ಆ್ಯಪ್ನಗರ

ಚಕ್ರಬಡ್ಡಿ ಮನ್ನಾ: ಕೇಂದ್ರದಿಂದ ಹೆಚ್ಚಿನ ದಾಖಲೆ ಕೇಳಿದ ಸುಪ್ರೀಂ, ಮತ್ತೆ ವಾರದ ಗಡುವು!

ಆರು ತಿಂಗಳ ಮೊರಾಟೋರಿಯಂ ಅವಧಿಯಲ್ಲಿ 2 ಕೋಟಿ ರೂ.ವರೆಗಿನ ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ ಕುರಿತಂತೆ, ಕೇಂದ್ರ ಹಾಗೂ ಆರ್‌ಬಿಐ ಉತ್ತರ ಅಸಮರ್ಪಕ ಎಂದಿರುವ ಸುಪ್ರೀಂಕೋರ್ಟ್, ಈ ಕುರಿತು ಹೆಚ್ಚಿನ ದಾಖಲೆಗಳನ್ನು ಸಲ್ಲಿಸಲು ಒಂದು ವಾರದ ಗಡುವು ವಿಧಿಸಿ ವಿಚಾರಣೆಯನ್ನು ಅ.13ಕ್ಕೆ ಮುಂದೂಡಿದೆ.

Vijaya Karnataka Web 5 Oct 2020, 1:48 pm
ಹೊಸದಿಲ್ಲಿ: ಆರು ತಿಂಗಳ ಮೊರಾಟೋರಿಯಂ ಅವಧಿಯಲ್ಲಿ 2 ಕೋಟಿ ರೂ.ವರೆಗಿನ ಸಾಲದ ಮೇಲಿನ ಚಕ್ರಬಡ್ಡಿಯನ್ನು (ಇಎಂಐ ಮುಂದೂಡಿಕೆ ಅವಧಿಯ ಮಾಸಿಕ ಕಂತು ಹಾಗೂ ಬಡ್ಡಿಯ ಮೇಲಿನ ಬಡ್ಡಿ) ಮನ್ನಾ ಮಾಡಲು ಸಿದ್ಧವಿರುವುದಾಗಿ ಹೇಳಿದ್ದ ಕೇಂದ್ರ ಸರ್ಕಾರದ ಉತ್ತರವನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿಲ್ಲ.
Vijaya Karnataka Web supreme court
ಸಂಗ್ರಹ ಚಿತ್ರ


ಈ ಕುರಿತು ತಾನು ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್(RBI) ಸ್ಪಷ್ಟ ಉತ್ತರವನ್ನು ನೀಡಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಉತ್ತರ ಸಮರ್ಪಕವಾಗಿಲ್ಲ ಎಂದಿರುವ ನ್ಯಾಯಪೀಠ, ಈ ಕುರಿತು ಹೆಚ್ಚಿನ ದಾಖಲೆಗಳನ್ನು ಸಲ್ಲಿಸಲು ಒಂದು ವಾರದ ಗಡುವು ವಿಧಿಸಿದೆ.

ಸಾಲಗಾರರಿಗೆ ಕೇಂದ್ರದಿಂದ ಬಿಗ್‌ ರಿಲೀಫ್‌, 2 ಕೋಟಿ ರೂ.ವರೆಗಿನ ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ!

ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ ಕುರಿತಂತೆ ಸೂಕ್ತ ದಾಖಲೆಗಳೊಂದಿಗೆ ಉತ್ತರ ಸಲ್ಲಿಸುವಂತೆ ಕೇಂದ್ರೆ ಮತ್ತು ಆರ್‌ಬಿಐಗೆ ಆದೇಶ ನೀಡಿರುವ ಸುಪ್ರೀಂಕೋರ್ಟ್, ವಿಚಾರಣೆಯನ್ನು ಇದೆ ಅ.13ಕ್ಕೆ ಮುಂದೂಡಿದೆ.


ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ಗಡುವಿನ ಹಿಂದಿನ ದಿನ ಕೇಂದ್ರ ಸರ್ಕಾರ ತನ್ನ ಉತ್ತರವನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ದಾಖಲೆಗಳ ಪರಾಮರ್ಶೆಗೆ ಸಮಯಾಕಾಶವೇ ಸಿಕ್ಕಿಲ್ಲ ಎಂದು ಕಪಿಲ್ ಸಿಬಲ್ ವಾದಿಸಿದರು.

ಅಲ್ಲದೇ ತನ್ನ ಉತ್ತರದಲ್ಲಿ ಕೇಂದ್ರ ಸರ್ಕಾರ ರಿಯಲ್ ಎಸ್ಟೇಟ್ ಕುರಿತು ಯಾವುದೇ ಮಾಹಿತಿಯನ್ನು ಉಲ್ಲೇಖಿಸಿಲ್ಲ. ಹೀಗಾಗಿ ಕೇಂದ್ರದ ಉತ್ತರವನ್ನು ಅಸಮರ್ಪಕ ಎಂದು ಪರಿಗಣಿಸಬೇಕೆಂದು ಹಿರಿಯು ವಕೀಲ ಸಿ. ಆರ್ಯಮಾ ಸುಂದರಮ್ ಮನವಿ ಮಾಡಿದರು.

ಬಡ್ಡಿ ಮನ್ನಾ ವಿಷಯದಲ್ಲಿ ಶೀಘ್ರ ನಿರ್ಧಾರ, ಮೊರಾಟೋರಿಯಂ ಪಡೆದವರಿಗೆ ಸಿಗುತ್ತಾ ರಿಲೀಫ್‌?

ಈ ಹಿನ್ನೆಲೆಯಲ್ಲಿ ಸಮರ್ಪಕ ಉತ್ತರ ಬಯಸಿ ಮತ್ತೆ ಒಂದು ವಾರಗಳ ಗಡುವು ನೀಡಲು ಸುಪ್ರೀಂಕೋರ್ಟ್ ನಿರ್ಧರಿಸಿದ್ದು, ಈ ಕುರಿತಾದ ವಿಚಾರಣೆಯನ್ನು ಅ.13ರಂದು ನಡೆಸುವುದಾಗಿ ಸ್ಪಷ್ಟಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ