Please enable javascript.ಟಿಸಿಯಲ್ಲಿನ ತಾಮ್ರದ ತಂತಿ ಕಳ್ಳರ ಸೆರೆ - ಟಿಸಿಯಲ್ಲಿನ ತಾಮ್ರದ ತಂತಿ ಕಳ್ಳರ ಸೆರೆ - Vijay Karnataka

ಟಿಸಿಯಲ್ಲಿನ ತಾಮ್ರದ ತಂತಿ ಕಳ್ಳರ ಸೆರೆ

ವಿಕ ಸುದ್ದಿಲೋಕ 21 Oct 2014, 6:36 am
Subscribe

ಯಮಕನಮರಡಿ :ರೈತರ ಹೊಲಗಳಲ್ಲಿನ ಟ್ರಾನ್ಸ್‌ಫಾರ್ಮರ್‌ಗಳಲ್ಲಿದ್ದ ತಾಮ್ರದ ತಂತಿ ಕಳುವು ಮಾಡುತ್ತಿದ್ದ ಆರೋಪಿತರನ್ನು ಹುಕ್ಕೇರಿ ಹಾಗೂ ಯಮಕನಮರಡಿ ಠಾಣೆ ಜಂಟಿ ಪೊಲೀಸ್ ತಂಡ ಬಂಧಿಸಿ ಅಪಾರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಟಿಸಿಯಲ್ಲಿನ ತಾಮ್ರದ ತಂತಿ ಕಳ್ಳರ ಸೆರೆ
ಯಮಕನಮರಡಿ :ರೈತರ ಹೊಲಗಳಲ್ಲಿನ ಟ್ರಾನ್ಸ್‌ಫಾರ್ಮರ್‌ಗಳಲ್ಲಿದ್ದ ತಾಮ್ರದ ತಂತಿ ಕಳುವು ಮಾಡುತ್ತಿದ್ದ ಆರೋಪಿತರನ್ನು ಹುಕ್ಕೇರಿ ಹಾಗೂ ಯಮಕನಮರಡಿ ಠಾಣೆ ಜಂಟಿ ಪೊಲೀಸ್ ತಂಡ ಬಂಧಿಸಿ ಅಪಾರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕ ಸೇರಿದಂತೆ ವಿಶ್ವನಾಥ ಈರಪ್ಪಾ ಹುದಲಿ, ಗಜಾನನ ಸಿದ್ದಪ್ಪಾ ಅಲಕನುರಿ, ಕಾಶಿನಾಥ ಈರಪ್ಪಾ ಗಿಡಮನಿ, ಈರಪ್ಪಾ ಲಗಮಾ ಹುಗ್ಗಾಯಿ ಬಂಧಿತರು. ಇವರೆಲ್ಲ ಮಹಾರಾಷ್ಟ್ರದ ಗಡಹಿಂಗ್ಲಜ ತಾಲೂಕಿನ ಬುಗಡಿಕಟ್ಟಿ ಗ್ರಾಮದವರಾಗಿದ್ದಾರೆ.

ತಾಲೂಕಿನ ವಿವಿಧೆಡೆ ಪದೇಪದೆ ಟಿಸಿಗಳ ತಾಮ್ರದ ತಂತಿಗಳನ್ನು ಕಳುವು ಮಾಡುತ್ತಿದ್ದ ಬಗ್ಗೆ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಅ.15 ರಂದು ಮಧ್ಯರಾತ್ರಿ ಬಡಕುಂದ್ರಿ ಗ್ರಾಮದ ಶ್ರೀ ಹೊಳೆಮ್ಮಾ ದೇವಿಯ ದೇವಸ್ಥಾನದ ಹತ್ತಿರ ಈ ತಂಡದವರು ಕಳೆದ ದ ಟಿಸಿಯಲ್ಲಿನ ತಾಮ್ರದ ತಂತಿ ಕಳುವು ಮಾಡಿ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.

ಹುಕ್ಕೇರಿ ತಾಲೂಕಿನಾದ್ಯಂತ ಒಟ್ಟು 89 ಟಿಸಿಗಳನ್ನು ಕಂಬದ ಮೇಲಿಂದ ಕೆಡವಿ ಅದರಲ್ಲಿದ್ದ ತಾಮ್ರದ ತಂತಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿತರು ನೀಡಿದ ಮಾಹಿತಿಯನ್ನಾಧರಿಸಿ ಕಳ್ಳತನ ಮಾಡಿದ ತಾಮ್ರದ ತಂತಿಯನ್ನು ಸ್ವೀಕರಿಸುತ್ತಿದ್ದ ಸಂಕೇಶ್ವರ ಶಹರದ ಬಾಂಡೆ ವ್ಯಾಪಾರಸ್ಥರಾದ ಕಿಶೋರ ಕುಮಾರ ಜೈನ ಮತ್ತು ಅಶೋಕ ಕುಮಾರ ಜೈನ ಎಂಬುವವರನ್ನು ಸಹ ಬಂಧಿಸಿ ಅವರ ಅಂಗಡಿಯಲ್ಲಿದ್ದ 1.80 ಲಕ್ಷ ರೂ. ಮೌಲ್ಯದ ಒಟ್ಟು 450 ಕೆಜಿ ತಾಮ್ರದ ತಂತಿ, ಅದನ್ನು ಮಾರಾಟ ಮಾಡಿ ಅಡಗಿಸಿಟ್ಟ 19.75 ಲಕ್ಷ ರೂ. ನಗದು, ಕಳ್ಳತನ ಮಾಡಲು ಉಪಯೋಗಿಸುತ್ತಿದ್ದ 4 ಮೋಟಾರ್ ಸೈಕಲ್, 1 ಇಂಡಿಕಾ ಕಾರು ಮತ್ತು ಕಳ್ಳತನ ಮಾಡಿದ ತಾಮ್ರದ ತಂತಿಯನ್ನು ಸಾಗಿಸಲು ಉಪಯೋಗಿಸುತ್ತಿದ್ದ 1 ಮಾರುತಿ ಓಮಿನಿ ಸೇರಿ ಒಟ್ಟೂ 26.5 ಲಕ್ಷ ರೂ. ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹುಕ್ಕೇರಿ ಸಿಪಿಐ ಎಸ್.ಸಿ. ಪಾಟೀಲ ಅವರ ನೇತತ್ವದಲ್ಲಿ ಯಮಕನಮರಡಿ ಪಿಎಸ್‌ಐ ಎಂ.ಬಿ. ಬಿರಾದಾರ, ಸಂಕೇಶ್ವರ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ಶಶಿಕಾಂತ ಕಾಂಬಳೆ ಹಾಗೂ ಹುಕ್ಕೇರಿ ವತ್ತದ ಪೊಲೀಸ್ ಸಿಬ್ಬಂದಿ ಎ.ಎನ್. ಮಸರಗುಪ್ಪಿ, ಎಸ್.ಎಂ. ಚಿಕ್ಕಣ್ಣವರ, ವಿ.ಆರ್. ನಾಯ್ಕ, ಎಲ್.ಎಫ್. ಜಂಬಲವಾಡಿ, ಆರ್.ಪಿ. ಕುಗಟೋಳಿ, ಎಂ.ವೈ. ಅಂತರಗಟ್ಟಿ, ಬಿ.ವಿ. ನೇರಲಿ, ಎಂ.ಎಸ್. ಹಾರೋಗೇರಿ, ಪಿ.ಎಸ್. ಭಜಂತ್ರಿ, ಎಸ್.ಎಂ. ಕನಹಟ್ಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ