ಆ್ಯಪ್ನಗರ

Top trending stock | ಟ್ರೆಂಡಿಂಗ್‌ನಲ್ಲಿದೆ ಇರ್ಕಾನ್‌ ಇಂಟರ್ನ್ಯಾಷನಲ್ ಷೇರು, ಶುಕ್ರವಾರ 5% ಏರಿಕೆ

ವಿಶಾಲ ಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟಿನ ನಡುವೆಯೂ ಶುಕ್ರವಾರ ಇರ್ಕಾನ್‌ ಇಂಟರ್ನ್ಯಾಷನಲ್ ಷೇರುಗಳು ಶೇ. 5ರಷ್ಟು ಏರಿಕೆ ಕಂಡಿದ್ದು ಟ್ರೆಂಡಿಂಗ್‌ನಲ್ಲಿವೆ. ಷೇರುಗಳು ಎನ್‌ಎಸ್‌ಇನಲ್ಲಿ ದಿನದ ಗರಿಷ್ಠ ಮಟ್ಟ 64.20 ರೂ. ಮುಟ್ಟಿವೆ.

DSIJ 13 Jan 2023, 2:54 pm
ಇರ್ಕಾನ್‌ ಇಂಟರ್ನ್ಯಾಷನಲ್ (ಎನ್‌ಎಸ್‌ಇ ಕೋಡ್ - IRCON) ಷೇರುಗಳು ವಿಶಾಲ ಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟಿನ ನಡುವೆಯೂ ಶುಕ್ರವಾರ ಸುಮಾರು ಶೇ. 5ರಷ್ಟು ಜಿಗಿದಿವೆ. ಮುಂಬರುವ ಬಜೆಟ್ 2023ಕ್ಕೆ ಮುಂಚಿತವಾಗಿ ರೈಲ್ವೇ ಷೇರುಗಳಾದ್ಯಂತ ಬಲವಾದ ಖರೀದಿ ಭಾವನೆ ಕಂಡುಬಂದಿದ್ದು, ರೈಲ್ವೇ ಷೇರುಗಳು ಹೂಡಿಕೆದಾರರ ಗಮನ ಸೆಳೆದಿವೆ. ಇರ್ಕಾನ್‌ ಷೇರುಗಳು ಎನ್‌ಎಸ್‌ಇನಲ್ಲಿ ದಿನದ ಗರಿಷ್ಠ ಮಟ್ಟ 64.20 ರೂ. ಮುಟ್ಟಿದೆ.
Vijaya Karnataka Web Ircon international


ತಾಂತ್ರಿಕವಾಗಿ ಷೇರು ಅದರ ಕನ್ಸಾಲಿಡೇಷನ್‌ ಮಾದರಿಯಿಂದ ಬಲವಾದ ಪ್ರೈಸ್‌ ವಾಲ್ಯೂಮ್‌ ಬ್ರೇಕ್‌ಔಟ್‌ ಅನ್ನು ನೋಂದಾಯಿಸಿದೆ. ಇದರೊಂದಿಗೆ ಷೇರು ಎಲ್ಲಾ ಪ್ರಮುಖ ಅಲ್ಪಾವಧಿ ಮತ್ತು ದೀರ್ಘಾವಧಿಯ ಚಲಿಸುವ ಸರಾಸರಿಗಿಂತ ಹೆಚ್ಚಿನ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. 50-ಡಿಎಂಎ 20-ಡಿಎಂಎಗಿಂತ ಮೇಲಕ್ಕೆ ಏರಿಕೆಯಾಗಿದ್ದು, ಮಧ್ಯಮ-ಅವಧಿಯ ಧನಾತ್ಮಕತೆಯನ್ನು ಸೂಚಿಸುತ್ತದೆ.

ವಾಲ್ಯೂಮ್‌ಗಳು ಸತತ ಮೂರನೇ ದಿನವೂ ಏರಿಕೆ ಕಂಡಿದ್ದು, ಷೇರುಗಳಲ್ಲಿ ಖರೀದಿ ಚಟುವಟಿಕೆ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. 14-ಅವಧಿಯ ಆರ್‌ಎಸ್‌ಐ (57.39) ಅದರ ಹಿಂದಿನ ಸ್ವಿಂಗ್ ಹೈ ಮಟ್ಟವನ್ನು ದಾಟಿದೆ ಮತ್ತು ಷೇರಿನಲ್ಲಿ ಬಲವಾದ ಶಕ್ತಿಯನ್ನು ಸೂಚಿಸುತ್ತದೆ. ಎಂಎಸಿಡಿ ರೇಖೆಯು ಅದರ ಸಿಗ್ನಲ್‌ ಲೈನ್‌ಗಿಂತ ಮೇಲೆ ದಾಟಿದ್ದು, ಬುಲಿಶ್ ಆವೇಗವನ್ನು ಪ್ರದರ್ಶಿಸುತ್ತದೆ. ಒಟ್ಟಾರೆಯಾಗಿ ಷೇರು ದುರ್ಬಲ ಮಾರುಕಟ್ಟೆಯಲ್ಲಿ ಬುಲಿಶ್ ಟ್ರೆಂಡ್‌ನ್ನು ಪ್ರದರ್ಶಿಸುತ್ತದೆ. ಇದು ಮುಂಬರುವ ವಹಿವಾಟಿನ ಅವಧಿಯಲ್ಲಿ ಟ್ರೇಡರ್‌ಗಳನ್ನು ಆಕರ್ಷಿಸುವ ಸಾಧ್ಯತೆಯಿದೆ.

ಮಧ್ಯಮ ಅವಧಿಯ ಪ್ರತಿರೋಧ ಮಟ್ಟವು 66-67 ಮಟ್ಟದಲ್ಲಿದೆ. ಇದೇ ವೇಳೆ ತಕ್ಷಣದ ಬೆಂಬಲ ಮಟ್ಟ 62 ರೂ.ನಲ್ಲಿದೆ. ಷೇರಿನಲ್ಲಿನ ಮತ್ತಷ್ಟು ಬೆಳವಣಿಗೆಯನ್ನು ಪತ್ತೆಹಚ್ಚಲು ಮೊಮೆಂಟಮ್ ಟ್ರೇಡರ್‌ಗಳು ಇದನ್ನು ತಮ್ಮ ವಾಚ್‌ಲಿಸ್ಟ್‌ನಲ್ಲಿ ಸೇರಿಸಿಕೊಳ್ಳಬಹುದು.

ಈ ಲೇಖನವನ್ನು ಭಾರತದ ನಂ.1 ಹೂಡಿಕೆ ನಿಯತಕಾಲಿಕ 'ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್'ನಿಂದ ನಡೆಸಲಾಗುತ್ತಿದೆ. ಲಾಭದಾಯಕ ಷೇರುಗಳ ಬಗ್ಗೆ ನಿಯಮಿತವಾಗಿ ಮಾಹಿತಿ ಮತ್ತು ಶಿಫಾರಸುಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡುವ ಮೂಲಕ ಸೇರಿಕೊಳ್ಳಿ.

This above is third-party content and TIL hereby disclaims any and all warranties, express or implied, relating to the same. TIL does not guarantee, vouch for or endorse any of the above content or its accuracy nor is responsible for it in any manner whatsoever. The content does not constitute any investment advice or solicitation of any kind. Users are advised to check with certified experts before taking any investment decision and take all steps necessary to ascertain that any information and content provided is correct, updated and verified.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ