Please enable javascript.ಹೂಗಾರ ಮಾದಣ್ಣ,ಆತ್ಮವಿಶ್ವಾಸದ ಜ್ಯೋತಿಯೇ ಹೂಗಾರ ಮಾದಣ್ಣ - the confidence of a hoogaara madanna - Vijay Karnataka

ಆತ್ಮವಿಶ್ವಾಸದ ಜ್ಯೋತಿಯೇ ಹೂಗಾರ ಮಾದಣ್ಣ

Vijaya Karnataka 26 Sep 2018, 5:00 am
Subscribe

ಜನರಿಗೆ ಸಾಮೂಹಿಕ ಅರಿವು ಕೊಡುವ ಕಾರ‍್ಯ ಮಾಡಿದವರು ಶಿವಶರಣರು. ಆತ್ಮವಿಶ್ವಾಸದ ಜ್ಯೋತಿಯೇ ಹೂಗಾರ ಮಾದಣ್ಣ ಎಂದು ಲೇಖಕ ರವೀಶ್‌ ಕ್ಯಾತನಬೀಡು ಅಭಿಪ್ರಾಯಪಟ್ಟರು.

CKM-25aragap1
ಚಿಕ್ಕಮಗಳೂರು : ಜನರಿಗೆ ಸಾಮೂಹಿಕ ಅರಿವು ಕೊಡುವ ಕಾರ‍್ಯ ಮಾಡಿದವರು ಶಿವಶರಣರು. ಆತ್ಮವಿಶ್ವಾಸದ ಜ್ಯೋತಿಯೇ ಹೂಗಾರ ಮಾದಣ್ಣ ಎಂದು ಲೇಖಕ ರವೀಶ್‌ ಕ್ಯಾತನಬೀಡು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಗುರು ಬಸವಾದಿ ಶರಣ ಹೂವಾಡಿಗ ಮಾದಣ್ಣನವರ ಜಯಂತಿ ಆಚರಣಾ ಸಮಿತಿಯಿಂದ ಮಂಗಳವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ಹೂಗಾರ ಮಾದಣ್ಣ ಜಯಂತಿ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಿದರು.

ವ್ಯವಸ್ಥೆ ಜತೆ ದನಿಗೂಡಿಸಲಾಗದೆ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ವಿಚಾರಗಳಿಂದ ದೂರವಿದ್ದು ನೊಂದು ಬೆಂದವರು ಸಮಾಜದಲ್ಲಿದ್ದಾರೆ. ಧಾರ್ಮಿಕ ಪಿತೂರಿ ನಡೆಸಿ ಜನರನ್ನು ಮೌಢ್ಯಕ್ಕೆ ತಳ್ಳುವವರೂ ಇದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಚಿಂತನೆ ಮಾಡಿದ ಬಸವಣ್ಣ 12ನೇ ಶತಮಾನದಲ್ಲಿ ಇದಕ್ಕೊಂದು ಪರಾರ‍ಯಯ ಕಟ್ಟುವ ಕೆಲಸ ಮಾಡಿದರು. ಸಮ ಸಮಾಜದ ಪರಿಕಲ್ಪನೆ ಅವರದ್ದಾಗಿತ್ತು ಎಂದರು.

ಹೂವಾಡಿಗ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಅಶೋಕ್‌ ಆರ್‌.ಹೂಗಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹೂವಾಡಿಗ ಸಮುದಾಯದಲ್ಲಿ 28 ಉಪನಾಮಗಳಿವೆ. ಹೂಗಾರ ಸಮಾಜ ಚಿಕ್ಕದಲ್ಲ. ಎಲ್ಲ ಸಮುದಾಯಗಳಿಗಿಂತ ಉನ್ನತ ಸ್ಥಾನದಲ್ಲಿದೆ. ದೇವರ ತಲೆ ಮೇಲೆ ಕೈಯಿಟ್ಟು ಪೂಜೆ ಮಾಡುವ ಸಮುದಾಯ ನಮ್ಮದು. ಈ ಸಮಾಜ ದೊಡ್ಡ ಮನಸ್ಸು ಹೊಂದಿದೆ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್‌.ಮಹೇಶ್‌, ಪಲ್ಲವಿ ಸಿ.ಟಿ.ರವಿ ಮಾತನಾಡಿದರು. ಎನ್‌.ಟಿ.ರವಿಕುಮಾರ್‌ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಹೂವಾಡಿಗ ಸಂಭದ ಗೌರವಾಧ್ಯಕ್ಷ ಮಾಳಪ್ಪ ಮಾಸ್ತರ್‌ ಅಧ್ಯಕ್ಷತೆ ವಹಿಸಿದ್ದರು.

ನಗರಸಭೆ ಅಧ್ಯಕ್ಷೆ ಶಿಲ್ಪರಾಜಶೇಖರ್‌, ಉಪಾಧ್ಯಕ್ಷ ಡಿ.ಸುಧೀರ್‌, ಸದಸ್ಯ ನಟರಾಜ್‌, ಜಿಲ್ಲಾ ಹೂವಾಡಿಗ ಸಂಘದ ಅಧ್ಯಕ್ಷ ಡಿ.ಜಿ.ಯೋಗೀಶ್‌, ಮುಖಂಡರಾದ ಪಿ.ಸಿ.ರಾಜೇಗೌಡ, ಕೆ.ಟಿ.ರಾಧಾಕೃಷ್ಣ, ಎಚ್‌.ಎಂ.ರೇಣುಕಾರಾಧ್ಯ, ತಾ.ಪಂ. ಸದಸ್ಯೆ ಪುಷ್ಪಸೋಮಶೇಖರ್‌, ಗವಿಸಿದ್ದಪ್ಪ, ಸತೀಶ್‌, ಮೋಹನ್‌ ಮತ್ತಿತರರು ಹಾಜರಿದ್ದರು. ಭಾಗ್ಯಶ್ರೀ ಪ್ರಾರ್ಥಿಸಿ, ಶಿಕ್ಷಕ ನಾಗರಾಜ್‌ ಸ್ವಾಗತಿಸಿದರು. ಜಿಲ್ಲಾ ಹೂವಾಡಿಗ ಸಂಘದ ಪ್ರಧಾನ. ಕಾರ‍್ಯದರ್ಶಿ ಸಿ.ಆರ್‌.ರಘು ವಂದಿಸಿದರು.

-------------------

ಅದ್ಧೂರಿ ಮೆರವಣಿಗೆ

ಹೂಗಾರ ಮಾದಣ್ಣ ಜಯಂತಿ ಅಂಗವಾಗಿ ಜಿಲ್ಲಾ ಹೂವಾಡಿಗ ಸಂಘ ಅದ್ಧೂರಿ ಮೆರವಣಿಗೆ ಆಯೋಜಿಸಿತ್ತು. ತಾಲೂಕು ಕಚೇರಿ ಆವರಣದಿಂದ ಹನುಮಂತಪ್ಪ ಸರ್ಕಲ್‌, ಎಂ.ಜಿ.ರಸ್ತೆ, ನಾಯ್ಡು ರಸ್ತೆ ಮೂಲಕ ಮೆರವಣಿಗೆ ಕುವೆಂಪು ಕಲಾ ಮಂದಿರ ತಲುಪಿತು. ವಿವಿಧ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿದವು. ಹೂಗಾರ ಮಾದಣ್ಣನ ಬೃಹತ್‌ ಭಾವಚಿತ್ರವನ್ನು ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಇತರೆ ವಾಹನಗಳನ್ನೂ ಹೂಗಳಿಂದ ಕಣ್ಮನ ಸೆಳೆಯುವಂತೆ ಅಲಂಕರಿಸಿದ್ದು ವಿಶೇಷವಾಗಿತ್ತು. ಸಮಾರಂಭ ಆಯೋಜಿಸಿದ್ದ ಕುವೆಂಪು ಕಲಾ ಮಂದಿರದ ವೇದಿಕೆಯನ್ನು ಹೂವುಗಳಿಂದ ವಿಶಿಷ್ಟ ರೀತಿಯಲ್ಲಿ ಅಲಂಕರಿಸಿದ್ದು, ಹೂವಾಡಿಗ ಸಮಾಜ ಮಾದಣ್ಣ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿದ್ದು ವಿಶೇಷವಾಗಿತ್ತು. ವೇದಿಕೆ ಕಾರ‍್ಯಕ್ರಮದಲ್ಲಿ ಮಕ್ಕಳು ಸಾಂಸ್ಕೃತಿಕ ಕಾರ‍್ಯಕ್ರಮ ನಡೆಸಿಕೊಟ್ಟರು. ಮಲ್ಲಿಗೆ ಸುಧೀರ್‌ ನಾಡಗೀತೆ ಹಾಡಿದರು.

-----------------
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ