ಆ್ಯಪ್ನಗರ

ಮಾರುಕಟ್ಟೆ ಕುಸಿತದ ನಡುವೆಯೂ ಈ ಷೇರುಗಳು ಉತ್ತಮ ಚೇತರಿಕೆ ಕಂಡಿವೆ! ಗುರುವಾರವೂ ಟ್ರೆಂಡ್‌ ಆಗಲಿವೆ!

ನಿಫ್ಟಿ ಸತತ ಎರಡನೇ ದಿನವೂ ಕುಸಿತ ಕಂಡು 18000 ಪಾಯಿಂಟ್‌ಗಿಂತಲೂ ಕೆಳಗೆ ವಹಿವಾಟು ಮುಗಿಸಿತು. ಬುಧವಾರ ಬೆಳಗ್ಗೆ 16 ಅಂಕಗಳ ಅಲ್ಪ ಏರಿಕೆಯೊಂದಿಗೆ ವಹಿವಾಟು ಆರಂಭಿಸಿತಾದರೂ, ನಂತರದಲ್ಲಿ ಭಾರೀ ಕುಸಿತ ಕಂಡಿತು.

Vijaya Karnataka Web 19 Jan 2022, 5:08 pm
ಮುಂಬಯಿ: ನಿಫ್ಟಿ ಸತತ ಎರಡನೇ ದಿನವೂ ಕುಸಿತ ಕಂಡು 18000 ಪಾಯಿಂಟ್‌ಗಿಂತಲೂ ಕೆಳಗೆ ವಹಿವಾಟು ಮುಗಿಸಿತು. ಬುಧವಾರ ಬೆಳಗ್ಗೆ 16 ಅಂಕಗಳ ಅಲ್ಪ ಏರಿಕೆಯೊಂದಿಗೆ ವಹಿವಾಟು ಆರಂಭಿಸಿತಾದರೂ, ನಂತರದಲ್ಲಿ ಭಾರೀ ಕುಸಿತ ಕಂಡಿತು. ಇದು ದಿನದ ಕನಿಷ್ಠ ಮಟ್ಟದಿಂದ ಚೇತರಿಸಿಕೊಳ್ಳಲು ಪ್ರಯತ್ನಿಸಿತಾದರೂ, ಬ್ಯಾಂಕ್‌ಗಳು, ಐಟಿ ಮತ್ತು ಎಫ್‌ಎಂಸಿಜಿ ವಲಯಗಳು ಅದನ್ನು ಏರಲು ಅನುಮತಿಸಲಿಲ್ಲ. ಈ ಸಮಯದಲ್ಲಿ, ಸೂಚ್ಯಂಕವು ಶೇ.0.96ರಷ್ಟು ಕುಸಿದು 17885 ಪಾಯಿಂಟ್‌ಗಳಿಗೆ ತಲುಪಿತು. ಇದೇ ವೇಳೆ ಸೆನ್ಸೆಕ್ಸ್ 646 ಅಂಕಗಳ ಕುಸಿತ ಕಂಡಿದೆ.
Vijaya Karnataka Web v-shaped recovery


ಆದರೂ, ನಿಫ್ಟಿ ಮಿಡ್‌ಕ್ಯಾಪ್ ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ ಫ್ಲಾಟ್ ಮುಚ್ಚಿದವು. ಲಾರ್ಜ್ ಕ್ಯಾಪ್ ಷೇರುಗಳಲ್ಲಿ ಮಾರಾಟದ ಒತ್ತಡ ಇರುವುದು ಇದರಿಂದ ಸ್ಪಷ್ಟವಾಗುತ್ತದೆ. ನಿಫ್ಟಿಯಲ್ಲಿ ಶ್ರೀ ಸಿಮೆಂಟ್ಸ್, ಏಷ್ಯನ್ ಪೇಂಟ್ಸ್, ಗ್ರಾಸಿಮ್, ಇನ್ಫೋಸಿಸ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಅತಿ ಹೆಚ್ಚು ನಷ್ಟ ಅನುಭವಿಸಿದವು. ONGC ಮತ್ತು ಟಾಟಾ ಮೋಟಾರ್ಸ್ ಷೇರುಗಳು ಶೇ.2 ಕ್ಕಿಂತ ಹೆಚ್ಚು ಗಳಿಕೆ ಕಂಡು ಮಾರುಕಟ್ಟೆಯನ್ನು ಬೆಂಬಲಿಸಿದವು.

ಕೆಲವು ಷೇರುಗಳು ತಮ್ಮ ದಿನದ ಕನಿಷ್ಠ ಮಟ್ಟದಿಂದ ಪುಟಿದೇಳುವಲ್ಲಿ ಯಶಸ್ವಿಯಾದವು. ಈ ಷೇರುಗಳತ್ತ ಖರೀದಿದಾರರು ಆಸಕ್ತಿ ತೋರಿಸಿದರು. ಇದರಿಂದ ಈ ಷೇರುಗಳು ಪ್ರಬಲ ವಲಯದಲ್ಲಿದ್ದು, ನಾಳೆಯೂ ಬುಲಿಷ್ ಆಗಿ ಉಳಿಯುವ ನಿರೀಕ್ಷೆ ಇದೆ ಎಂಬುದು ಸ್ಪಷ್ಟವಾಗಿದೆ.

ದಿನದ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡ ಷೇರುಗಳು ಈ ಕೆಳಗಿನಂತಿವೆ.
ADANIENT
ADANITRANS
ANURAS
ASHOKLEY
AUROPHARMA
BEML
CAMS
CCL
CHOLAFIN
CHOLAHLDNG
CSBBANK
DMART
GODREJIND
GREAVESCOT
HEIDELBERG
HUDCO
INDHOTEL
INDIACEM
JKLAKSHMI
LODHA
LTI
MARICO
MUTHOOTFIN
NAZARA
ORIENTELEC
PCBL
RADICO
RAILTEL
RHIM
RVNL
SJVN
SUNTV
TATACOFFEE
TECHM
ZEEL
ZENSARTECH

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ