Please enable javascript.‘ಕ್ರೀಡೆ ವಿಕಸನದ ಮಾರ್ಗವಾಗಬೇಕು’ - Sport has to be an evolution of the way ' - Vijay Karnataka

‘ಕ್ರೀಡೆ ವಿಕಸನದ ಮಾರ್ಗವಾಗಬೇಕು’

ವಿಕ ಸುದ್ದಿಲೋಕ 21 Sep 2015, 7:50 am
Subscribe

ಸಂಘ ಸಂಸ್ಥೆಗಳು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚು ಆರೋಗ್ಯಕರ ಎಂದು ಮಾಜಿ ಶಾಸಕ ಸಿರಾಜ್ ಶೇಖ್ ಅಭಿಪ್ರಾಯಪಟ್ಟರು.

sport has to be an evolution of the way
‘ಕ್ರೀಡೆ ವಿಕಸನದ ಮಾರ್ಗವಾಗಬೇಕು’
ಹಗರಿಬೊಮ್ಮನಹಳ್ಳಿ; ಸಂಘ ಸಂಸ್ಥೆಗಳು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚು ಆರೋಗ್ಯಕರ ಎಂದು ಮಾಜಿ ಶಾಸಕ ಸಿರಾಜ್ ಶೇಖ್ ಅಭಿಪ್ರಾಯಪಟ್ಟರು.

ತಾಲೂಕಿನ ಸೀಗೇನಹಳ್ಳಿಯಲ್ಲಿ ವಿನಾಯಕ ಗೆಳೆಯರ ಬಳಗದಿಂದ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಶನಿವಾರ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಸೌಲಭ್ಯಗಳ ಕೊರತೆಯ ನಡುವೆ ಹೊಸ ಪ್ರತಿಭೆಗಳು ಹೊರಬರುತ್ತಿರುವುದು ಸ್ವಾಗತಾರ್ಹ. ಕ್ರೀಡೆ ಕೇವಲ ಹಬ್ಬದ ಚಟುವಟಿಕೆಯಾಗದೆ ದೈಹಿಕ ಮತ್ತು ಮಾನಸಿಕ ವಿಕಸನದ ನಿತ್ಯದ ಮಾರ್ಗವಾಗಬೇಕಿದೆ ಎಂದರು. ಡಿಸಿಸಿ ಅಧ್ಯಕ್ಷ ಬಿ.ವಿ.ಶಿವಣ್ಣ ಮಾತನಾಡಿದರು. ಜಿ.ಪಂ.ಮಾಜಿ ಸದಸ್ಯರಾದ ಹೆಗ್ಡಾಳ್ ರಾಮಣ್ಣ, ಸೋಮಲಿಂಗಪ್ಪ, ಸೋಮಪ್ಪ ನಾಯ್ಕ, ಗ್ರಾ.ಪಂ.ಮಾಜಿ ಸದಸ್ಯ ಸತ್ಯನಾರಾಯಣ, ಮುಖಂಡರಾದ ಹೊಳಗುಂದಿ ಹನುಮಜ್ಜ, ಬಸವರಾಜ, ಜಂದಿಸಾಬ್, ರಾಜಾಸಾಬ್, ಬಳಗದ ಕನಕಮ್ಮನವರ ದೇವರೆಡ್ಡಿ, ಎಸ್.ರಾಜು, ಕೊಳ್ಳಿ ಗಿರೀಶ ಇತರರಿದ್ದರು. ಬಳಗದ ಅಧ್ಯಕ್ಷ ಹಿರೇಗೌಡರ ವೀರೇಶ, ಕೆ.ಶಿವಕುಮಾರ ನಿರ್ವಹಿಸಿದರು.

ವಿಜೇತರು: ಪಂದ್ಯಾವಳಿಯಲ್ಲಿ ತಾಲೂಕಿನ ಬಸರಕೋಡು, ಆನಂದೇವನಹಳ್ಳಿ, ಕಡ್ಲಬಾಳು, ತಂಬ್ರಹಳ್ಳಿ ಸೇರಿದಂತೆ ನಾನಾ ಗ್ರಾಮಗಳಿಂದ ಒಟ್ಟು 28 ತಂಡಗಳು ಪಾಲ್ಗೊಂಡಿದ್ದವು. ಬಾಚಿಗೊಂಡನಹಳ್ಳಿಯ 2 ತಂಡಗಳು ವಿಜೇತ ಮತ್ತು ಉಪವಿಜೇತರಾಗಿ ಕ್ರಮವಾಗಿ 5ಸಾವಿರ ಹಾಗೂ 3ಸಾವಿರ ರೂ.ಬಹುಮಾನ ಗಳಿಸಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ