ಆ್ಯಪ್ನಗರ

ಕುಸಿತದಿಂದ ಏರಿಕೆ ಹಾದಿಗೆ ಮರಳಿರುವ ಈ ಷೇರಿನ ಮೇಲೆ ಕಣ್ಣಿಡಲು ಮರೆಯದಿರಿ

ಬುಧವಾರ ಷೇರು ಮಾರುಕಟ್ಟೆ ದುರ್ಬಲವಾಗಿದ್ದರೂ ಗುಜರಾತ್‌ ಸ್ಟೇಟ್‌ ಪೆಟ್ರೋನೆಟ್‌ ಲಿ.ನ ಷೇರುಗಳು ಉತ್ತಮ ಖರೀದಿ ಆಸಕ್ತಿಯನ್ನು ಆಕರ್ಷಿಸಿದ್ದು, ನಿಫ್ಟಿ 500 ಸೂಚ್ಯಂಕದಲ್ಲಿ ಗರಿಷ್ಠ ಗಳಿಕೆ ದಾಖಲಿಸಿದ ಷೇರುಗಳಲ್ಲಿ ಒಂದಾಗಿದೆ.

DSIJ 11 May 2022, 1:35 pm
ಗುಜರಾತ್‌ ಸ್ಟೇಟ್‌ ಪೆಟ್ರೋನೆಟ್‌ ಲಿ. (GSPL)ನ ಷೇರು ಬುಧವಾರ ಶೇ. 4.5ರಷ್ಟು ಏರಿಕೆ ಕಂಡಿದೆ. ಮತ್ತು ತನ್ನ ಅಲ್ಪಾವಧಿಯ ಪ್ರತಿರೋಧ ಮಟ್ಟ 264 ರೂ.ಗಳನ್ನು ದಾಟಿದೆ. ಇಂದು ಮಾರುಕಟ್ಟೆ ದುರ್ಬಲವಾಗಿದ್ದರೂ ಷೇರುಗಳು ಉತ್ತಮ ಖರೀದಿ ಆಸಕ್ತಿಯನ್ನು ಆಕರ್ಷಿಸಿದ್ದು, ನಿಫ್ಟಿ 500 ಸೂಚ್ಯಂಕದಲ್ಲಿನ ಗರಿಷ್ಠ ಗಳಿಕೆ ದಾಖಲಿಸಿದ ಷೇರುಗಳಲ್ಲಿ ಇದು ಕೂಡಾ ಒಂದಾಗಿದೆ. ಷೇರು ಅದರ ಹಿಂದಿನ ಸ್ವಿಂಗ್ ಹೈ 292.40 ರೂ. ಮಟ್ಟವನ್ನು ಮುಟ್ಟಿದ ನಂತರ ಮತ್ತೆ ಪುಟಿದೇಳುವ ಮೊದಲು ಸುಮಾರು ಶೇ. 13ರಷ್ಟು ತಿದ್ದುಪಡಿಯನ್ನು ಕಂಡಿತು. 250 ರೂ. ಮಟ್ಟವು ಷೇರಿನ ಪಾಲಿಗೆ ಬಲವಾದ ಖರೀದಿಯ ಮಟ್ಟವಾಗಿ ಹೊರಹೊಮ್ಮಿದ್ದು, ಈ ಮಟ್ಟದಲ್ಲಿ ಷೇರುಗಳು ಹಲವು ಬೆಂಬಲಗಳನ್ನು ಪಡೆದುಕೊಂಡಿವೆ. ತಾಂತ್ರಿಕ ಚಾರ್ಟ್ನಲ್ಲಿ, ಇದು ಬಲವಾದ ಬುಲಿಶ್ ಕ್ಯಾಂಡಲ್‌ನ್ನು ರೂಪಿಸಿದೆ ಮತ್ತು ದಿನದ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
Vijaya Karnataka Web GSPL


14-ಅವಧಿಯ ದೈನಂದಿನ ಆರ್‌ಎಸ್‌ಐ (49.24) ಷೇರಿನಲ್ಲಿ ಸುಧಾರಿತ ಬಲವನ್ನು ಸೂಚಿಸುವ ಅದರ ಹಿಂದಿನ ಸ್ವಿಂಗ್ ಹೈನ್ನು ದಾಟಿದೆ. ಎಂಎಸಿಡಿ ಲೈನ್ ಮತ್ತು ಸಿಗ್ನಲ್ ಲೈನ್ ಒಮ್ಮುಖವಾಗುತ್ತಿವೆ ಮತ್ತು ಮುಂಬರುವ ದಿನಗಳಲ್ಲಿ ಬುಲಿಶ್ ಕ್ರಾಸ್ಒವರ್ ಅನ್ನು ಸೂಚಿಸಬಹುದು. ಆನ್ ಬ್ಯಾಲೆನ್ಸ್ ವಾಲ್ಯೂಮ್ ವಾಲ್ಯೂಮ್‌ನ ದೃಷ್ಟಿಕೋನದಿಂದ ಷೇರಿನಲ್ಲಿ ಬಲವಾದ ಶಕ್ತಿಯನ್ನು ತೋರಿಸಿದ್ದು, ಅದರ ಹಿಂದಿನ ಸ್ವಿಂಗ್ ಹೈನ್ನು ಸಮೀಪಿಸುತ್ತಿದೆ.

ವರ್ಷದ ಆರಂಭದಿಂದ ಇಲ್ಲಿಯವರೆಗಿನ ಆಧಾರದ ಮೇಲೆ ಷೇರು ಶೇ.10ಕ್ಕಿಂತ ಹೆಚ್ಚು ಕುಸಿತ ಕಂಡಿದ್ದು, ವಿಶಾಲ ಮಾರುಕಟ್ಟೆ ಮತ್ತು ಕೆಲವು ಪ್ರತಿಸ್ಪರ್ಧಿ ಕಂಪನಿಗಳಿಗೆ ಹೋಲಿಸಿದರೆ ಕಡಿಮೆ ನಷ್ಟ ಅನುಭವಿಸಿದೆ. ಇದು ಎಲ್ಲಾ ಪ್ರಮುಖ ಚಲಿಸುವ ಸರಾಸರಿಗಳಿಗಿಂತ ಕಡಿಮೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ಮಧ್ಯಮದಿಂದ ದೀರ್ಘಾವಧಿಯವರೆಗೆ ಇಳಿಕೆಯಲ್ಲೇ ಮುಂದುವರಿಯುವಂತೆ ಕಾಣುತ್ತಿದೆ. ಆದಾಗ್ಯೂ, ಇತ್ತೀಚಿನ ಪ್ರೈಸ್‌ ಆಕ್ಷನ್‌ ಪ್ರವೃತ್ತಿಯ ಬದಲಾವಣೆಯ ಕಡೆಗೆ ಸುಳಿವು ನೀಡುತ್ತಿದೆ ಮತ್ತು ಬುಲಿಶ್‌ನೆಸ್‌ನ ಆರಂಭಿಕ ಲಕ್ಷಣಗಳನ್ನು ತೋರಿಸುತ್ತಿದೆ. ಮೇಲಾಗಿ ಷೇರುಗಳು ಕೆಳಮಟ್ಟಕ್ಕಿಳಿಯುವ ಸಾಧ್ಯತೆಯಿದೆಯಾದರೂ, ಇಲ್ಲಿಂದ ತೀವ್ರ ಕುಸಿತವನ್ನು ನಿರೀಕ್ಷಿಸಲಾಗುವುದಿಲ್ಲ. ಇದು ಅನುಕೂಲಕರ ಅಪಾಯ-ಪ್ರತಿಫಲ (ರಿಸ್ಕ್‌-ರಿವಾರ್ಡ್‌) ಅನುಪಾತವನ್ನು ಹೊಂದಿದೆ ಮತ್ತು ಅಲ್ಪಾವಧಿಯಲ್ಲಿ ಉತ್ತಮ ಲಾಭವನ್ನು ಗಳಿಸಬಹುದು. ಒಂದೊಮ್ಮೆ ಷೇರು 275 ರೂ. ಮಟ್ಟವನ್ನು ಮೀರಿ ಏರಿಕೆ ಕಂಡಲ್ಲಿ, ಇದು ಖಚಿತವಾಗಲಿದೆ. ಷೇರಿನ ಬಗೆಗಿನ ಮತ್ತಷ್ಟು ಬೆಳವಣಿಗೆಗಳ ಮೇಲೆ ಕಣ್ಣಿಡಲು ಟ್ರೇಡರ್‌ಗಳು ತಮ್ಮ ವೀಕ್ಷಣಾ ಪಟ್ಟಿಯಲ್ಲಿ ಈ ಷೇರನ್ನು ಸೇರಿಸುವುದನ್ನು ಪರಿಗಣಿಸಬಹುದು.

ಇಂತಹ ಇನ್ನೂ ಹೆಚ್ಚಿನ ವಿಷಯಗಳಿಗಾಗಿ, ಭಾರತದ #1 ಈಕ್ವಿಟಿ ಸಂಶೋಧನೆ ಮತ್ತು ಹೂಡಿಕೆ ನಿಯತಕಾಲಿಕ ‘ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್‌’ಗೆ ಚಂದಾದಾರರಾಗಿ.

Disclaimer:This above is third party content and TIL hereby disclaims any and all warranties, express or implied, relating to the same. TIL does not guarantee, vouch for or endorse any of the above content or its accuracy nor is responsible for it in any manner whatsoever. The content does not constitute any investment advice or solicitation of any kind. Users are advised to check with certified experts before taking any investment decision and take all steps necessary to ascertain that any information and content provided is correct, updated and verified.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ