ಆ್ಯಪ್ನಗರ

ಚೆಕ್‌ಬೌನ್ಸ್: ಸಂಸದ ಶ್ರೀರಾಮುಲು ಬಂಧನಕ್ಕೆ ವಾರಂಟ್

ಚೆಕ್‌ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ಬಳ್ಳಾರಿ ಸಂಸದ ಶ್ರೀರಾಮುಲುಗೆ ನಗರದ 13ನೇ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.

ವಿಕ ಸುದ್ದಿಲೋಕ 5 Mar 2016, 4:00 am
ಬೆಂಗಳೂರು: ಚೆಕ್‌ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ಬಳ್ಳಾರಿ ಸಂಸದ ಶ್ರೀರಾಮುಲುಗೆ ನಗರದ 13ನೇ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.
Vijaya Karnataka Web cheque bounce arrest warrant to shriramulu
ಚೆಕ್‌ಬೌನ್ಸ್: ಸಂಸದ ಶ್ರೀರಾಮುಲು ಬಂಧನಕ್ಕೆ ವಾರಂಟ್


ನ್ಯಾಯಾಧೀಶರಾದ ಸಿ.ಜೆ.ವಿಶಾಲಾಕ್ಷಿ ಅವರು ಶುಕ್ರವಾರ ಚೆಕ್‌ಬೌನ್ಸ್ ಪ್ರಕರಣದ ವಿಚಾರಣೆ ನಡೆಸಿದರು. ಈ ವೇಳೆ ನ್ಯಾಯಾಲಯಕ್ಕೆ ಗೈರು ಹಾಜರಾಗಿರುವ ಶ್ರೀರಾಮುಲು ಅವರನ್ನು ಖುದ್ದಾಗಿ ಮಾ.22ರಂದು ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶ ನೀಡಿದರು.

ಟಿಕೆಟ್ ಕೊಡಿಸುವುದಾಗಿ ವಂಚನೆ

‘‘2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತಮಗೆ ಬಳ್ಳಾರಿ ಅಥವಾ ರಾಯಚೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಮಾತು ಕೊಟ್ಟು 2.96 ಕೋಟಿ ರೂ. ಪಡೆದಿದ್ದರು. ಆದರೆ, ಕೊಟ್ಟ ಮಾತಿನಂತೆ ಟಿಕೆಟ್ ಕೊಡಿಸಲಿಲ್ಲ. ಕೊನೆಗೆ ಹಣವನ್ನೂ ವಾಪಸ್ ಕೊಡಲಿಲ್ಲ . ಹಣ ವಾಪಸ್ ನೀಡುವಂತೆ ಕೇಳಿದಾಗ ಚೆಕ್‌ಗಳನ್ನು ನೀಡಿದ್ದರು. ಆದರೆ, ಅವರು ನೀಡಿದ ಚೆಕ್‌ಗಳು ಬೌನ್ಸ್ ಆಗಿವೆ,’’ ಎಂದು ಮೈಸೂರಿನ ಎಲ್. ಸೋಮಶೇಖರ್ ಆರೋಪಿಸಿದ್ದರು. ಈ ಸಂಬಂಧ ಸೋಮಶೇಖರ್ ಕಳೆದ ಜೂನ್ 19ರಂದು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ