ಆ್ಯಪ್ನಗರ

ಲಾಭದಿಂದ ನಷ್ಟಕ್ಕೆ ಜಾರಿದ ಸೆನ್ಸೆಕ್ಸ್‌, ಅಪ್ಪರ್‌ ಸರ್ಕ್ಯೂಟ್‌ನಲ್ಲಿವೆ 5 ಪೆನ್ನಿ ಷೇರುಗಳು

ವಾಲ್ ಸ್ಟ್ರೀಟ್ ಸೂಚ್ಯಂಕಗಳು ಕಳೆದ ರಾತ್ರಿಯ ವಹಿವಾಟನ್ನು ಗಮನಾರ್ಹ ನಷ್ಟದಲ್ಲಿ ಮುಗಿಸಿದ ಹಿನ್ನೆಲೆಯಲ್ಲಿ ಭಾರತೀಯ ದೇಶೀಯ ಸೂಚ್ಯಂಕಗಳೂ ಬುಧವಾರದ ವಹಿವಾಟನ್ನು ಕೆಳಮಟ್ಟದಲ್ಲಿ ಆರಂಭಿಸಿದವು. ನಂತರ ಏರಿಕೆ ಕಂಡು ಬೆಳಿಗ್ಗೆ ಬಿಎಸ್‌ಇ ಸೆನ್ಸೆಕ್ಸ್ ಶೇ.0.13ರಷ್ಟು ಮೇಲೇರಿ 62,064 ಮಟ್ಟಕ್ಕೆ ತಲುಪಿತ್ತು. ನಿಫ್ಟಿ 50 ಸೂಚ್ಯಂಕವು ಶೇ.0.09ರಷ್ಟು ಏರಿಕೆ ಕಂಡು 18,365 ಮಟ್ಟಕ್ಕೆ ಮುಟ್ಟಿತ್ತು. ನಂತರ ಮತ್ತೆ ಪುನಃ ಎರಡೂ ಸೂಚ್ಯಂಕಗಳು ನಷ್ಟಕ್ಕೆ ಜಾರಿವೆ.

DSIJ 24 May 2023, 2:00 pm
ವಾಲ್ ಸ್ಟ್ರೀಟ್ ಸೂಚ್ಯಂಕಗಳು ಕಳೆದ ರಾತ್ರಿಯ ವಹಿವಾಟನ್ನು ಗಮನಾರ್ಹ ನಷ್ಟದಲ್ಲಿ ಮುಗಿಸಿದವು. ಜಾಗತಿಕ ಮಾರುಕಟ್ಟೆಯ ದುರ್ಬಲ ವಹಿವಾಟನ್ನು ಪ್ರತಿಬಿಂಬಿಸುವಂತೆ ಭಾರತೀಯ ದೇಶೀಯ ಸೂಚ್ಯಂಕಗಳೂ ಬುಧವಾರದ ವಹಿವಾಟನ್ನು ಕೆಳಮಟ್ಟದಲ್ಲಿ ಆರಂಭಿಸಿದವು. ನಂತರ ಸೂಚ್ಯಂಕಗಳು ತಮ್ಮ ಆರಂಭಿಕ ನಷ್ಟದಿಂದ ತ್ವರಿತವಾಗಿ ಚೇತರಿಸಿಕೊಂಡು ಏರಿಕೆ ಕಂಡವು. ಇದೀಗ ಮಧ್ಯಾಹ್ನದ ವೇಳೆಗೆ ಮತ್ತೆ ನಷ್ಟದಲ್ಲಿವೆ. ಬಿಎಸ್‌ಇಯಲ್ಲಿ 1,903 ಷೇರುಗಳು ಏರಿಕೆ ಮತ್ತು 1,177 ಷೇರುಗಳು ಕುಸಿತ ಕಾಣುವುದರೊಂದಿಗೆ ಏರಿಕೆ - ಇಳಿಕೆಯ ಅನುಪಾತವು ಏರಿಕೆ ಪರವಾಗಿ ಬಲವಾಗಿ ಉಳಿದಿವೆ.
Vijaya Karnataka Web Sensex falls


ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಪವರ್‌ನ ಷೇರುಗಳು ತಮ್ಮ ಬಲವಾದ ಏರಿಕೆಯನ್ನು ಮುಂದುವರಿಸಿದ್ದು, ಬಿಎಸ್‌ಇ ಯುಟಿಲಿಟೀಸ್ ಮತ್ತು ಬಿಎಸ್‌ಇ ಪವರ್‌ಗಳು ದುರ್ಬಲ ಮಾರುಕಟ್ಟೆಯಲ್ಲಿ ತಲಾ ಶೇ. 1ಕ್ಕಿಂತ ಹೆಚ್ಚು ಲಾಭ ಗಳಿಸಿದ್ದು, ಉತ್ತಮ ಪ್ರದರ್ಶನ ನೀಡಿವೆ. ಬಿಎಸ್ಇ ಕನ್ಸ್ಯೂಮರ್ ಡ್ಯೂರಬಲ್ಸ್ ಮತ್ತು ಬಿಎಸ್ಇ ಆಯಿಲ್ & ಗ್ಯಾಸ್ ಕೂಡ ಗಮನಾರ್ಹ ಲಾಭ ದಾಖಲಿಸಿವೆ.

ಬೆಳಿಗ್ಗೆ 10:20ಕ್ಕೆ ಬಿಎಸ್‌ಇ ಸೆನ್ಸೆಕ್ಸ್ ಶೇ. 0.13ರಷ್ಟು ಏರಿಕೆ ಕಂಡಿದ್ದು 62,064 ಮಟ್ಟವನ್ನು ತಲುಪಿವೆ. ನಿಫ್ಟಿ 50 ಸೂಚ್ಯಂಕವು ಶೇ. 0.09ರಷ್ಟು ಏರಿಕೆ ಕಂಡಿದ್ದು 18,365 ಮಟ್ಟಕ್ಕೆ ಮುಟ್ಟಿದೆ. ಸೆನ್ಸೆಕ್ಸ್‌ನಲ್ಲಿ ಮಾರುತಿ ಸುಜುಕಿ, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಗರಿಷ್ಠ ಗಳಿಕೆ ಕಂಡಿದ್ದು, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಮೋಟಾರ್ಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಹೆಚ್ಚಿನ ನಷ್ಟದೊಂದಿಗೆ ಮಾರುಕಟ್ಟೆಯನ್ನು ಕೆಳಕ್ಕೆಳೆದಿವೆ.

ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ಪ್ರಮುಖ ಸೂಚ್ಯಂಕಗಳನ್ನು ಗಮನಾರ್ಹವಾಗಿ ಮೀರಿಸಿವೆ. ಬಿಎಸ್‌ಇ ಸ್ಮಾಲ್‌ಕ್ಯಾಪ್‌ನಲ್ಲಿ ಗರಿಷ್ಠ ಗಳಿಕೆ ದಾಖಲಿಸಿರುವ ದೀಪ್‌ ಇಂಡಸ್ಟ್ರೀಸ್ ಲಿ.ನ ಷೇರುಗಳು ಶೇ. 9ಕ್ಕಿಂತ ಹೆಚ್ಚು ಏರಿಕೆ ಕಂಡಿದ್ದು, ಸ್ಮಾಲ್-ಕ್ಯಾಪ್ ಬುಲ್‌ಗಳನ್ನು ಕಾರ್ಯನಿರತವಾಗಿಸಿದೆ. ಸುದರ್ಶನ್ ಕೆಮಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಡ್ರೀಮ್‌ಫೋಕ್ಸ್ ಸರ್ವಿಸಸ್ ಲಿಮಿಟೆಡ್‌ನ ಷೇರುಗಳನ್ನು ಸಹ ಭಾರೀ ಪ್ರಮಾಣದಲ್ಲಿ ಖರೀದಿಸಲಾಗಿದೆ.

ಮೇ 24ರಂದು ಗುರುವಾರ ಅಪ್ಪರ್ ಸರ್ಕ್ಯೂಟ್‌ನಲ್ಲಿ ಲಾಕ್ ಆಗಿರುವ ಪೆನ್ನಿ ಷೇರುಗಳ ಪಟ್ಟಿಯು ಈ ಕೆಳಗಿನಂತಿದ್ದು, ಮುಂಬರುವ ವಹಿವಾಟು ಅವಧಿಗಳಿಗಾಗಿ ಈ ಷೇರುಗಳ ಮೇಲೆ ನಿಗಾ ಇರಿಸಿ.

ಕ್ರ. ಸಂ.
ಷೇರಿನ ಹೆಸರು ಎಲ್‌ಟಿಪಿ
ಬದಲಾವಣೆ (%)
1
ಎಎ ಪ್ಲಸ್‌ ಟ್ರೇಡ್‌ಲಿಂಕ್‌ ಲಿ.8.52
9.94
2
ಶ್ರೀವತ್ಸ ಫೈನಾನ್ಸ್‌ & ಲೀಸಿಂಗ್‌ ಲಿ.9.68
4.99
3
ಸೆಲ್ಲ ಸ್ಪೇಸ್‌ ಲಿ.9.55
4.95
4
ರಾಧಾ ಮಾಧವ್‌ ಕಾರ್ಪೊರೇಷನ್‌ ಲಿ.3.18
4.95
5
ಗುಜರಾತ್‌ ಇಂಜೆಕ್ಟ್‌ (ಕೇರಳ) ಲಿ.9.13
4.94

Disclaimer: ಈ ಲೇಖನವನ್ನು ಭಾರತದ ನಂ.1 ಹೂಡಿಕೆ ನಿಯತಕಾಲಿಕ 'ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್'ನಿಂದ ನಡೆಸಲಾಗುತ್ತಿದೆ. ಲಾಭದಾಯಕ ಷೇರುಗಳ ಬಗ್ಗೆ ನಿಯಮಿತವಾಗಿ ಮಾಹಿತಿ ಮತ್ತು ಶಿಫಾರಸುಗ ಳನ್ನು ಪಡೆಯಲು ಇಲ್ಲಿ ಕ್ಲಿಕ್
ಮಾಡುವ ಮೂಲಕ ಸೇರಿಕೊಳ್ಳಿ.

Disclaimer: This above is third-party content and TIL hereby disclaims any and all warranties, express or implied, relating to the same. TIL does not guarantee, vouch for or endorse any of the above content or its accuracy nor is responsible for it in any manner whatsoever. The content does not constitute any investment advice or solicitation of any kind. Users are advised to check with certified experts before taking any investment decision and take all steps necessary to ascertain that any information and content provided is correct, updated and verified.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ