ಆ್ಯಪ್ನಗರ

ಷೇರು ಪೇಟೆಯ ಕುಸಿತದಲ್ಲೂ ಐದು ತಿಂಗಳಲ್ಲಿ ಭರ್ಜರಿ 35% ಆದಾಯ ನೀಡಿದೆ ಮಹೀಂದ್ರಾದ ಈ ಷೇರು

ಕಳೆದ ಐದು ತಿಂಗಳಲ್ಲಿ ಷೇರು ಹೂಡಿಕೆದಾರರಿಗೆ ಶೇ. 34ಕ್ಕಿಂತ ಹೆಚ್ಚು ಆದಾಯವನ್ನು ನೀಡಿರುವ ಮಹೀಂದ್ರಾ ಹಾಲಿಡೇಸ್‌ ಆಂಡ್‌ ರೆಸಾರ್ಟ್ಸ್‌ ಇಂಡಿಯಾ ಲಿ. ಷೇರು ಸೋಮವಾರದ ವಹಿವಾಟಿನ ಆರಂಭಿಕ ಗಂಟೆಗಳಲ್ಲಿ ಸುಮಾರು ಶೇ. 4ರಷ್ಟು ಏರಿಕೆ ಕಂಡಿದೆ.

DSIJ 23 May 2022, 12:36 pm
ಮಹೀಂದ್ರಾ ಹಾಲಿಡೇಸ್‌ ಆಂಡ್‌ ರೆಸಾರ್ಟ್ಸ್‌ ಇಂಡಿಯಾ ಲಿ. ಷೇರು ಸೋಮವಾರ ಬುಲಿಶ್ ಆಗಿದೆ ಮತ್ತು ವಹಿವಾಟಿನ ಆರಂಭಿಕ ಗಂಟೆಗಳಲ್ಲಿ ಸುಮಾರು ಶೇ. 4ರಷ್ಟು ಏರಿಕೆ ಕಂಡಿದೆ. ಇದರೊಂದಿಗೆ ಷೇರು ತನ್ನ ಇಳಿಕೆಯ ಪ್ರವೃತ್ತಿಯಿಂದ ಹೊರಬಂದಿದೆ. ತಾಂತ್ರಿಕ ಚಾರ್ಟ್‌ನಲ್ಲಿ ಷೇರು ತನ್ನ 20-ಡಿಎಂಎನಲ್ಲಿ ಉತ್ತಮ ಬೆಂಬಲವನ್ನು ಪಡೆದುಕೊಂಡಿದ್ದು, ಇಂಟ್ರಾಡೇ ಲೋನಿಂದ ಶೇ. 7ರಷ್ಟು ಏರಿಕೆ ಕಂಡಿದೆ. ಇದಲ್ಲದೆ ಇದು ಅದರ ಹಿಂದಿನ ಸ್ವಿಂಗ್ ಹೈ 250 ರೂ. ಅನ್ನು ದಾಟಿದೆ. ಇದು ಇತ್ತೀಚೆಗೆ ಬಲವಾದ ಆವೇಗವನ್ನು ಪಡೆದುಕೊಂಡಿದ್ದು, ಷೇರು ತನ್ನ ಇತ್ತೀಚಿನ ಸ್ವಿಂಗ್ ಲೋ 235.65 ರಿಂದ ಶೇ. 10ರಷ್ಟು ಏರಿಕೆಯಾಗಿದೆ. ಹೀಗಾಗಿ, ಬೆಲೆ ರಚನೆಯು ಬುಲಿಶ್ ಆಗಿ ಕಾಣುತ್ತದೆ.
Vijaya Karnataka Web MHRIL


14 ಅವಧಿಯ ದೈನಂದಿನ ಆರ್‌ಎಸ್‌ಐ (57.53) ಷೇರಿನ ಉತ್ತಮ ಶಕ್ತಿಯನ್ನು ತೋರಿಸುತ್ತದೆ ಮತ್ತು ಮೇಲ್ಮುಖವಾಗಿ ಬೆರಳು ತೋರಿಸುತ್ತಿದೆ. ದೈನಂದಿನ ಎಂಎಸಿಡಿ ಲೈನ್ ಕೆಲವು ದಿನಗಳ ಹಿಂದೆ ಬುಲಿಶ್ ಕ್ರಾಸ್‌ಒವರ್ ಅನ್ನು ನೀಡಿದೆ ಮತ್ತು ಉತ್ತಮ ಅಪ್‌ಮೋವ್ ಅನ್ನು ಪ್ರದರ್ಶಿಸುತ್ತಿದೆ. ಆನ್ ಬ್ಯಾಲೆನ್ಸ್ ವಾಲ್ಯೂಮ್ ಹೆಚ್ಚುತ್ತಿದ್ದು, ವಾಲ್ಯೂಮ್‌ ದೃಷ್ಟಿಕೋನದಿಂದ ಷೇರಿನ ಶಕ್ತಿಯನ್ನು ಸೂಚಿಸುತ್ತದೆ. ಕೆಎಸ್‌ಟಿ ಮತ್ತು ಟಿಎಸ್‌ಐ ಈ ಷೇರಿನ ಬಗ್ಗೆ ಬುಲಿಶ್ ನೋಟವನ್ನು ಹೊಂದಿವೆ. ಇದಲ್ಲದೆ ಇದು ಎಲ್ಲಾ ಪ್ರಮುಖ ಚಲಿಸುವ ಸರಾಸರಿಗಳಿಗಿಂತ ಹೆಚ್ಚಿನ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಷೇರು ಅದರ 200-ಡಿಎಂಎಗಿಂತ ಸುಮಾರು ಶೇ. 14ರಷ್ಟು ಏರಿಕೆ ಕಂಡಿದ್ದು, ಎಲ್ಲಾ ಚಲಿಸುವ ಸರಾಸರಿಗಳು ಬುಲಿಶ್‌ನೆಸ್ ಅನ್ನು ಸೂಚಿಸುತ್ತಿವೆ.

ವರ್ಷದ ಆರಂಭದಿಂದ ಇಲ್ಲಿಯವರೆಗಿನ ಆಧಾರದ ಮೇಲೆ ಷೇರು ಹೂಡಿಕೆದಾರರಿಗೆ ಶೇ. 34ಕ್ಕಿಂತ ಹೆಚ್ಚು ಆದಾಯವನ್ನು ನೀಡಿದೆ. ಮತ್ತು ವಿಶಾಲವಾದ ಸೂಚ್ಯಂಕಗಳನ್ನು ಭಾರಿ ಅಂತರದಿಂದ ಮೀರಿಸಿದೆ. ಷೇರಿನ ಬುಲಿಶ್‌ನೆಸ್ ಅನ್ನು ಪರಿಗಣಿಸಿ, ಇದು ಮುಂಬರುವ ದಿನಗಳಲ್ಲಿ ಹೆಚ್ಚಿನ ವಹಿವಾಟು ನಡೆಸುವ ನಿರೀಕ್ಷೆಯಿದೆ ಮತ್ತು 260 ರೂ. ಮಟ್ಟವನ್ನು ಪರೀಕ್ಷಿಸಿ, ನಂತರದ ಸಮಯದಲ್ಲಿ 265 ರೂ. ಮಟ್ಟವನ್ನೂ ಪರೀಕ್ಷಿಸಬಹುದು. ಇಂತಹ ಅಸ್ಥಿರ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ಸ್ವಿಂಗ್ ಟ್ರೇಡಿಂಗ್‌ಗೆ ಇದು ಉತ್ತಮ ಅವಕಾಶವನ್ನು ಒದಗಿಸುತ್ತದೆ ಮತ್ತು ತಾಂತ್ರಿಕ ವಿಶ್ಲೇಷಣೆಯ ಪ್ರಕಾರ ಈ ಷೇರಿನಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು.

ಈ ಲೇಖನವನ್ನು ಭಾರತದ ನಂ.1 ಹೂಡಿಕೆ ನಿಯತಕಾಲಿಕ 'ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್'ನಿಂದ ನಡೆಸಲಾಗುತ್ತಿದೆ. ಲಾಭದಾಯಕ ಷೇರುಗಳ ಬಗ್ಗೆ ನಿಯಮಿತವಾಗಿ ಮಾಹಿತಿ ಮತ್ತು ಶಿಫಾರಸುಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡುವ ಮೂಲಕ ಸೇರಿಕೊಳ್ಳಿ.

Disclaimer: This above is third-party content and TIL hereby disclaims any and all warranties, express or implied, relating to the same. TIL does not guarantee, vouch for or endorse any of the above content or its accuracy nor is responsible for it in any manner whatsoever. The content does not constitute any investment advice or solicitation of any kind. Users are advised to check with certified experts before taking any investment decision and take all steps necessary to ascertain that any information and content provided is correct, updated and verified.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ