ಆ್ಯಪ್ನಗರ

ಗಗನಕ್ಕೇರಿದ ತರಕಾರಿ ಬೆಲೆ, ಟೊಮೆಟೊ ಕೆಜಿಗೆ 100 ರೂ ಏರುವ ಸಾಧ್ಯತೆ...!

ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 100 ರೂಗೆ ತಲುಪುವ ಸಾಧ್ಯತೆಗಳಿವೆಯೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

TIMESOFINDIA.COM 11 Jan 2019, 3:03 pm
ಬೆಂಗಳೂರು: ನಗರದ ನಿವಾಸಿಗಳು ವರ್ಷದ ಮೊದಲ ಹಬ್ಬ ಸಂಕ್ರಮಣವನ್ನೆದುರಿಸುವ ಸಿದ್ಧತೆಯಲ್ಲಿದ್ದರೆ, ತರಕಾರಿ ಬೆಲೆ ಗಗನಕ್ಕೇರಿ ಜನರ ಸಂಭ್ರಮಕ್ಕೆ ತಣ್ಣೀರೆರಚುತ್ತಿದೆ.
Vijaya Karnataka Web Tomato


ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 100 ರೂಗೆ ತಲುಪುವ ಸಾಧ್ಯತೆಗಳಿವೆಯೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಕೆಲವು ದಿನಗಳ ಹಿಂದೆ ಕೆಜಿಗೆ 25 ರಿಂದ 30 ರೂಪಾಯಿ ದರವಿದ್ದ ಟೊಮೆಟೊ ಸದ್ಯ ಕೆಜಿಗೆ 60 ರೂಪಾಯಿಗೆ ಏರಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಬರಗಾಲವಿರುವ ಹಿನ್ನೆಲೆಯಲ್ಲಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಟೊಮೆಟೊಗಳ ಕೊರತೆಯಿದೆ. ಹೀಗಾಗಿ ರಾಜ್ಯದಲ್ಲಿ ಟೊಮೆಟೊ ಬೆಲೆ ವಿಪರೀತ ಏರಿಕೆ ಕಂಡಿದೆ. ಕೊರತೆ ಇದೆ ರೀತಿಯಲ್ಲಿ ಮುಂದುವರಿದರೆ ಕೆಜಿಗೆ 100 ರೂಪಾಯಿಗೆ ಏರಿಕೆಯಾಗಬಹುದೆಂದು ಹಾಪ್‌ಕಾಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಡಿಮೆ ತಾಪಮಾನ ಮತ್ತು ನೀರಿನ ಕೊರತೆಯಿಂದ ಅಲ್ಪಾವಧಿ ಬೆಳೆಗಳಾಗಿರುವ ಇತರ ತರಕಾರಿಗಳ ಉತ್ಪಾದನೆ ಕೂಡ ಕಡಿಮೆಯಾಗಿದೆ. ಬದನೆಕಾಯಿ, ಬೀನ್ಸ್, ಗಜ್ಜರಿ, ಬೆಂಡೆಕಾಯಿ ಬೆಲೆಗಳು ಸಹ ಏರಿಕೆಯಾಗಿವೆ ಎಂದು ಅವರು ಹೇಳಿದ್ದಾರೆ.

ಉತ್ಪಾದನೆ ಕುಸಿತ

ನಗರಕ್ಕೆ ನಿಯಮಿತವಾಗಿ ತರಕಾರಿ ಪೂರೈಸುವ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಇತರ ಜಿಲ್ಲೆಗಳಲ್ಲಿ ಈ ಋತುವಿನಲ್ಲಿ ಉತ್ಪಾದನೆ ಕುಸಿದಿದೆ ಎನ್ನುತ್ತಾರೆ ಕೋಲಾರದ ರೈತ ಪ್ರಮೋದ್ ಪಿ.

"ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ ರೈತರು ಈಗ ತರಕಾರಿಗಳನ್ನು ಬೆಳೆಸಲು ಆರಂಭಿಸಿದ್ದಾರೆ. ಆದರೆ ಇಳುವರಿ ದೊರೆತು ಬೆಂಗಳೂರಿನ ಮಾರುಕಟ್ಟೆಗೆ ಬರತು 1 ರಿಂದ 3 ತಿಂಗಳಾಗಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ