ ಷೇರು ಮಾರುಕಟ್ಟೆಗಳು ಗಳಿಕೆ ದಾಖಲಿವೆ.

DSIJ 23 May 2023, 12:35 pm
ಏಷ್ಯಾದ ಮಾರುಕಟ್ಟೆಗಳಲ್ಲಿನ ದೌರ್ಬಲ್ಯದ ಹೊರತಾಗಿಯೂ ಪವರ್‌, ಯುಟಿಲಿಟೀಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಗಮನಾರ್ಹ ಲಾಭದೊಂದಿಗೆ ಭಾರತೀಯ ಮುಖ್ಯಾಂಶ ಸೂಚ್ಯಂಕಗಳು ಮಂಗಳವಾರದ ವಹಿವಾಟನ್ನು ಉತ್ತಮವಾಗಿ ಆರಂಭಿಸಿದವು. ಬಿಎಸ್‌ಇ ರಿಯಾಲ್ಟಿ ಮತ್ತು ಬಿಎಸ್‌ಇ ಕನ್ಸ್ಯೂಮರ್ ಡ್ಯೂರೇಬಲ್ಸ್ ಹೊರತುಪಡಿಸಿ ಬಹುತೇಕ ವಲಯಗಳು ಲಾಭ ಗಳಿಸಿವೆ.
Vijaya Karnataka Web Sensex


ಅದಾನಿ ಗ್ರೂಪ್‌ನ ಬಹುತೇಕ ಷೇರುಗಳು ಆಯಾ ಅಪ್ಪರ್‌ ಸರ್ಕ್ಯೂಟ್‌ನಲ್ಲಿ ಲಾಕ್‌ ಆಗಿದ್ದು, ಅದಾನಿ ಎಂಟರ್‌ಪ್ರೈಸಸ್‌ ಷೇರುಗಳು ಶೇ. 10ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಈ ಮೂಲಕ ಬಿಎಸ್‌ಇ ಲಾರ್ಜ್‌ಕ್ಯಾಪ್ ಪ್ಯಾಕ್‌ನಲ್ಲಿ ಗರಿಷ್ಠ ಮಟ್ಟದಲ್ಲಿವೆ. ಬಿಎಸ್‌ಇಯಲ್ಲಿ 1,855 ಷೇರುಗಳು ಏರಿಕೆ ಮತ್ತು 1,139 ಷೇರುಗಳು ಕುಸಿತ ಕಾಣುವುದರೊಂದಿಗೆ ಏರಿಕೆ - ಇಳಿಕೆಯ ಅನುಪಾತವು ಏರಿಕೆ ಪರವಾಗಿಯೇ ಪರವಾಗಿ ಬಲವಾಗಿ ಉಳಿದಿದೆ.

ಮಂಗಳವಾರ ಬೆಳಗ್ಗೆ 10:10ಕ್ಕೆ ಬಿಎಸ್‌ಇ ಸೆನ್ಸೆಕ್ಸ್ ಶೇ. 0.33ರಷ್ಟು ಗಳಿಕೆ ಕಂಡು 62,165 ಮಟ್ಟವನ್ನು ತಲುಪಿದ್ದರೆ, ನಿಫ್ಟಿ 50 ಸೂಚ್ಯಂಕವು ಶೇ. 0.43ರಷ್ಟು ಏರಿಕೆ ಕಂಡು 18,392 ಮಟ್ಟಕ್ಕೆ ಮುಟ್ಟಿತ್ತು. ಸೆನ್ಸೆಕ್ಸ್‌ನಲ್ಲಿ ಇನ್ಫೋಸಿಸ್, ವಿಪ್ರೋ ಲಿಮಿಟೆಡ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಗರಿಷ್ಠ ಗಳಿಕೆ ಕಂಡಿದ್ದರೆ, ಮಹೀಂದ್ರಾ ಆಂಡ್ ಮಹೀಂದ್ರಾ, ಕೋಟಕ್‌ ಮಹೀಂದ್ರಾ ಬ್ಯಾಂಕ್ ಮತ್ತು ಟೈಟಾನ್ ಹೆಚ್ಚಿನ ನಷ್ಟಕ್ಕೀಡಾಗಿದ್ದು, ಮಾರುಕಟ್ಟೆಯನ್ನು ಕೆಳಕ್ಕೆಳೆದಿವೆ.

ವಿಶಾಲ ಸೂಚ್ಯಂಕಗಳು ಮುಖ್ಯ ಸೂಚ್ಯಂಕಗಳನ್ನು ಮೀರಿಸಿವೆ. ಬಿಎಸ್‌ಇ ಸ್ಮಾಲ್‌ಕ್ಯಾಪ್‌ನಲ್ಲಿ ಗರಿಷ್ಠ ಗಳಿಕೆ ಕಂಡಿರುವ ಎನ್‌ಎಸಿಎಲ್‌ ಇಂಡಸ್ಟ್ರೀಸ್ ಲಿಮಿಟೆಡ್‌ನ ಷೇರುಗಳು ಶೇ. 15ಕ್ಕಿಂತ ಹೆಚ್ಚು ಏರಿಕೆ ಕಂಡಿದ್ದು, ಹೆಚ್ಚಿನ ವಾಲ್ಯೂಮ್‌ ಕೂಡ ದಾಖಲಿಸಿವೆ. ರೆಪ್ಕೊ ಹೋಮ್ ಫೈನಾನ್ಸ್ ಲಿಮಿಟೆಡ್ ಮತ್ತು ವಿಮ್ತಾ ಲ್ಯಾಬ್ಸ್ ಲಿಮಿಟೆಡ್ ಷೇರುಗಳನ್ನು ಸಹ ಭಾರೀ ಪ್ರಮಾಣದಲ್ಲಿ ಖರೀದಿಸಲಾಗಿದೆ.

ಮೇ 23ರಂದು ಮಂಗಳವಾರ ಅಪ್ಪರ್ ಸರ್ಕ್ಯೂಟ್‌ನಲ್ಲಿ ಲಾಕ್ ಆಗಿರುವ ಪೆನ್ನಿ ಷೇರುಗಳ ಪಟ್ಟಿಯು ಈ ಕೆಳಗಿನಂತಿದ್ದು, ಮುಂಬರುವ ವಹಿವಾಟು ಅವಧಿಗಳಿಗಾಗಿ ಈ ಷೇರುಗಳ ಮೇಲೆ ನಿಗಾ ಇರಿಸಿ.

ಕ್ರ. ಸಂ.
ಷೇರಿನ ಹೆಸರು ಎಲ್‌ಟಿಪಿ
ಬದಲಾವಣೆ (%)
1
ಎಎ ಪ್ಲಸ್‌ ಟ್ರೇಡ್‌ಲಿಂಕ್‌ ಲಿ.7.8
20
2
ತಾರಿಣಿ ಇಂಟರ್‌ನ್ಯಾಷನಲ್‌ ಲಿ.7.63
19.97
3
ನೋವಾ ಐರನ್‌ & ಸ್ಟೀಲ್‌ ಲಿ.9.04
4.99
4
ವಿನ್‌ಟ್ರಾನ್‌ ಇನ್ಫೋರ್ಮಾಟಿಕ್ಸ್‌ ಲಿ.7.59
4.98
5
ಜ್ಯೋತಿ ಸ್ಟ್ರಕ್ಚರ್ಸ್‌ ಲಿ.6.96
4.98

Disclaimer: ಈ ಲೇಖನವನ್ನು ಭಾರತದ ನಂ.1 ಹೂಡಿಕೆ ನಿಯತಕಾಲಿಕ 'ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್'ನಿಂದ ನಡೆಸಲಾಗುತ್ತಿದೆ. ಲಾಭದಾಯಕ ಷೇರುಗಳ ಬಗ್ಗೆ ನಿಯಮಿತವಾಗಿ ಮಾಹಿತಿ ಮತ್ತು ಶಿಫಾರಸುಗ ಳನ್ನು ಪಡೆಯಲು ಇಲ್ಲಿ ಕ್ಲಿಕ್
ಮಾಡುವ ಮೂಲಕ ಸೇರಿಕೊಳ್ಳಿ.

Disclaimer: This above is third-party content and TIL hereby disclaims any and all warranties, express or implied, relating to the same. TIL does not guarantee, vouch for or endorse any of the above content or its accuracy nor is responsible for it in any manner whatsoever. The content does not constitute any investment advice or solicitation of any kind. Users are advised to check with certified experts before taking any investment decision and take all steps necessary to ascertain that any information and content provided is correct, updated and verified.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ