ಆ್ಯಪ್ನಗರ

ಬುಧವಾರದಂದು ಈ ಷೇರುಗಳು ಭಾರೀ ಜಿಗಿತ ಕಾಣಬಹುದು! ಇವುಗಳ ಮೇಲೆ ಕಣ್ಣಿಡಿ

ಮಂಗಳವಾರದ ವಹಿವಾಟಿನಲ್ಲಿ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಡಾ. ರೆಡ್ಡೀಸ್ ಲ್ಯಾಬೊರೇಟರಿ ಮತ್ತು ನೆಸ್ಲೆ ಇಂಡಿಯಾ ಷೇರುಗಳು ನಿಫ್ಟಿ 50ಯಲ್ಲಿ ಲಾಭ ಗಳಿಸಿದವು. ನಿಫ್ಟಿ 50 ಸೂಚ್ಯಂಕವು 195 ಅಂಕಗಳ ಕುಸಿತದೊಂದಿಗೆ 18,113.05 ಕ್ಕೆ ವಹಿವಾಟು ಮುಗಿಸಿತು.

DSIJ 18 Jan 2022, 5:23 pm
ಮುಂಬಯಿ: ಮಂಗಳವಾರದ ವಹಿವಾಟಿನಲ್ಲಿ ಭಾರತೀಯ ಸೂಚ್ಯಂಕಗಳು ಕೆಂಪು ಮಾರ್ಕ್‌ನಲ್ಲಿ ವಹಿವಾಟು ನಡೆಸುತ್ತಿದ್ದು, ಕುಸಿತದೊಂದಿಗೆ ವಹಿವಾಟು ಮುಗಿಸಿದವು. ಬಿಎಸ್‌ಇ ಸೆನ್ಸೆಕ್ಸ್ 554 ಪಾಯಿಂಟ್‌ಗಳ ಕುಸಿತದೊಂದಿಗೆ 60,754.86 ಕ್ಕೆ ಅಂತ್ಯಗೊಂಡಿತು. ನಿಫ್ಟಿ 50 ಸೂಚ್ಯಂಕ 195 ಪಾಯಿಂಟ್‌ಗಳ ಕುಸಿತದೊಂದಿಗೆ 18,113.05 ಕ್ಕೆ ಕೊನೆಗೊಂಡಿತು. ಬಿಎಸ್‌ಇ ಮಿಡ್‌ಕ್ಯಾಪ್ 574 ಪಾಯಿಂಟ್‌ಗಳ ಕುಸಿತದೊಂದಿಗೆ 25,569.85 ಕ್ಕೆ ಕೊನೆಗೊಂಡರೆ, ಬಿಎಸ್‌ಇ ಸ್ಮಾಲ್‌ಕ್ಯಾಪ್ 597 ಪಾಯಿಂಟ್‌ಗಳ ಇಳಿಕೆಯೊಂದಿಗೆ 30,543.09 ಕ್ಕೆ ತಲುಪಿದೆ. ಅದರೆ, ಈ ಷೇರುಗಳು ಬುಧವಾರ ಜಿಗಿತ ಕಾಣುವ ಎಲ್ಲ ಸಾಧ್ಯತೆಗಳಿವೆ.
Vijaya Karnataka Web bullvsbear-1


ಮಾಸ್ಟೆಕ್ ಲಿಮಿಟೆಡ್ (Mastek Limited)
ಮಾಸ್ಟೆಕ್ ಲಿಮಿಟೆಡ್ ಕಂಪನಿಯು ಯುರೋಪ್‌ಗೆ ಪ್ರವೇಶಿಸುವುದಾಗಿ ಮತ್ತು ರೊಮೇನಿಯಾದಲ್ಲಿ ಒಂದು ಕೇಂದ್ರ ತೆರೆಯುವುದಾಗಿ ಘೋಷಿಸಿತು. ಎವಲ್ಯೂಷನರಿ ಸಿಸ್ಟಮ್ಸ್ BV ಆಂಸ್ಟರ್‌ಡ್ಯಾಮ್- ಕಂಪನಿಯು ರೊಮೇನಿಯಾದ ಬುಕುರೆಟಿಯಲ್ಲಿ ಸುಕುರ್ಸಾಲಾ ಬುಕುರೆಟಿ ಎಂಬ ಹೆಸರಿನಲ್ಲಿ ಹೊಸ ಕಚೇರಿ ತೆರೆಯಿತು. ಕ್ಲೌಡ್ ಟ್ರಾನ್ಸ್‌ಫಾರ್ಮೇಷನ್‌ ತಜ್ಞರು, ವ್ಯಾಪಾರ ವಿಶ್ಲೇಷಕರು ಮತ್ತು ಡಿಜಿಟಲ್ ಸಲಹೆಗಾರರನ್ನು ಒಳಗೊಂಡಂತೆ ತನ್ನ ಹೊಸ ಕಚೇರಿಗೆ ನುರಿತ ಪ್ರತಿಭೆಗಳನ್ನು ಬಳಸಿಕೊಳ್ಳಲು ಮಾಸ್ಟೆಕ್ ಯೋಜಿಸಿದೆ. ಮಾಸ್ಟೆಕ್ ಜಾಗತಿಕ ಡಿಜಿಟಲ್ ಇಂಜಿನಿಯರಿಂಗ್ ಮತ್ತು ಕ್ಲೌಡ್ ಟ್ರಾನ್ಸ್‌ಫಾರ್ಮೇಶನ್ ಸ್ಪೆಷಲಿಸ್ಟ್ ಆಗಿದ್ದು, ಆರೋಗ್ಯ ಮತ್ತು ಜೀವ ವಿಜ್ಞಾನ, ಚಿಲ್ಲರೆ ವ್ಯಾಪಾರ, ಉತ್ಪಾದನೆ, ಹಣಕಾಸು ಸೇವೆಗಳು, ಸರ್ಕಾರ/ಸಾರ್ವಜನಿಕ ವಲಯಗಳು ಮತ್ತು ಹೆಚ್ಚಿನವುಗಳಲ್ಲಿ ಗ್ರಾಹಕರಿಗೆ ನವೀನ ಪರಿಹಾರಗಳು ಮತ್ತು ವ್ಯಾಪಾರ ಫಲಿತಾಂಶಗಳನ್ನು ಒದಗಿಸುತ್ತದೆ.

ಸ್ಟ್ರೈಡ್ಸ್ ಫಾರ್ಮಾ ಸೈನ್ಸ್ ಲಿಮಿಟೆಡ್ (Strides Pharma Science Limited)
ಸ್ಟ್ರೈಡ್ಸ್ 'ಒಸೆಲ್ಟಾಮಿವಿರ್ ಫಾಸ್ಫೇಟ್‌' Oseltamivir Phosphate)ನ ಓರಲ್ ಸಸ್ಪೆನ್ಷನ್‌ಗಾಗಿ ಅಮೆರಿಕದ USFDAಯಿಂದ ಅನುಮೋದನೆ ಪಡೆದುಕೊಂಡಿದೆ. ಸ್ಟ್ರೈಡ್ಸ್ ಫಾರ್ಮಾ ಸೈನ್ಸ್ ಲಿಮಿಟೆಡ್ (ಸ್ಟ್ರೈಡ್ಸ್) ಇಂದು ತನ್ನ ಸ್ಟೆಪ್-ಡೌನ್ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಸ್ಟ್ರೈಡ್ಸ್ ಫಾರ್ಮಾ ಗ್ಲೋಬಲ್, ಸಿಂಗಾಪುರ ಇದರ ಉತ್ಪನ್ನವಾದ ಒಸೆಲ್ಟಾಮಿವಿರ್ ಫಾಸ್ಫೇಟ್ ಫಾರ್ ಓರಲ್ ಸಸ್ಪೆನ್ಷನ್‌, 6 mg/mLಗೆ ಯುನೈಟೆಡ್ ಸ್ಟೇಟ್ಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (USFDA) ಅನುಮೋದನೆ ನೀಡಿರುವುದಾಗಿ ಘೋಷಿಸಿದೆ.

ಇಂದು ಹೆಚ್ಚಳ ಕಂಡ ಷೇರುಗಳು
ಇಂದಿನ ವಹಿವಾಟಿನಲ್ಲಿ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಡಾ. ರೆಡ್ಡೀಸ್ ಲ್ಯಾಬೊರೇಟರಿ ಮತ್ತು ನೆಸ್ಲೆ ಇಂಡಿಯಾ ನಿಫ್ಟಿ 50 ನಲ್ಲಿ ಲಾಭ ಗಳಿಸಿದವು. ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ, ಟಿನ್‌ಪ್ಲೇಟ್ ಕಂಪನಿ ಆಫ್ ಇಂಡಿಯಾ, ಕಲ್ಪತರು ಪವರ್ ಟ್ರಾನ್ಸ್‌ಮಿಷನ್, ಗುಜರಾತ್ ಅಂಬುಜಾ ಎಕ್ಸ್‌ಪೋರ್ಟ್ಸ್, ಕಾನ್ಫಿಡೆನ್ಸ್ ಪೆಟ್ರೋಲಿಯಂ ಇಂಡಿಯಾ ಮತ್ತು ಸೊಮಾನಿ ಸೆರಾಮಿಕ್ಸ್ ಷೇರುಗಳು ಶೇ.4 ಕ್ಕಿಂತ ಹೆಚ್ಚು ಏರಿಕೆ ಕಂಡವು.

ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ. ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು.

Disclaimer:This above is third party content and TIL hereby disclaims any and all warranties, express or implied, relating to the same. TIL does not guarantee, vouch for or endorse any of the above content or its accuracy nor is responsible for it in any manner whatsoever. The content does not constitute any investment advice or solicitation of any kind. Users are advised to check with certified experts before taking any investment decision and take all steps necessary to ascertain that any information and content provided is correct, updated and verified.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ