ಆ್ಯಪ್ನಗರ

ಭಾರೀ ನಷ್ಟದಿಂದ ಗಳಿಕೆ ಹಾದಿಗೆ ಮರಳಿದ ಷೇರುಪೇಟೆ, ಅಪ್ಪರ್‌ ಸರ್ಕ್ಯೂಟ್‌ನಲ್ಲಿವೆ 5 ಪೆನ್ನಿ ಷೇರುಗಳು

ಭಾರತೀಯ ದೇಶೀಯ ಮಾರುಕಟ್ಟೆಗಳಲ್ಲಿನ ಮಾರಾಟವು ಬುಧವಾರವೂ ಮುಂದುವರಿದಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ 50 ಗಮನಾರ್ಹ ನಷ್ಟಗಳೊಂದಿಗೆ ದಿನವನ್ನು ಪ್ರಾರಂಭಿಸಿದವು. ಆದರೆ ವಹಿವಾಟು ಮುಂದುವರಿದಂತೆ ನಷ್ಟವನ್ನು ಸರಿದೂಗಿಸಿಕೊಂಡಿವೆ.

DSIJ 28 Sep 2022, 12:18 pm
ನಿರಾಶಾವಾದಿ ಜಾಗತಿಕ ಭಾವನೆಗಳು ಮತ್ತು ಬಿಗಿಯಾದ ಹಣಕಾಸು ನೀತಿಯ ನಿರೀಕ್ಷೆಗಳ ನಡುವೆ ಭಾರತೀಯ ದೇಶೀಯ ಮಾರುಕಟ್ಟೆಗಳಲ್ಲಿನ ಮಾರಾಟವು ಬುಧವಾರವೂ ಮುಂದುವರಿದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ 50 ಗಮನಾರ್ಹ ನಷ್ಟಗಳೊಂದಿಗೆ ದಿನವನ್ನು ಪ್ರಾರಂಭಿಸಿದವು. ಆದರೆ ವಹಿವಾಟು ಮುಂದುವರಿದಂತೆ ಒಂದಿಷ್ಟು ನಷ್ಟವನ್ನು ಸರಿದೂಗಿಸಿಕೊಂಡಿವೆ.
Vijaya Karnataka Web Penny stocks in upper circuit


ಬೆಳಗ್ಗೆ 10:50ಕ್ಕೆ ಬಿಎಸ್‌ಇ ಸೆನ್ಸೆಕ್ಸ್ ಶೇ. 0.61ರಷ್ಟು ಕುಸಿದು 56,760 ಮಟ್ಟವನ್ನು ತಲುಪಿತ್ತು. ನಿಫ್ಟಿ 50 ಸೂಚ್ಯಂಕವು ಶೇ. 0.59ರಷ್ಟು ನಷ್ಟ ಅನುಭವಿಸಿ 16,907 ಮಟ್ಟಕ್ಕೆ ಕುಸಿದಿತ್ತು. ಸೆನ್ಸೆಕ್ಸ್‌ನಲ್ಲಿ ಸನ್ ಫಾರ್ಮಾಸ್ಯುಟಿಕಲ್ಸ್, ಡಾ ರೆಡ್ಡೀಸ್ ಲ್ಯಾಬೊರೇಟರೀಸ್ ಮತ್ತು ಮಹೀಂದ್ರಾ ಆಂಡ್ ಮಹೀಂದ್ರಾ ಗರಿಷ್ಠ ಗಳಿಕೆ ಕಂಡಿದ್ದರೆ, ಐಟಿಸಿ, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಮಾರುಕಟ್ಟೆಯನ್ನು ಕೆಳಕ್ಕೆಳೆದಿವೆ. ರಾಮಾ ಫಾಸ್ಫೇಟ್ಸ್‌ ಮಂದಗತಿಯ ಮಾರುಕಟ್ಟೆಯಲ್ಲಿ ಹೂಡಿಕೆದಾರರನ್ನು ಆಕರ್ಷಿಸಿದ್ದು, ಸುಮಾರು ಶೇ. 10ರಷ್ಟು ಲಾಭದೊಂದಿಗೆ ಗರಿಷ್ಠ ಗಳಿಕೆ ದಾಖಲಿಸಿದ ಸ್ಮಾಲ್‌ಕ್ಯಾಪ್ ಷೇರು ಎನಿಸಿಕೊಂಡಿತ್ತು.

ಐಟಿಐ ಲಿ.ನ ಭಾರೀ ಗಳಿಕೆಯಿಂದ ಬಿಎಸ್‌ಇ ಟೆಲಿಕಮ್ಯುನಿಕೇಷನ್ಸ್ ವಲಯವು ಹೆಚ್ಚಿನ ಗಳಿಕೆ ದಾಖಲಿಸಿದ್ದು, ಬಿಎಸ್‌ಇ ಹೆಲ್ತ್‌ಕೇರ್ ಮತ್ತು ಬಿಎಸ್‌ಇ ಆಟೋ ವಲಯಗಳು ಸಾಧಾರಣ ಲಾಭ ದಾಖಲಿಸಿವೆ . ಬಿಎಸ್‌ಇ ಮೆಟಲ್ಸ್ ಕೇವಲ 5 ಟ್ರೇಡಿಂಗ್ ಅವಧಿಯಲ್ಲಿ ಶೇ. 8ರಷ್ಟು ಕಳೆದುಕೊಂಡಿದ್ದು, ವಹಿವಾಟಿನ ಕೆಟ್ಟ ಪ್ರದರ್ಶನವಾಗಿದೆ.

ಮತ್ತೊಂದು ಸುದ್ದಿಯಲ್ಲಿ ವಿದೇಶಿ ವಿನಿಮಯ ಸಂಗ್ರಹವು ಸತತ ಏಳನೇ ವಾರವೂ ಕುಸಿತ ಕಂಡಿದ್ದು ಸೆಪ್ಟೆಂಬರ್ 16ಕ್ಕೆ ಕೊನೆಗೊಂಡ ವಾರದಲ್ಲಿ 545.65 ಬಿಲಿಯನ್‌ ಡಾಲರ್‌ಗೆ ಕುಸಿದಿದೆ. ವಿದೇಶಿ ವಿನಿಮಯ ಸಂಗ್ರಹದ ನಷ್ಟದ ಬಗೆಗಿನ ಆತಂಕ 'ಅತಿಯಾಗಿ ಬಿಂಬಿತವಾಗಿದೆ’ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಹೇಳಿದ್ದಾರೆ. ಪ್ರಸ್ತುತ ಪರಿಸ್ಥಿತಿಯಿಂದ ಹೊರಬರಲು ಭಾರತ ಸಾಕಷ್ಟು ಮೀಸಲು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಇಂದು ಅಪ್ಪರ್ ಸರ್ಕ್ಯೂಟ್‌ನಲ್ಲಿ ಲಾಕ್ ಆಗಿರುವ ಪೆನ್ನಿ ಷೇರುಗಳ ಪಟ್ಟಿ ಈ ಕೆಳಗಿನಂತಿದೆ. ಮುಂಬರುವ ಸೆಷನ್‌ಗಳಿಗಾಗಿ ಈ ಷೇರುಗಳ ಮೇಲೆ ನಿಗಾ ಇರಿಸಿ.

ಕ್ರ. ಸಂ.ಷೇರಿನ ಹೆಸರುಎಲ್‌ಟಿಪಿದರ ಬದಲಾವಣೆ
1
ಅಶೋಕ ಮೆಟ್‌ಕಾಸ್ಟ್‌9.35 16.73
2
ರಾಮ್‌ಗೋಪಾಲ್‌ ಪಾಲಿಟೆಕ್ಸ್‌6.3
5
3
ಎನ್‌ಬಿ ಫೂಟ್‌ವೇರ್‌6.09
5
4
ರಿಸ್ಟೈಲ್‌ ಸೆರಾಮಿಕ್ಸ್‌3.99
5
5
ಶ್ಯಾಮ್‌ಕಮಲ್‌ ಇನ್ವೆಸ್ಟ್‌ಮೆಂಟ್ಸ್‌6.53
4.98

ಈ ಲೇಖನವನ್ನು ಭಾರತದ ನಂ.1 ಹೂಡಿಕೆ ನಿಯತಕಾಲಿಕ 'ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್'ನಿಂದ ನಡೆಸಲಾಗುತ್ತಿದೆ. ಲಾಭದಾಯಕ ಷೇರುಗಳ ಬಗ್ಗೆ ನಿಯಮಿತವಾಗಿ ಮಾಹಿತಿ ಮತ್ತು ಶಿಫಾರಸುಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡುವ ಮೂಲಕ ಸೇರಿಕೊಳ್ಳಿ.

This above is third-party content and TIL hereby disclaims any and all warranties, express or implied, relating to the same. TIL does not guarantee, vouch for or endorse any of the above content or its accuracy nor is responsible for it in any manner whatsoever. The content does not constitute any investment advice or solicitation of any kind. Users are advised to check with certified experts before taking any investment decision and take all steps necessary to ascertain that any information and content provided is correct, updated and verified.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ