ಆ್ಯಪ್ನಗರ

ನಗರ ಪೊಲೀಸ್‌ ಆಯುಕ್ತರ ಹಿಂದಿ ಟ್ವೀಟ್‌ ಡಿಲೀಟ್‌ !

ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌.ಎಸ್‌. ಮೇಘರಿಕ್‌ ಅವರ ಹಿಂದಿ ಟ್ವೀಟ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಅದನ್ನು ಡಿಲೀಟ್‌ ಮಾಡಲಾಗಿದೆ.

ವಿಕ ಸುದ್ದಿಲೋಕ 16 Aug 2016, 4:00 am

ವಿಕಫಲಶ್ರುತಿ

Vijaya Karnataka Web city police commissioner hindi delete tweet
ನಗರ ಪೊಲೀಸ್‌ ಆಯುಕ್ತರ ಹಿಂದಿ ಟ್ವೀಟ್‌ ಡಿಲೀಟ್‌ !


ಬೆಂಗಳೂರು: ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌.ಎಸ್‌. ಮೇಘರಿಕ್‌ ಅವರ ಹಿಂದಿ ಟ್ವೀಟ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಅದನ್ನು ಡಿಲೀಟ್‌ ಮಾಡಲಾಗಿದೆ.

ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಸಂಬಂಧ ಹಿಂದಿ ಭಾಷೆ ಬಳಸಿ ನಗರ ಪೊಲೀಸ್‌ ಆಯುಕ್ತರ ಅಧಿಕೃತ ಟ್ವಿಟರ್‌ ಖಾತೆಯಿಂದ ಸಂದೇಶ ಹಾಕಿದ್ದರ ಬಗ್ಗೆ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ 'ವಿಕ'ದಲ್ಲಿ ಸೋಮವಾರ ವಿಶೇಷ ವರದಿ ಪ್ರಕಟಿಸಲಾಗಿದೆ. ಈ ಮಧ್ಯೆ ಹಿಂದಿ ಭಾಷೆಯ ಟ್ವೀಟ್‌ ಅಳಿಸಿ ಹಾಕಲಾಗಿದೆ. ಹಾಗೆಯೇ ಅಚ್ಚ ಕನ್ನಡದಲ್ಲಿ ಸ್ವಾತಂತ್ರ್ಯೋತ್ಸವದ ಶುಭಾಶಯವನ್ನು ಈ ಖಾತೆಯ ಮೂಲಕ ಕೋರಿರುವುದು ಗಮನಕ್ಕೆ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ